Power Consumption Tips: ಬಹುತೇಕ ಮನೆಗಳಲ್ಲಿ ಎಸಿ - ಕೂಲರ್ -ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್ ನಲ್ಲಿ ವಿಪರೀತ ಏರಿಕೆಯಾಗುತ್ತದೆ. ಇನ್ನೊಂದೆಡೆ ಹೆಚ್ಚುವರಿ ಸರಾಸರಿ ಯೂನಿಟ್ ಗಳ ಬಳಕೆಯ ಕಾರಣ ನೀವೂ ಕೂಡ ಗೃಹ ಜ್ಯೋತಿ ಯೋಜನೆಯ ಲಾಭದಿಂದ ವಂಚಿತರಾಗಿದ್ದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಕೆಲ ಮೂಲಭೂತ ಸಲಹೆಗಳನ್ನು ಅನುಸರಿಸಿ ನೀವೂ ಕೂಡ ನಿಮ್ಮ ಮಳೆ ವಿದ್ಯುತ್ ಬಿಲ್ ಅನ್ನು ಶೇ.50 ರಷ್ಟು ಕಡಿಮೆ ಮಾಡಿಕೊಳ್ಳಬಹುದು ಮತ್ತು ಗೃಹ ಜ್ಯೋತಿ ಯೋಜನೆಯ ಲಾಭ ಕೂಡ ಬಡೆಯಬಹುದು. 

COMMERCIAL BREAK
SCROLL TO CONTINUE READING

ಫ್ರಿಡ್ಜ್ ಇಡಲು ಸರಿಯಾದ ಜಾಗ: ನಿಮ್ಮ ಮನೆಯಲ್ಲಿ ಫ್ರಿಡ್ಜ್ ಅನ್ನು ಎಲ್ಲಿ ಮತ್ತು ಹೇಗೆ ಇರಿಸಲಾಗಿದೆ ಎಂಬುದು ನಿಮ್ಮ ವಿದ್ಯುತ್ ಬಿಲ್ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರೆ ನೀವು ನಿಬ್ಬೆರಗಾಗುವಿರಿ. ಮನೆಯಲ್ಲಿ ಗಾಳಿ ಹೆಚ್ಚಾಗಿ ಸುಲಿಯುವ ಜಾಗದಲ್ಲಿ ನೀವು ಫ್ರಿಡ್ಜ್ ಅನ್ನು ಇರಿಸಿದರೆ ಅದು ಉತ್ತಮ ಮತ್ತು ಅದು ಗೋಡೆಯಿಂದ ಕನಿಷ್ಠ 2-ಇಂಚು ದೂರದಲ್ಲಿರಲಿ. ಇದರಿಂದ ಸಾಕಷ್ಟು ವಿದ್ಯುತ್ ಉಳಿತಾಯವನ್ನು ನೀವು ಮಾಡಬಹುದು.

ಸ್ಟ್ಯಾಂಡ್‌ಬೈ ಬಳಕೆಯನ್ನು ಕಡಿಮೆ ಮಾಡಿ: ವಿದ್ಯುತ್ ಉಳಿಸಲು ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ವಿಚ್ ಆಫ್ ಮಾಡುವುದು ಒಳ್ಳೆಯದು. ಆದರೆ, ಅಷ್ಟೇ ಸಾಕಾಗುವುದಿಲ್ಲ. ಸಾಧನದ ಜೊತೆಗೆ ಮುಖ್ಯ ಸ್ವಿಚ್ ಆಫ್ ಆಗದ ಹೊರತು, ಸ್ಟ್ಯಾಂಡ್‌ಬೈ ಪವರ್‌ನ ವೆಚ್ಚವನ್ನು ಭರಿಸಲೇ ಬೇಕಾಗುತ್ತದೆ. ಮುಖ್ಯ ಸ್ವಿಚ್ ಅನ್ನು ಆಫ್ ಮಾಡುವ ಮೂಲಕ, ನೀವು ಸ್ಟ್ಯಾಂಡ್‌ಬೈ ಪವರ್‌ ನಿಂದಾಗುವ ವಿದ್ಯುತ್ ಬಿಲ್‌ನಲ್ಲಿ ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದು.

ಪವರ್ ಸ್ಟ್ರಿಪ್ ಬಳಸಿ: ಪ್ರತಿಯೊಂದು ಸಾಧನವನ್ನು ಪ್ರತ್ಯೇಕ ಸ್ವಿಚ್ ಬೋರ್ಡ್‌ಗೆ ಸಂಪರ್ಕಿಸುವುದರಿಂದ ಸಾಕಷ್ಟು ವಿದ್ಯುತ್ ವ್ಯಯವಾಗುತ್ತದೆ. ನಿಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ನೀವು ಬಯುತ್ತಿದ್ದರೆ. ಎಲ್ಲಾ ಸಾಧನಗಳನ್ನು ಪ್ರವೇಶಿಸಲು ನೀವು ಪವರ್ ಸ್ಟ್ರಿಪ್ ಅಥವಾ ಎಕ್ಸ್‌ಟೆನ್ಶನ್ ಬೋರ್ಡ್ ಅನ್ನು ಸಹ ಬಳಸಬಹುದು. ಇದು ವಿದ್ಯುತ್ ಉಳಿತಾಯದಲ್ಲಿ ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ.


ಇದನ್ನೂ ಓದಿ-ಹತ್ತು ವರ್ಷಗಳ ವಾರಂಟಿ ಹೊಂದಿರುವ ಹೊಸ ಅಗ್ಗದ ಬೈಕ್ ಬಿಡುಗಡೆ ಮಾಡಿದ ಹೋಂಡಾ

ಎಸಿ ಕುರಿತಾದ ಈ ಸಲಹೆಗಳನ್ನು ನೆನಪಿನಲ್ಲಿಡಿ: ಬೇಸಿಗೆಯಲ್ಲಿ ನೀವು ನಿಮ್ಮ ಮನೆಗಾಗಿ ಎಸಿಯನ್ನು ಖರೀದಿಸಿದ್ದರೆ, ಎರಡು ವಿಷಯಗಳನ್ನು ನೆನಪಿನಲ್ಲಿಡಿ; ಮೊದಲಿಗೆ, ಫೈವ್ ಸ್ಟಾರ್ ರೇಟಿಂಗ್‌ನೊಂದಿಗೆ ಇಂಧನ ಉಳಿತಾಯ AC ಖರೀದಿಸಿ ಮತ್ತು ಎರಡನೆಯದಾಗಿ, ವಿಂಡೋದ ಬದಲಿಗೆ ಸ್ಪ್ಲಿಟ್ ಇನ್ವರ್ಟರ್ AC ಅನ್ನು ಬಳಸಿ, ಅದು ಸಾಕಷ್ಟು ಹಣ ಉಳಿತಾಯ ಮಾಡುತ್ತದೆ.  ಅಲ್ಲದೆ, ನೀವು ಎಸಿಯನ್ನು ಚಲಾಯಿಸಿದಾಗ, ತಾಪಮಾನವನ್ನು 24 ನಲ್ಲಿ ಇರಿಸಿ, ಅದು ನಿಮ್ಮ ವಿದ್ಯುತ್ ಬಿಲ್‌ನಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ.


ಇದನ್ನೂ ಓದಿ-365 ದಿನಗಳವರೆಗೆ ನಿತ್ಯ 2 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ ನೀಡುವ ಅತ್ಯಂತ ಅಗ್ಗದ ಮೊಬೈಲ್ ರೀಚಾರ್ಜ್ ಪ್ಲಾನ್ ಇದು!

ಫ್ಯಾನ್ ಅನ್ನು ಆಫ್ ಮಾಡಿ: ಇದು ಕೇಳಲು ತುಂಬಾ ಬೇಸಿಕ್ ಅನಿಸಿದರೂ ಕೂಡ ನಾವು ಅದನ್ನು ಹೆಚ್ಚಾಗಿ ಮಾಡುವುದಿಲ್ಲ. ಮನೆಯಲ್ಲಿ ಯಾರೂ ಹೆಚ್ಚಾಗಿ ಫ್ಯಾನ್ ಬದಲಾಯಿಸುವುದಿಲ್ಲ, ಆದರೆ ಹಳೆಯ ಮಾದರಿಯ ಫ್ಯಾನ್‌ಗಳು 90 ವ್ಯಾಟ್ ವಿದ್ಯುತ್ ಅನ್ನು ಬಳಸುತ್ತಿವೆ ಎಂಬುದು ನಿಮಗೆ ತಿಳಿದಿದೆಯೇ. ಇಂತಹ ಪರಿಸ್ಥಿತಿಯಲ್ಲಿ, ಮೊದಲನೆಯದಾಗಿ ಶಕ್ತಿ ಉಳಿಸುವ ಫ್ಯಾನ್‌ಗಳನ್ನು ಬಳಸಿ ಮತ್ತು ಅಗತ್ಯವಿಲ್ಲದಿದ್ದಾಗ ಅವುಗಳನ್ನು ಆಫ್ ಮಾಡಿ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.