ಮೊಬೈಲ್ ಡೇಟಾ ವೇಗವಾಗಿ ಖಾಲಿಯಾಗುತ್ತಿದ್ಯಾ? ಚಿಂತೆ ಬಿಟ್ಟು ಈ ಸೆಟ್ಟಿಂಗ್ಸ್ ಆನ್ ಮಾಡಿ.. ಎಷ್ಟೇ ಉಪಯೋಗ ಮಾಡಿದ್ರು ಡೇಟಾ ಮುಗಿಯಲ್ಲ
how to reduce data usage on phone: ಕೆಲವೊಮ್ಮೆ ಮೊಬೈಲ್‌ಗಳಲ್ಲಿ ಡೇಟಾ ಬೇಗನೆ ಖಾಲಿಯಾಗುತ್ತದೆ. ಹೀಗಿರುವಾಗ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸುವುದರಿಂದ ಡೇಟಾ ತ್ವರಿತವಾಗಿ ಖಾಲಿಯಾಗುವುದನ್ನು ತಡೆಯುತ್ತದೆ.
Tech Tips: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಪ್ರತಿಯೊಬ್ಬರ ಮೊಬೈಲ್‌ನಲ್ಲಿ ಇಂಟರ್‌ನೆಟ್ ಸೌಲಭ್ಯ ಇದ್ದೇ ಇರುತ್ತದೆ. ಟೆಲಿಕಾಂ ಕಂಪನಿಗಳು ಡೇಟಾ ಪ್ಯಾಕೇಜ್‌ಗಳ ಮೇಲೆ ಹಲವು ಕೊಡುಗೆಗಳನ್ನು ನೀಡುತ್ತಿವೆ. ಅದರಲ್ಲೂ ಡೇಟಾ ಬಳಕೆ ಕೂಡ ವೇಗವಾಗಿ ಹೆಚ್ಚುತ್ತಿದೆ. ಮೊಬೈಲ್‌ನಲ್ಲಿ ಡೇಟಾ ಇಲ್ಲ ಎಂಬುದಿಲ್ಲ. ಆದರೆ ಕೆಲವೊಮ್ಮೆ ಮೊಬೈಲ್‌ಗಳಲ್ಲಿ ಡೇಟಾ ಬೇಗನೆ ಖಾಲಿಯಾಗುತ್ತದೆ. ಹೀಗಿರುವಾಗ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸುವುದರಿಂದ ಡೇಟಾ ತ್ವರಿತವಾಗಿ ಖಾಲಿಯಾಗುವುದನ್ನು ತಡೆಯುತ್ತದೆ.
ಇದನ್ನೂ ಓದಿ: Dolo 650: ಸಣ್ಣಪುಟ್ಟ ಕಾಯಿಲೆಗಳಿಗೆ ʼಡೋಲೋ 650ʼ ಮಾತ್ರೆಗಳನ್ನ ನುಂಗುವ ಮುನ್ನ ಎಚ್ಚರ.. ಎಚ್ಚರ..!
ಡೇಟಾ ಸೇವರ್: ಫೋನ್‌ನಲ್ಲಿ ಡೇಟಾವನ್ನು ನಿಯಂತ್ರಿಸಲು, ಫೋನ್ ಬ್ರೌಸರ್ ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ಡೇಟಾ ಸೇವರ್ ಅನ್ನು ಆನ್ ಮಾಡಿ ಅಥವಾ ಡೇಟಾ ಮೋಡ್ ಅನ್ನು ಸೇವ್ ಅಂತ ಕ್ಲಿಕ್ ಮಾಡಿ.
ಇಮೇಜ್ ಸೆಟ್ಟಿಂಗ್ ಆಫ್: ಇದರ ನಂತರ ಬ್ರೌಸರ್ ಸೆಟ್ಟಿಂಗ್‌ಗಳಲ್ಲಿ ಪಿಕ್ಚರ್ ಇನ್ ಪಿಕ್ಚರ್ ಆಯ್ಕೆಯನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದ ವೆಬ್ ಪುಟದ ಫೋಟೋವನ್ನು ಡೌನ್‌ಲೋಡ್ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಡೇಟಾ ಬಳಕೆ ಕಡಿಮೆಯಾಗಲಿದೆ. ಬ್ರೌಸರ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಬ್ಯಾಕ್‌ಗ್ರೌಂಡ್ ಡೇಟಾ ಆಯ್ಕೆಯನ್ನು ಆಫ್ ಮಾಡಿ.
ಡೇಟಾ ನಿಯಂತ್ರಣ: ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಬಳಕೆಯನ್ನು ನಿಯಂತ್ರಿಸಲು ಫೋನ್ ಸೆಟ್ಟಿಂಗ್‌ಗೆ ಹೋಗಿ. ಇದರ ನಂತರ ನೆಟ್‌ವರ್ಕ್, ಇಂಟರ್ನೆಟ್ ಆಯ್ಕೆಗೆ ಹೋಗಿ. ಅಲ್ಲಿ ಮೊಬೈಲ್ ನೆಟ್‌ವರ್ಕ್‌ಗೆ ಹೋಗಿ, ಕಡಿಮೆ ಡೇಟಾ ಬಳಕೆಯ ಆಯ್ಕೆಯನ್ನು ಆರಿಸಿ. ಇದು ಡೇಟಾ ಬಳಕೆಯನ್ನು ಕಡಿಮೆ ಮಾಡುತ್ತದೆ.
ಅಟೋ ಪ್ಲೇ ವೀಡಿಯೊವನ್ನು ಆಫ್ ಮಾಡಿ: ಮೊದಲು ಫೋನ್ ಸೆಟ್ಟಿಂಗ್‌ಗೆ ಹೋಗಿ, ಅಲ್ಲಿ ಡೇಟಾ ಸೇವರ್ ಮೋಡ್ ಅನ್ನು ಸರ್ಚ್ ಮಾಡಿ. ಇದರ ನಂತರ ಅಟೋ ಪ್ಲೇ ವೀಡಿಯೊ ಆಯ್ಕೆಯನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದ ಫೋನ್‌ನಲ್ಲಿ ವೀಡಿಯೊವನ್ನು ಸ್ಕ್ರೋಲ್ ಮಾಡುವಾಗ ವೀಡಿಯೊ ಪ್ಲೇ ಆಗುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ