ನಾಳೆ ಲಾಂಚ್ ಆಗಲಿದೆ Tecno Spark 20C ! ಏನಿರಲಿದೆ ಈ ಫೋನಿನ ವೈಶಿಷ್ಟ್ಯ ?
Tecno Spark 20C:ಈ ಸ್ಮಾರ್ಟ್‌ಫೋನ್‌ನಲ್ಲಿ, ಗ್ರಾಹಕರು 16GB RAM, ಸೇರಿದಂತೆ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಇದಲ್ಲದೆ, ಫೋನ್ ಐಫೋನ್‌ನಂತೆ ಡೈನಾಮಿಕ್ ಐಲ್ಯಾಂಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ.
Tecno Spark 20C : Tecno ಬಜೆಟ್ ಶ್ರೇಣಿಯಲ್ಲಿ Tecno Spark 20C ಹೆಸರಿನ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್ ಫೆಬ್ರವರಿ 27 ರಂದು ಅಂದರೆ ನಾಳೆ ಬಿಡುಗಡೆಯಾಗಲಿದೆ.ಈ ಸ್ಮಾರ್ಟ್‌ಫೋನ್‌ನಲ್ಲಿ, ಗ್ರಾಹಕರು 16GB RAM, ಸೇರಿದಂತೆ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.ಇದಲ್ಲದೆ, ಫೋನ್ ಐಫೋನ್‌ನಂತೆ ಡೈನಾಮಿಕ್ ಐಲ್ಯಾಂಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ.
ಡಿಸ್ಪ್ಲೇ ಬಗ್ಗೆ ಮಾಹಿತಿ ಬಹಿರಂಗ :
ಸ್ಪಾರ್ಕ್ 20C ಬಿಡುಗಡೆಗೂ ಮುನ್ನ ಅದರ ಡಿಸ್ಪ್ಲೇಗೆ ಸಂಬಂಧಿಸಿದ ದೊಡ್ಡ ಮಾಹಿತಿ ಹೊರ ಬಿದ್ದಿದೆ.ಕಂಪನಿಯು ತನ್ನ X ಹ್ಯಾಂಡಲ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. ಈ ಫೋನ್‌ನಲ್ಲಿ, ಗ್ರಾಹಕರು 90 Hz ರಿಫ್ರೆಶ್ ರೇಟ್ ನೊಂದಿಗೆ ವಿಭಾಗದ ಅತ್ಯುತ್ತಮ ಡಾಟ್ ಇನ್ ಡಿಸ್‌ಪ್ಲೇಯನ್ನು ಪಡೆಯಲಿದ್ದಾರೆ.
ಇದನ್ನೂ ಓದಿ : UPI ಮೂಲಕ ತಪ್ಪಾದ ಖಾತೆಗೆ ಹಣ ವರ್ಗ ಆಗಿದೆಯೇ? ಹೀಗೆ ಮಾಡಿದರೆ ಹಣ ವಾಪಾಸಾಗುವುದು
ಯುವಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಡಿಸ್ಪ್ಲೇಯನ್ನು ಸಿದ್ಧಪಡಿಸಿದೆ. ಉತ್ತಮ ರಿಫ್ರೆಶ್ ರೇಟ್ ನಿಂದಾಗಿ ಇದು ಸಾಕಷ್ಟು ಮೃದುವಾಗಿರುತ್ತದೆ. ಇದರಿಂದಾಗಿ ಮಲ್ಟಿ ಟಾಸ್ಕಿಂಗ್ ಮಾಡುವಾಗ, ಗೇಮ್ ಆಡುವಾಗ ಅಥವಾ ವೀಡಿಯೊಗಳನ್ನು ಪ್ಲೇ ಮಾಡಿದಾಗ, ಲ್ಯಾಗ್ ಫ್ರೀ ಅನುಭವವಾಗುತ್ತದೆ. ಈ ಡಿಸ್ಪ್ಲೇಯ ಇನ್ನೊಂದು ವಿಶೇಷವೆಂದರೆ ಡೈನಾಮಿಕ್ ಪೋರ್ಟ್.
ಈ ಟೆಕ್ನೋ ಸ್ಮಾರ್ಟ್‌ಫೋನ್‌ನ ಕಂಪನಿಯು ಹಂಚಿಕೊಂಡ ಚಿತ್ರವನ್ನು ನೋಡಿದಾಗ, ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಬಹುದು ಎಂದು ಹೇಳಲಾಗುತ್ತಿದೆ. ಕ್ಯಾಮೆರಾ ಬಂಪ್‌ನಲ್ಲಿ ಫ್ಲ್ಯಾಷ್ ಕೂಡಾ ಇದ್ದ ಹಾಗೆ ತೋರುತ್ತದೆ.ಕಂಪನಿಯು ತನ್ನ ಹಿಂದಿನ ಕ್ಯಾಮೆರಾ ಸೆಟಪ್‌ನಲ್ಲಿ 50-ಮೆಗಾಪಿಕ್ಸೆಲ್ ಪಕ್ಯಾಮರಾ ಸೆಟಪ್ ಈ ವೈಶಿಷ್ಟ್ಯಗಳನ್ನು ಹೊಂದಿರಬಹುದು :್ರೈಮರಿ ಸೆನ್ಸಾರ್ ಸೇರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : TRAI ನ ಮಾಸ್ಟರ್ ಪ್ಲಾನ್: ಅಪರಿಚಿತ ಕರೆಗಳಲ್ಲಿಯೂ ಕರೆ ಮಾಡುವವರ ಹೆಸರು ಗೋಚರಿಸುತ್ತೆ!
ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇರುವ ನಿರೀಕ್ಷೆ :
ಕಂಪನಿಯು ಶೇರ್ ಮಾಡಿದ ಫೋಟೋದಲ್ಲಿ, ಫೋನ್‌ನ ಬದಿಯು ವಾಲ್ಯೂಮ್ ರಾಕರ್ ಜೊತೆಗೆ ಪವರ್ ಬಟನ್ ಅನ್ನು ಹೊಂದಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಂಯೋಜಿಸಬಹುದು ಎನ್ನಲಾಗಿದೆ.
5000 mAh ಬ್ಯಾಟರಿ ಇರಬಹುದು :
ಸ್ಪಾರ್ಕ್ 20C ನಲ್ಲಿ, ಗ್ರಾಹಕರು 5000 mAh ಬ್ಯಾಟರಿ ಮತ್ತು 18w ವೇಗದ ಚಾರ್ಜಿಂಗ್ ಅನ್ನು ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.