ಸರ್ಕಾರದಿಂದ ಬಿಗ್ Digital Strike: ಬರೋಬ್ಬರಿ 1.77 ಕೋಟಿ ಸಿಮ್ ಕಾರ್ಡ್ಸ್ ಬ್ಲಾಕ್..!
Digital Strike: ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ನಕಲಿ ಕರೆಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಬರೋಬ್ಬರಿ 1.77 ಕೋಟಿ ಸಿಮ್ ಕಾರ್ಡ್ಗಳನ್ನು ನಿರ್ಬಂಧಿಸಿದೆ.
Digital Strike: ನಕಲಿ ಕರೆಗಳ ಮೂಲಕ ಜನರನ್ನು ವಂಚಿಸುತ್ತಿರುವ ಸ್ಕ್ಯಾಮರ್ ಗಳ ವಿರುದ್ಧ ಟೆಲಿಕಾಂ ಇಲಾಖೆ ಮತ್ತು ಟ್ರಾಯ್ ಸಮರ ಸಾರಿದ್ದು ಫೇಕ್ ಕಾಲ್ ಗಾಗಿ ಬಳಸುತ್ತಿದ್ದ 1.77 ಕೋಟಿ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಿದ್ದಾರೆ.
ಹೌದು, ದೇಶದ 122 ಕೋಟಿಗೂ ಹೆಚ್ಚು ಟೆಲಿಕಾಂ ಬಳಕೆದಾರರ ರಕ್ಷಣೆಗೆ ಪಣ ತೊತ್ತಿರುವ TRAI ನಕಲಿ ಕರೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ಕಳೆದ ತಿಂಗಳಿನಿಂದ ಹೊಸ ನೀತಿಯನ್ನು ರೂಪಿಸಿದೆ. ಇದರನ್ವಯ ಇದೀಗ ಟೆಲಿಕಾಂ ನಿರ್ವಾಹಕರು ಮಾರ್ಕೆಟಿಂಗ್ ಮತ್ತು ನಕಲಿ ಕರೆಗಳನ್ನು ಸ್ವತಃ ತಾವೇ ಬ್ಲಾಕ್ ಮಾಡಬಹುದಾಗಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ ಇದಕ್ಕಾಗಿ ವೈಟ್‌ಲಿಸ್ಟ್ ಅಗತ್ಯವೂ ಇರುವುದಿಲ್ಲ.
ಇದನ್ನೂ ಓದಿ- ದೈನಂದಿನ ವೆಚ್ಚ 3 ರೂ.ಗಿಂತ ಕಡಿಮೆ ಬೆಲೆಯಲ್ಲಿ 300 ದಿನಗಳ ವ್ಯಾಲಿಡಿಟಿ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್
ಸಂವಹನ ಇಲಾಖೆಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರತಿನಿತ್ಯ ಸುಮಾರು 1.35 ಕೋಟಿ ನಕಲಿ ಕರೆಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಅಷ್ಟೇ ಅಲ್ಲದೆ, ಜನರನ್ನು ವಂಚನೆಯ ಜಾಲದಲ್ಲಿ ಬೀಳಿಸಲು ಯತ್ನಿಸುತ್ತಿದ್ದ ಬರೋಬ್ಬರಿ 1.77 ಕೋಟಿ ಮೊಬೈಲ್ ಸಂಖ್ಯೆಗಳನ್ನು ಕೂಡ ಬ್ಲಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಎಚ್ಚರ..! ಎಚ್ಚರ! UPI Refund ಹೆಸರಿನಲ್ಲಿ ಖಾಲಿಯಾದೀತು ಖಾತೆ..!
ವಂಚನೆ ಕರೆಗಳ ಕುರಿತಂತೆ ಸಾರ್ವಜನಿಕರ ದೂರಿನ ಮೇರೆಗೆ ಕ್ರಮಕೈಗೊಂಡಿರುವ ಇಲಾಖೆ, ಕಳೆದ ನಾಲ್ಕೈದು ತಿಂಗಳಿನಲ್ಲಿ ಬರೋಬ್ಬರಿ 7 ಕೋಟಿ ನಕಲಿ ಕರೆಗಳನ್ನು ಸ್ಥಗಿತಗೊಳಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.