Summer Tips - ಕರೆಂಟ್ ಇಲ್ಲದೆಯೇ ಬಿಂದಾಸ್ ಚಲಾಯಿಸಿ ಎಸಿ-ಕೂಲರ್, ಈ ಕೆಲಸ ಮಾಡಿ ಸಾಕು
How to Buy Best Inverter for Home: ಈ ಬೇಸಿಗೆ ಕಾಲದಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಇರುವ ಕಾರಣ ಹಲವು ಬಾರಿ ಕರೆಂಟ್ ಕೈಕೊಡುತ್ತದೆ, ಇದರಿಂದ ಮನೆಯಲ್ಲಿ ಬಿಸಿಲಿನ ಬೆಗೆಯಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಆದರೆ, ಈ ಒಂದು ಕೆಲಸ ಮಾಡುವ ಮೂಲಕ ನೀವು ಮನೆಯಲ್ಲಿ ಕರೆಂಟ್ ಇಲ್ಲದೆಯೂ ಕೂಡ ಫ್ಯಾನ್, ಎಸಿ ಹಾಗೂ ಕೂಲರ್ ಅನ್ನು ಚಲಾಯಿಸಬಹುದು.
Summer Tips How to Buy the Right Inverter: ಬೇಸಿಗೆ ಕಾಲ ಈಗಾಗಲೇ ಬಂದಾಗಿದೆ, ಹೆಚ್ಚುತ್ತಿರುವ ತಾಪಮಾನಕ್ಕೆ ಜನ ಕಂಗೆಟ್ಟು ಹೋಗಿದ್ದಾರೆ. ಬೇಸಿಗೆಯ ಜೊತೆಗೆ ಈ ಸೀಸನ್‌ನಲ್ಲಿ ವಿದ್ಯುತ್ ಕಡಿತವೂ ಸಾಮಾನ್ಯ ಸಮಸ್ಯೆಯಾಗಿರುತ್ತದೆ. ದೇಶದ ಹಲವು ನಗರಗಳಲ್ಲಿ ಗಂಟೆಗಟ್ಟಲೆ ಕರೆಂಟ್ ಇರುವುದಿಲ್ಲ, ಇದರಿಂದ ಜನರು ಮನೆಯಂಗಳದಲ್ಲಿ ಬಿಸಿಲಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ವಿದ್ಯುತ್ ಇಲ್ಲದಿದ್ದರೂ ನಿಮ್ಮ ಮನೆಯಲ್ಲಿ ಫ್ಯಾನ್-ಕೂಲರ್ ಅನ್ನು ಚಲಾಯಿಸಲು ನೀವು ಬಯಸುತ್ತಿದ್ದರೆ, ಅದಕ್ಕಾಗಿ ನೀವು ಸರಿಯಾದ ಇನ್ವರ್ಟರ್ ಅನ್ನು ಖರೀದಿಸಬೇಕು. ಇನ್ವರ್ಟರ್ ಖರೀದಿಸುವಾಗ ನೀವು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಇನ್ವರ್ಟರ್ ಖರೀದಿಸುವ ಮೊದಲು ಈ ಕೆಲಸ ಮಾಡಿ
ಇನ್ವರ್ಟರ್ ಖರೀದಿಸುವ ಮೊದಲು, ನಿಮಗೆ ಎಷ್ಟು ವ್ಯಾಟ್ ಇನ್ವರ್ಟರ್ ಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ, ನೀವು ಇನ್ವರ್ಟರ್ಗೆ ಸಂಪರ್ಕಗೊಳ್ಳುವ ಸಾಧನಗಳ ಪಟ್ಟಿಯನ್ನು ತಯಾರಿಸಬೇಕು, ಅಂದರೆ, ನೀವು ಇನ್ವರ್ಟರ್ ಸಹಾಯದಿಂದ ಚಲಾಯಿಸಲು ಬಯಸುವ ಒಟ್ಟು ಉಪಕರಣಗಳಿಗೆ ನಿಮಗೆ ಎಷ್ಟು ವ್ಯಾಟ್ ಅಗತ್ಯವಿದೆ ಎಂಬುದನ್ನು ಮೊದಲು ನೀವು ತಿಳಿದುಕೊಳ್ಳಬೇಕು. ನಿಮ್ಮ ಸಾಧನಗಳು ಎಷ್ಟು ಶಕ್ತಿಯನ್ನು ಬಳಸುತ್ತವೆ ಎಂಬುದರ ಪ್ರಕಾರ, ಇನ್ವರ್ಟರ್‌ನ ಸಾಮರ್ಥ್ಯವನ್ನು ನಿರ್ಧರಿಸಿ ಮತ್ತು ನಂತರ ನಿಮಗೆ ಅಗತ್ಯವಿರುವ ಸಾಮರ್ಥ್ಯಕ್ಕಿಂತ 100W ಹೆಚ್ಚು ಇರುವ ಇನ್ವರ್ಟರ್‌ಗೆ ಖರೀದಿಸಿ.
ಇನ್ವರ್ಟರ್ ಖರೀದಿಸುವಾಗ ಈ ವಿಷಯಗಳನ್ನು ಗಮನದಲ್ಲಿಡಿ
ಸರಿಯಾದ ಇನ್ವರ್ಟರ್ ಅನ್ನು ಆಯ್ಕೆ ಮಾಡಲು, V/A (ವೋಲ್ಟ್ಸ್/ಆಂಪಿಯರ್) ರೇಟಿಂಗ್ ಅನ್ನು ನೀವು ಪರಿಶೀಲಿಸಬೇಕು. ಇದನ್ನು ಮಾಡಲು ಕೆಲವು ಹಂತಗಳನ್ನು ಅನುಸರಿಸಬೇಕು. ಇನ್ವರ್ಟರ್ನ ವಿದ್ಯುತ್ ಅಂಶವು ಸಾಮಾನ್ಯವಾಗಿ ಇನ್ವರ್ಟರ್ ಕಾರ್ಯನಿರ್ವಹಿಸುವ ದಕ್ಷತೆಯಾಗಿದೆ. ಒಂದು ಇನ್ವರ್ಟರ್ ಎಂದಿಗೂ ಶೇ. 100 ರಷ್ಟು ದಕ್ಷತೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ, ಬದಲಿಗೆ, ಅದು ಶೇ.50-80 ರಷ್ಟು ದಕ್ಷತೆಯ ನಡುವೆ ಕಾರ್ಯನಿರ್ವಹಿಸುತ್ತದೆ. ಅದರ ದಕ್ಷತೆಯು ಶೇ.70 ಆಗಿದ್ದರೆ, ಅದರ ವಿದ್ಯುತ್ ಶಕ್ತಿಯ ಅಂಶವು 0.7 ಆಗಿರುತ್ತದೆ, ಇದು ಶೇ. 80 ರಷ್ಟಾಗಿದ್ದರೆ, ವಿದ್ಯುದಂಶ 0.8 ಆಗಿರುತ್ತದೆ. ಒಮ್ಮೆ ನೀವು ವಿದ್ಯುತ್ ಅಂಶವನ್ನು ತಿಳಿದುಕೊಂಡರೆ, ನಿಮಗೆ ವೋಲ್ಟ್ ಆಂಪಿಯರ್ ರೇಟಿಂಗ್ ಅನ್ನು ಪರಿಶೀಲಿಸುವುದು ತುಂಬಾ ಸುಲಭವಾಗಲಿದೆ.
ಇದನ್ನೂ ಓದಿ-Mobile Data Speed Trick: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಕೊಡ ಇಂಟರ್ನೆಟ್ ವೇಗ ಕಡಿಮೆ ಇದೆಯೇ, ಈ ರೀತಿ ಹೆಚ್ಚಿಸಿ
ಇತರ ಜೊತೆಗೆ, ಒಮ್ಮೆ ನೀವು ಇನ್ವರ್ಟರ್ ಅನ್ನು ಆಯ್ಕೆ ಮಾಡಿದ ನಂತರ, ಅದು ಯಾವ ಬ್ಯಾಟರಿಯನ್ನು ಹೊಂದಿದೆ ಎಂಬುದನ್ನು ಸಹ ಗಮನಿಸಿ. ಏಕೆಂದರೆ ಉತ್ತಮ ಇನ್ವರ್ಟರ್‌ನಲ್ಲಿ ಉತ್ತಮ ಬ್ಯಾಟರಿಯನ್ನು ಹೊಂದಿರುವುದು ತುಂಬಾ ಮುಖ್ಯ, ಇಲ್ಲದಿದ್ದರೆ ನೀವು ದೀರ್ಘ ವಿದ್ಯುತ್ ಕಡಿತದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ-Omicron ಹೊಸ ರೂಪಾಂತರಿಗಳು ಸಂಕಷ್ಟ ಹೆಚ್ಚಿಸಲಿವೆ, ಅಪಾಯಕಾರಿ ಸಾಬೀತಾಗಬಹುದು 4ನೆ ಅಲೆ
ಈ ರೀತಿಯಾಗಿ, ಸರಿಯಾದ ಇನ್ವರ್ಟರ್ ಅನ್ನು ಆಯ್ಕೆ ಮಾಡುವ ಮೂಲಕ, ನೀವು ವಿದ್ಯುತ್ ಇಲ್ಲದೆಯೂ ಫ್ಯಾನ್ ಮತ್ತು ಕೂಲರ್ಗಳನ್ನು ಬಳಸಬಹುದು ಮತ್ತು ಬೇಸಿಗೆಯನ್ನು ಹಾಯಾಗಿ ಕಳೆಯಬಹುದು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.