Tallest Tree Ever Found In Amazon: ಭೂಮಿಯ ಶ್ವಾಸಕೋಶ ಎಂದು ಕರೆಯಲ್ಪಡುವ ಅಮೆಜಾನ್‌ನ ದಟ್ಟವಾದ ಕಾಡುಗಳಲ್ಲಿ ಅತ್ಯಂತ ಎತ್ತರದ ಮರ ಯಾವುದು ಎಂಬುದನ್ನು ಅಂತಿಮವಾಗಿ ಗುರುತಿಸಲಾಗಿದೆ. ವಿಶ್ವದ ಈ ಎತ್ತರದ ಮರವನ್ನು ಕಂಡುಹಿಡಿಯುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಇದಕ್ಕಾಗಿ, ಮೂರು ವರ್ಷಗಳ ಸಿದ್ಧತೆ ಮತ್ತು ಅನೇಕ ಅಭಿಯಾನಗಳನ್ನು ನಡೆಸಲಾಗಿದೆ, ಇದಾದ ಬಳಿಕ ಎಲ್ಲೋ ಒಂದು ಕಡೆ  ವಿಜ್ಞಾನಿಗಳ ತಂಡವು 25-ಅಂತಸ್ತಿನ ಕಟ್ಟಡದಷ್ಟು ಎತ್ತರದ ಮರವನ್ನು ಪತ್ತೆಹಚ್ಚಲು ಯಶಸ್ವಿಯಾಗಿದೆ..


COMMERCIAL BREAK
SCROLL TO CONTINUE READING

ವಯಸ್ಸು 400-600 ವರ್ಷಗಳ ನಡುವೆ
ತಮ್ಮ ಸಂಶೋಧನೆಯ ಸಮಯದಲ್ಲಿ, ತಂಡವು ಈ ಬೃಹದಾಕಾರದ ಮರದ ಕೆಳಗೆ ಬಿದ್ದಿರುವ ಎಲೆಗಳು, ಮಣ್ಣು ಮತ್ತು ಇತರ ಮಾದರಿಗಳನ್ನು ಸಂಗ್ರಹಿಸಿದೆ. ಅದರ ನಂತರ ನಡೆಸಲಾಗಿರುವ ಸಂಶೋಧನೆಯು ಈ ಮರದ ಕನಿಷ್ಠ 400 ರಿಂದ 600 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಿದೆ. ಈ ಮರವು 88.5 ಮೀ (290 ಅಡಿ) ಎತ್ತರವಾಗಿದೆ ಮತ್ತು ಅದರ ಗಾತ್ರ ಸುಮಾರು 9.9 ಮೀ (32 ಅಡಿ) ಆಗಿದೆ.


ಇದನ್ನೂ ಓದಿ-Bumper Offer: ಕೇವಲ 550 ರೂ.ಗೆ ಖದೀದಿಸಿ Redmi 9i Sport ಸ್ಮಾರ್ಟ್‌ಫೋನ್


ಅದನ್ನು ಹೇಗೆ ಗುರುತಿಸಲಾಗಿದೆ?
ಅತಿದೊಡ್ಡ ಮರವನ್ನು ಗುರುತಿಸಿದ ನಂತರ, ದೀರ್ಘಕಾಲದವರೆಗೆ ಅದರ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಇದೀಗ ಈ ಪ್ರದೇಶದಲ್ಲಿ ಏಕೆ ದೊಡ್ಡ ಮತ್ತು ಎತ್ತರದ ಮರಗಳು ಇವೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅದೇ ವೇಳೆ, ಇತ್ತೀಚಿನ ಸಂಶೋಧನೆಯಲ್ಲಿ, ಈ ಮರಗಳು ಒಟ್ಟು ಎಷ್ಟು ಇಂಗಾಲವನ್ನು ಸಂಗ್ರಹಿಸುತ್ತವೆ ಎಂಬುದನ್ನು ಸಹ ಖಚಿತಪಡಿಸಲಾಗುತ್ತಿದೆ. ಈ ಎತ್ತರದ ಮರದ ಬಗ್ಗೆ ಹೇಳುವುದಾದರೆ, ಇದು ಉತ್ತರ ಬ್ರೆಜಿಲ್‌ನ ಇರತಾಪುರ್ ನದಿಯ ಸಮೀಪವಿರುವ ನೇಚರ್ ರಿಸರ್ವ್‌ನಲ್ಲಿದೆ. ಏಂಜೆಲಿಮ್ ವರ್ಮೆಲೊ ಎಂಬ ಹೆಸರಿನ ಈ ಮರದ ವೈಜ್ಞಾನಿಕ ಹೆಸರು ಡಿನಿಜಿಯಾ ಎಕ್ಸೆಲ್ಸಾ. ಇದು ಅಮೆಜಾನ್‌ನಲ್ಲಿ ಕಂಡುಬರುವ ಅತಿದೊಡ್ಡ ಮರವಾಗಿದೆ. 3D ಮ್ಯಾಪಿಂಗ್ ಯೋಜನೆಯ ಭಾಗವಾಗಿ 2019 ರಲ್ಲಿ ಉಪಗ್ರಹ ಚಿತ್ರಗಳಲ್ಲಿ ಸಂಶೋಧಕರು ಈ ದೈತ್ಯ ಮರವನ್ನು ಮೊದಲು ಗುರುತಿಸಿದ್ದಾರೆ.


ಇದನ್ನೂ ಓದಿ-Tata Tiago EV: ದೇಶದ ಅತಿ ಅಗ್ಗದ ಎಲೆಕ್ಟ್ರಿಕ್ ಕಾರು: ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು 391 ಕಿಲೋ ಮೀಟರ್ ಓಡುತ್ತೆ


ಈ ಜನರನ್ನು 19 ಜನರ ತಂಡದಲ್ಲಿ ಸೇರಿಸಲಾಗಿದೆ
ಹಲವಾರು ಹಂತಗಳ ನಂತರ ಈ ಅಭಿಯಾನ ಯಶಸ್ವಿಯಾಗಿದೆ. ಈ ಯೋಜನೆಯು ಸುಮಾರು ಮೂರು ವರ್ಷಗಳನ್ನು ಆರಂಭಗೊಂಡಿದೆ. ವಾಸ್ತವವಾಗಿ, 19 ಜನರ ಈ ವಿಶೇಷ ತಂಡಕ್ಕೆ ಕೆಲವು ಶಿಕ್ಷಣ ತಜ್ಞರು, ಪರಿಸರವಾದಿಗಳು ಮತ್ತು ಸ್ಥಳೀಯ ಮಾರ್ಗದರ್ಶಕರನ್ನು ಸೇರಿಸಿದ ನಂತರ ಈ ಪಯಣ ಆರಂಭಗೊಂಡಿದೆ. ಈ ಸಮಯದಲ್ಲಿ, ಸಂಶೋಧಕರು ದೋಣಿಯಲ್ಲಿ 250 ಕಿಮೀ ಪ್ರಯಾಣಿಸಿದ್ದಾರೆ ಮತ್ತು ದಟ್ಟ ಅರಣ್ಯ ಪ್ರದೇಶದಲ್ಲಿ ಅವರು 20 ಕಿ.ಮೀ ವರೆಗೆ ಸಂಚರಿಸಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ