Tech Tips: ಹಾಳಾದ ಇಲೆಕ್ಟ್ರಾನಿಕ್ ಉಪಕರಣವನ್ನು ಮನೆಯಿಂದಲೇ ಸರಿಪಡಿಸಬೇಕೆ? ಇಲ್ಲಿ ಸಿಗುತ್ತೆ ಮಾಹಿತಿ
Tech Tip: ಹಲವು ಬಾರಿ ಸಾಕಷ್ಟು ಹಣ ಖರ್ಚು ಮಾಡಿದರೂ ಕೂಡ ಹಾನಿಗೊಳಗಾದ ನಮ್ಮ ನೆಚ್ಚಿನ ಮನೆಯ ಎಲೆಕ್ಟ್ರಾನಿಕ್ ವಸ್ತು ಸರಿಯಾಗಿ ದುರುಸ್ತಿಯಾಗುವುದಿಲ್ಲ ಮತ್ತು ಜನರು ಅದನ್ನು ದೋಷಯುಕ್ತವೆಂದು ಪರಿಗಣಿಸಿ ಎಸೆಯುತ್ತಾರೆ. ನೀವೂ ಕೂಡ ಅಂತಹ ವಸ್ತುವನ್ನು ಎಸೆಯುತ್ತಿದ್ದರೆ, ಹಾಗೆ ಮಾಡಬೇಡಿ. ಏಕೆಂದರೆ ಈ ಸಮಸ್ಯೆಗೆ ಪರಿಹಾರವನ್ನು ಇಂದು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ. (Technology News In Kannada)
ನವದೆಹಲಿ: ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗುವುದು ಸಾಮಾನ್ಯ. ಮನೆಯಲ್ಲಿ ಜನರು ಬಳಸುವ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗುವುದನ್ನು ನೀವು ಹಲವು ಬಾರಿ ನೋಡಿರಬಹುದು. ಇವುಗಳಲ್ಲಿ ಸ್ಮಾರ್ಟ್‌ಫೋನ್, ಸೀಲಿಂಗ್ ಫ್ಯಾನ್, ಮಿಕ್ಸರ್ ಗ್ರೈಂಡರ್ ಸೇರಿದಂತೆ ಹಲವು ವಸ್ತುಗಳು ಶಾಮೀಲಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ದುರಸ್ತಿ ಮಾಡಲು ಜನರು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಇದು ಜನರ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಬಾರಿ ಜನರು ತಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ ಮಾಡಲು ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡಬೇಕಾಗುತ್ತದೆ. (Technology News In Kannada)
ದುಡ್ಡು ಖರ್ಚು ಮಾಡಿದರೂ ರಿಪೇರಿ ಆಗದೇ ಇರುವ ವಸ್ತುವನ್ನು ಜನರು ಕೆಟ್ಟಿದೆ ಎಂದು ಪರಿಗಣಿಸಿ ಬೀಸಾಡುವುದನ್ನು ನೀವು ಹಲವು ಬಾರಿ ನೋಡಿರಬಹುದು. ನೀವು ಅಂತಹ ವಸ್ತುವನ್ನು ಎಸೆಯುತ್ತಿದ್ದರೆ, ಇನ್ಮುಂದೆ ಹಾಗೆ ಮಾಡಬೇಡಿ , ನಿಮ್ಮ ಈ ಸಮಸ್ಯೆಗೆ ನಮ್ಮ ಬಳಿ ಪರಿಹಾರವಿದೆ. ಹಾನಿಗೊಳಗಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಿಪಡಿಸಲು ನಾವು ನಿಮಗೆ ಉತ್ತಮ ಪರಿಹಾರವನ್ನು ಇಂದು ಹೇಳಿಕೊಡುತ್ತಿದ್ದೇವೆ. ಹಾನಿಗೊಳಗಾದ ಎಲೆಕ್ಟ್ರಾನಿಕ್ಸ್ ಅನ್ನು ನೀವು ಹೇಗೆ ಸರಿಪಡಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಈ ವೆಬ್ಸೈಟ್ ಗೆ ಭೇಟಿ ನೀಡಿ
ಜನರು ಎಷ್ಟೇ ದುಬಾರಿ ಎಲೆಕ್ಟ್ರಾನಿಕ್ಸ್ ಖರೀದಿಸಿದರು ಅದು ಒಂದಿಲ್ಲ ಒಂದು ದಿನ ತಾಂತ್ರಿಕ ದೋಷದಿಂದ ಹಾಳಾಗುತ್ತದೆ. ನಂತರ ಅದನ್ನು ಸರಿಪಡಿಸಲು ಸಾಧ್ಯವಾಗದಿರುವುದನ್ನು ನೀವು ಹಲವಾರು ಬಾರಿ ನೋಡಿರಬೇಕು. ಇಂತಹ ಪರಿಸ್ಥಿತಿಯಲ್ಲಿ, ಜನರು ಆ ವಸ್ತುವನ್ನು ಎಸೆಯಲು ಆಣಿಯಾಗುತ್ತಾರೆ. iFixit ಹೆಸರಿನ ವೆಬ್‌ಸೈಟ್ ಕುರಿತು ಇಂದು ನಾವು ನಿಮಗೆ ಹೇಳಲಿದ್ದೇವೆ. ಹಾನಿಗೊಳಗಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಿಪಡಿಸಲು ಈ ವೆಬ್‌ಸೈಟ್ ಹೆಸರುವಾಸಿಯಾಗಿದೆ. ಪ್ರಪಂಚದ ಪ್ರತಿಯೊಂದು ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ ಮಾಡುವುದು ಹೇಗೆ ಎಂಬುದರ ಮಾಹಿತಿ ನಿಮಗೆ ಈ ವೆಬ್ ಸೈಟ್ ನಲ್ಲಿ ಸಿಗುತ್ತದೆ. ಸ್ಮಾರ್ಟ್‌ಫೋನ್‌ಗಳು, ಸೀಲಿಂಗ್ ಫ್ಯಾನ್‌ಗಳು, ಮೊಬೈಲ್ ಚಾರ್ಜರ್‌ಗಳು, ಮಿಕ್ಸರ್ ಗ್ರೈಂಡರ್‌ಗಳು, ಮೈಕ್ರೋವೇವ್‌ಗಳು ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀವು ಮನೆಯಲ್ಲಿಯೇ ದುರಸ್ತಿ ಮಾಡಬಹುದು. ಪ್ರತಿ ಐಟಂ ಅನ್ನು ಸರಿಪಡಿಸಲು ನೀವು ಹಂತ ಹಂತದ ಮಾರ್ಗದರ್ಶಿಯನ್ನು ಇದರಲ್ಲಿ ಪಡೆಯಬಹುದು.
ಇದನ್ನೂ ಓದಿ-Tech Tips: ಫೋನ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಅನಾವಶ್ಯಕ ಜಾಹೀರಾತುಗಳನ್ನು ಈ ರೀತಿ ಶಾಶ್ವತ ನಿಯಂತ್ರಿಸಿ
ಬಳಸುವುದು ಹೇಗೆ?
ನೀವು iFixit ವೆಬ್‌ಸೈಟ್ ಅನ್ನು ತೆರೆದಾಗ, ನೀವು ಮುಖಪುಟ ಪರದೆಯಲ್ಲಿ ನಿಮ್ಮ ವಸ್ತು ಸರಿಪಡಿಸುವ ಆಯ್ಕೆಯನ್ನು ನೋಡಬಹುದು . ಈ ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ, ನೀವು ಅನೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ದುರಸ್ತಿ ಮಾಡುವ ಮಾರ್ಗವನ್ನು ಪಡೆಯುತ್ತೀರಿ. ಅಲ್ಲಿ ನೀವು ಯಾವುದೇ ಉತ್ಪನ್ನವನ್ನು ದುರಸ್ತಿ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ-Samsung Smart TVಗಳಲ್ಲಿ ಇನ್ಮುಂದೆ ಇರಲ್ಲ Google Assistant ವೈಶಿಷ್ಟ್ಯ!
ಇದರ ನಂತರವೂ ನಿಮ್ಮ ಎಲೆಕ್ಟ್ರಾನಿಕ್ಸ್ ಸ್ಥಿರವಾಗಿಲ್ಲದಿದ್ದರೆ ಚಿಂತಿಸಬೇಡಿ. ಈ ವೆಬ್‌ಸೈಟ್‌ನಲ್ಲಿ ಸಮುದಾಯ ಆಯ್ಕೆಯೂ ಲಭ್ಯವಿದೆ. ಇಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ನಿಮ್ಮ ಎಲೆಕ್ಟ್ರಾನಿಕ್ ಐಟಂ ಅನ್ನು ಸಹ ನೀವು ರಿಪೇರಿ ಮಾಡಬಹುದು. ಇಲ್ಲಿ ಯಾರಾದರೊಬ್ಬರು ನಿಮಗೆ ಸಹಾಯ ಮಾಡೇ ಮಾಡುತ್ತಾರೆ. ಆದ್ದರಿಂದ, ನಿಮ್ಮ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಂಕ್ ಎಂದು ಎಸೆಯುವ ಮೊದಲು, ನೀವು ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ನಿಮ್ಮ ಉತ್ಪನ್ನವನ್ನು ಸರಿಪಡಿಸಲು ಇಲ್ಲಿ ನೀವು ಸಹಾಯವನ್ನು ಪಡೆಯಬಹುದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ