ನವದೆಹಲಿ : ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (electric vehicle) ಟ್ರೆಂಡ್‌  ಶುರುವಾಗಿದೆ. ಅವುಗಳ ಬಳಕೆಯು ಹೆಚ್ಚಿದಂತೆ ಬೇಡಿಕೆಯೂ ಏರುತ್ತಿದೆ.  ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೇವೆಯನ್ನು,  ಹೆಚ್ಚು ಮಿತವ್ಯಯಗೊಳಿಸಲು IIT BHU ನ ಸಂಶೋಧಕರು ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಒಂದು ಗುಂಪು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವ (EV Charging cost) ವೆಚ್ಚವನ್ನು ಅರ್ಧದಷ್ಟು ಕಡಿಮೆ ಮಾಡಿದೆ. ಈ ತಂತ್ರಜ್ಞಾನದ ಸಹಾಯದಿಂದ ಕಡಿಮೆ ವೆಚ್ಚದ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಬಹುದು.


COMMERCIAL BREAK
SCROLL TO CONTINUE READING

ಎಲೆಕ್ಟ್ರಿಕ್ ವಾಹನಗಳು ಏಕೆ ದುಬಾರಿ?
'ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ (Petrol diesel price) ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. ಮಾಲಿನ್ಯವು ಜನರ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳು (electric vehicle) ಉತ್ತಮ ಆಯ್ಕೆಯಾಗಿದೆ ಎಂದು, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯ ಯೋಜನಾ ತನಿಖಾಧಿಕಾರಿ ಡಾ.ರಾಜೀವ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಆದರೆ ಹೆಚ್ಚಿನ ಪವರ್ ಆಫ್ ಬೋರ್ಡ್ ಚಾರ್ಜಿಂಗ್ (EV Charging) ವ್ಯವಸ್ಥೆಯು ಉತ್ತಮವಾಗಿಲ್ಲ. ಈ ಕಾರಣಕ್ಕಾಗಿಯೇ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳೊಂದಿಗೆ ಆನ್‌ಬೋರ್ಡ್ ಚಾರ್ಜರ್‌ಗಳನ್ನು ನೀಡುತ್ತಿದ್ದಾರೆ. ವಾಹನ ಮಾಲೀಕರು ಔಟ್‌ಲೆಟ್‌ಗಳಿಂದ ಇವಿಗಳನ್ನು ಚಾರ್ಜ್ ಮಾಡಬಹುದು, ಅದಕ್ಕಾಗಿಯೇ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಿದೆ ಎಂದಿದ್ದಾರೆ. 


ಇದನ್ನೂ ಓದಿ :  ABS System: ಅಪಘಾತ ಸಂಭವಿಸಿದಾಗ ಪ್ರಾಣ ಉಳಿಸುತ್ತೆ ABS, ಏನಿದು ABS?


ಹೊಸ ತಂತ್ರಜ್ಞಾನವು ಹೇಗೆ ಪರಿಣಾಮಕಾರಿಯಾಗಿದೆ?
ಹೊಸ ತಂತ್ರಜ್ಞಾನವು ಆನ್‌ಬೋರ್ಡ್ ಚಾರ್ಜರ್‌ನ ವೆಚ್ಚವನ್ನು ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ಪ್ರಾಧ್ಯಾಪಕರು ವಿವರಿಸಿದ್ದಾರೆ. ಇದು ನೇರವಾಗಿ ಎಲೆಕ್ಟ್ರಿಕ್ ವಾಹನದ ಬೆಲೆಯಲ್ಲಿ (electric vehicle price) ವ್ಯತ್ಯಾಸವನ್ನು ಉಂಟು ಮಾಡುತ್ತದೆ. ಈ ತಂತ್ರಜ್ಞಾನವು ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ದೊಡ್ಡ ಪರಿಣಾಮವನ್ನು ಬೀರುತ್ತದೆ. ಈ ತಂತ್ರಜ್ಞಾನವನ್ನು ತಯಾರಿಸಲು ಆಯಾ ವಲಯದ ಅನೇಕ ಪರಿಣಿತರೂ ಕೊಡುಗೆ ನೀಡಿದ್ದಾರೆ. ಈ ವಿಶಿಷ್ಟ ತಂತ್ರಜ್ಞಾನವು ಸರ್ಕಾರದ ಇ-ಮೊಬಿಲಿಟಿ ಮಿಷನ್‌ನ ಹಾದಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದೆ.


ಇದನ್ನೂ ಓದಿ : Gmail account ಲಾಕ್ ಆಗಿದ್ದರೆ ಈ Tricks ಬಳಸುವ ಮೂಲಕ ಮತ್ತೆ ಲಾಗಿನ್ ಮಾಡಿಕೊಳ್ಳಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.