ISRO Update On Chandrayan 3 Launch: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ 3 ರ ಉಡಾವಣೆ ದಿನಾಂಕವನ್ನು ಪ್ರಕಟಿಸಿದೆ. ಟ್ವೀಟ್ ಮಾಡುವ ಮೂಲಕ ಇಸ್ರೋ ಈ ಮಾಹಿತಿಯನ್ನು ಹಂಚಿಕೊಂಡಿದೆ. ಜುಲೈ 14 ರಂದು ಮಧ್ಯಾಹ್ನ ಚಂದ್ರಯಾನ 3 ಉಡಾವಣೆಯಾಗಲಿದೆ ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಲಾಗಿದೆ.

COMMERCIAL BREAK
SCROLL TO CONTINUE READING

ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬರೆದುಕೊಂಡಿರುವ ಇಸ್ರೋ, “ಚಂದ್ರಯಾನ 3 ರ ಉಡಾವಣೆಯ ಘೋಷಣೆ. LVM3-M4/ಚಂದ್ರಯಾನ-3 ಮಿಷನ್‌ನ ಉಡಾವಣೆಯನ್ನು ಇದೀಗ ನಿಗದಿಪಡಿಸಲಾಗಿದೆ. ಇದನ್ನು ಶ್ರೀಹರಿಕೋಟಾದ SDSC ಯಿಂದ 14 ಜುಲೈ 2023 ರಂದು ಮಧ್ಯಾಹ್ನ 2.35 ಕ್ಕೆ ಉಡಾವಣೆ ಮಾಡಲಾಗುವುದು. ಇದೇ ವೇಳೆ, ಚಂದ್ರಯಾನ 3 ಮಿಷನ್ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಸೋಮನಾಥ್ ಎಸ್, "ಇಸ್ರೋ ಆಗಸ್ಟ್ 23 ಅಥವಾ ಆಗಸ್ಟ್ 24 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಪ್ರಯತ್ನಿಸಲಿದೆ" ಎಂದು ಹೇಳಿದ್ದಾರೆ.


ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬುಧವಾರ ಇಸ್ರೋ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ತನ್ನ ಹೊಸ ಉಡಾವಣಾ ರಾಕೆಟ್ LVM-3 ಗೆ ಸಂಪರ್ಕಿಸಲಾಗಿದೆ ಎಂದು ಹೇಳಿದೆ. ಚಂದ್ರನ ಮೇಲ್ಮೈಯಲ್ಲಿ ಉಪಕರಣಗಳನ್ನು ಸುರಕ್ಷಿತವಾಗಿ ಇಳಿಸಲು ಮತ್ತು ಪರಿಶೋಧನಾ ಚಟುವಟಿಕೆಗಳನ್ನು ನಡೆಸಲು ಚಂದ್ರಯಾನ-2 ರ ನಂತರ ಚಂದ್ರಯಾನ-3 ಅನ್ನು ಈ ತಿಂಗಳು ಉಡಾವಣೆ ಮಾಡಲಾಗುತ್ತಿದೆ.


ಚಂದ್ರಯಾನ 3 ರ ಗುರಿ ಏನು?
ಇನ್ನೂಂದೆಡೆ ಈ ಮಾಹಿತಿ ಪ್ರಕಟಗೊಳ್ಳುವ ಮೊದಲು ಮಾತನಾಡಿದ್ದ ಇಸ್ರೋ ಅಧಿಕಾರಿಯೊಬ್ಬರು, "ಜುಲೈ 13 ರಂದು ಅದನ್ನು ಉಡಾವಣೆ ಮಾಡುವುದು ನಮ್ಮ ಗುರಿಯಾಗಿದೆ." ಚಂದ್ರನ ಭೂಕಂಪಗಳ ಆವರ್ತನ, ಚಂದ್ರನ ಮೇಲ್ಮೈಯಲ್ಲಿರುವ ಪ್ಲಾಸ್ಮಾ ಪರಿಸರ ಮತ್ತು ಲ್ಯಾಂಡಿಂಗ್ ಸೈಟ್ ಬಳಿ ಅಂಶಗಳ ಸಂಯೋಜನೆಯನ್ನು ಅಧ್ಯಯನ ಮಾಡಲು ಉಪಕರಣಗಳನ್ನು ಕಳುಹಿಸಲಾಗುವುದು ಎಂದು ಹೇಳಿದ್ದರು.


ಇದನ್ನೂ ಓದಿ-Tech Tips: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಇಂಟರ್ನೆಟ್ ಸರಿಯಾಗಿ ವರ್ಕ್ ಆಗ್ತಿಲ್ಲವೇ?


ಇಸ್ರೋ ಅಧಿಕಾರಿಗಳ ಪ್ರಕಾರ, ಲ್ಯಾಂಡರ್ ಮತ್ತು ರೋವರ್‌ನಲ್ಲಿ ಅಳವಡಿಸಲಾಗಿರುವ ಈ ವೈಜ್ಞಾನಿಕ ಉಪಕರಣಗಳನ್ನು 'ಚಂದ್ರನ ವಿಜ್ಞಾನ' ಎಂಬ ವಿಷಯದ ಅಡಿಯಲ್ಲಿ ಇರಿಸಲಾಗುವುದು, ಆದರೆ ಚಂದ್ರನ ಕಕ್ಷೆಯಿಂದ ಭೂಮಿಯನ್ನು ಅಧ್ಯಯನ ಮಾಡಲು ಪ್ರಾಯೋಗಿಕ ಸಾಧನಗಳನ್ನು '"ಚಂದ್ರನಿಂದ ವಿಜ್ಞಾನ" ಅಡಿ ಇರಿಸಲಾಗುವುದು ಎಂದಿದ್ದಾರೆ. 


ಇದನ್ನೂ ಓದಿ-Bajaj Triumph Scrambler 400X-Triumph ಸ್ಪೀಡ್ ಮಾರುಕಟ್ಟೆಗೆ ಬಿಡುಗಡೆ, ಬೆಲೆ, ವೈಶಿಷ್ಟ್ಯ ಹಾಗೂ ಮೈಲೆಜ್ ವಿವರ ಇಲ್ಲಿದೆ


ಈ ವರ್ಷದ ಮಾರ್ಚ್‌ನಲ್ಲಿ, ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ತನ್ನ ಅಗತ್ಯ ಪರೀಕ್ಷೆಗಳನ್ನು ಪೂರ್ಣಗೊಳಿಸಿತ್ತು ಮತ್ತು ತ್ತು ಉಡಾವಣೆಯ ಸಮಯದಲ್ಲಿ ಎದುರಾಗುವ ಸಂಭಾವ್ಯ ಅಡೆತಡೆಗಳಲ್ಲಿ ತನ್ನನ್ನು ತಾನು ಸಾಬೀತುಪಡಿಸಿತ್ತು. ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುವ ರೋವರ್ ಅನ್ನು ನಿಯೋಜಿಸಲು ಮತ್ತು ಚಂದ್ರನ ಮೇಲೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯವನ್ನು ಹೊಂದಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.