ನವದೆಹಲಿ : Telemarketing calls - ಅನಿರೀಕ್ಷಿತ ಕಾಲ್ ಗಳು (Telemarketing Calls), ಕೆಲಸಕ್ಕೆ ಬಾರದ SMSಗಳು ಹಾಗೂ ಆನ್ಲೈನ್ ವಂಚನೆಗಳು ಇಂದು ಡಿಜಿಟಲ್ ಆಗುತ್ತಿರುವ ನಮ್ಮ ಜೀವನದ ಕಹಿ ವಾಸ್ತವಗಳಾಗಿವೆ. ಇವುಗಳನ್ನು ನಾವು ಪ್ರತಿದಿನ ಎದುರಿಸುತ್ತಲೇ ಇದ್ದೇವೆ. ಇವುಗಳನ್ನು ತಡೆಯಲು ಈ ಮೊದಲು ಕೂಡ ಹಲವಾರು ಪ್ರಯತ್ನಗಳು ನಡೆದಿವೆ. ಆದರೆ, ಇರುವರೆಗೆ ಯಾವುದೇ ಪ್ರಯತ್ನ ಪರಿಣಾಮಕಾರಿ ಎಂದು ಸಾಬೀತಾಗಿಲ್ಲ. ಸರ್ಕಾರದ ಹಲವಾರು ಎಚ್ಚರಿಕೆಗಳ ಬಳಿಕ ಇಂದಿಗೂ ಕೂಡ ಟೆಲಿ ಮಾರ್ಕೆಟಿಂಗ್ ಕಂಪನಿಗಳು ಯಾವುದೇ ಹೆದರಿಕೆ ಇಲ್ಲದೇ ಯಾರ ನಂಬರ್ ಬೇಕಾದರೂ ಡಯಲ್ ಮಾಡುತ್ತಿವೆ. ಆದರೆ ಇನ್ಮುಂದೆ ಇದು ನಡೆಯುವುದಿಲ್ಲ.


COMMERCIAL BREAK
SCROLL TO CONTINUE READING

ಅನಾವಶ್ಯಕ ಕರೆಗಳ ಮೇಲೆ ಸರ್ಕಾರದ ಕ್ರಮ ಏನು?
ಡಿಜಿಟಲ್ ವ್ಯವಹಾರವನ್ನು ಅನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿಸಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಟೆಲಿಕಾಂ ಚಂದಾದಾರರನ್ನು ಅನಪೇಕ್ಷಿತ ವಾಣಿಜ್ಯ ಸಂವಹನ (Unsolicited Commercial Communication) ಮತ್ತು ಆನ್‌ಲೈನ್ ಆರ್ಥಿಕ ವಂಚನೆಯಿಂದ ಮುಕ್ತಗೊಳಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರವಿಶಂಕರ್ ಪ್ರಸಾದ್ (Ravishankar Prasad) ಅಧಿಕಾರಿಗಳಿಗೆ ಆದೇಶಿಸಿದ್ದಾರೆ.


ಡಿಜಿಟಲ್ ಇಂಟೆಲ್ಜೆನ್ಸ್ ಯುನಿಟ್ ರಚನೆಗೆ ಮುಂದಾದ ಸರ್ಕಾರ
ಹಣಕಾಸಿನ ವಂಚನೆ ಮತ್ತು ಅನಗತ್ಯ ಕರೆಗಳನ್ನು ತಡೆಗಟ್ಟಲು ವೆಬ್ / ಮೊಬೈಲ್ ಅಪ್ಲಿಕೇಶನ್ ಮತ್ತು SMS ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ನೋಡಲ್ ಏಜೆನ್ಸಿಯಾಗಿ  Digital Intelligence Unit (DIU) ಸಹ ರಚಿಸಲು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದು ಟೆಲಿಕಾಂ ಮೂಲಗಳ ಮೂಲಕ ಮೋಸದ ಚಟುವಟಿಕೆಗಳನ್ನು ತನಿಖೆ ಮಾಡಲು ಸಂಬಂಧಪಟ್ಟ ಜನರೊಂದಿಗೆ ಸಂಪರ್ಕವನ್ನು ಮಾಡಲಿದೆ. ಇದೆ ವೇಳೆ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP) ವ್ಯವಸ್ಥೆಯನ್ನು ಪರವಾನಗಿ ಸೇವಾ ಪ್ರದೇಶ ಮಟ್ಟದಲ್ಲಿ ರಚಿಸುವ ನಿರ್ಣಯ ಕೈಗೊಳ್ಳಲಾಗಿದೆ.


ಟೆಲಿ ಮಾರ್ಕೆಟರ್‌ಗಳು ಮತ್ತು ಟೆಲಿಕಾಂ ಚಂದಾದಾರರಿಗೆ ಕಿರುಕುಳ ನೀಡುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ರವಿಶಂಕರ್ ಪ್ರಸಾದ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಟೆಲಿಕಾಂ ಚಂದಾದಾರರಿಗೆ ಪದೇ ಪದೇ ಕರೆ ಮಾಡುವ ಮೂಲಕ ಅಥವಾ ಸಂದೇಶ ಕಳುಹಿಸುವ ಮೂಲಕ ಕಿರುಕುಳ ನೀಡುವ ಕಂಪನಿಗಳು ಇದರಲ್ಲಿ ಶಾಮೀಲಾಗಿವೆ. ಇದಲ್ಲದೆ, ಡಿಜಿಟಲ್ ವಂಚನೆಯ ಮೂಲಕ ಜನರ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಲೂಟಿ (Online Frauds) ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆದೇಶಿಸಿದ್ದಾರೆ.


Do-Not Disturb ನಿಂದ ಯಾವುದೇ ಲಾಭವಿಲ್ಲ !
ಚಂದಾದಾರರು Do-Not Disturb (DND) ಸೇವೆಯನ್ನು ಬಳಸಿದರೂ ಕೂಡ ಟೆಲಿಮಾರ್ಕೆಟಿಂಗ್ ಕಂಪನಿಗಳು ವಾಣಿಜ್ಯ ಕರೆಗಳು ಮತ್ತು ಎಸ್‌ಎಂಎಸ್ ಕಳುಹಿಸುತ್ತಿವೆ ಎಂದು ಅಧಿಕಾರಿಗಳು ಈ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ಟೆಲಿಮಾರ್ಕೆಟಿಂಗ್ ಕಂಪನಿಗಳೊಂದಿಗೆ ಸಭೆ ನಡೆಸಿ ಅವರಿಗೆ ವಿಷಯದ ಗಂಭೀರತೆಯನ್ನು ವಿವರಿಸಲು ಟೆಲಿಕಾಂ ಇಲಾಖೆಗೆ (DoT) ಆದೇಶಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಅವರು ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂಬುದರ ಭರವಸೆಯನ್ನು ಪಡೆಯುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಇದನ್ನೂ ಓದಿ -ಐಟಿ ಕಂಪನಿಗಳಿಗೆ Work From Home ಜುಲೈ 31 ರವರೆಗೆ ವಿಸ್ತರಣೆ-ಕೇಂದ್ರ ಸಚಿವ ರವಿಶಂಕರ್ ಪ್ರಸಾದ್


ನಿಯಮ ಪಾಲಿಸದೆ ಹೋದಲ್ಲಿ ಪೆನಾಲ್ಟಿ
ಟೆಲಿಮಾರ್ಕೆಟಿಂಗ್ ಕಂಪನಿಗಳು ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದರೆ, ಅವರ ವಿರುದ್ಧ ದಂಡಾತ್ಮಕ ಕ್ರಮ ಜರುಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.  ಇದರ ಜೋತೆಗ್ಗೆ ಅವರ ಸಂಪನ್ಮೂಲಗಳನ್ನು ಸಹ ಕಡಿತಗೊಳಿಸಬಹುದು ಎಂದು ಅವರು ಹೇಳಿದ್ದಾರೆ. . ಜಮತಾರಾ ಮತ್ತು ಮೇವಾಟ್‌ನಂತಹ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಂಚನೆಗಳನ್ನು (Ditgital Frauds) ಗಮನದಲ್ಲಿಟ್ಟುಕೊಂಡು ಸಾಧನ-ನಿರ್ದಿಷ್ಟ ಕಾರ್ಯತಂತ್ರವನ್ನು ರೂಪಿಸಲು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇದರಲ್ಲಿ ಟೆಲಿಕಾಂ ಕಾರ್ಯಾಚರಣೆಗಳನ್ನು ಮಾತ್ರ ನಿರ್ಬಂಧಿಸಬೇಕು ಎಂದು ಸೂಚಿಸಿದ್ದಾರೆ.


ಇದನ್ನೂ ಓದಿ- ಶಾಹೀನ್ ಬಾಗ್ ಹೋರಾಟಗಾರರೊಂದಿಗೆ ಸರ್ಕಾರ ಚರ್ಚೆಗೆ ಸಿದ್ಧ- ಕೇಂದ್ರ ಸಚಿವ ರವಿಶಂಕರ್ ಪ್ರಸಾದ್


ಇಂತಹ ವ್ಯವಸ್ಥೆಯು ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ ಮತ್ತು ಮೊಬೈಲ್‌ನಿಂದ ಹಣಕಾಸಿನ ಡಿಜಿಟಲ್ ವಹಿವಾಟು ಹೆಚ್ಚು ಪಾರದರ್ಶಕ, ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಸರ್ಕಾರ ಭಾವಿಸುತ್ತದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಅಷ್ಟೇ ಅಲ್ಲ ಇದು ಡಿಜಿಟಲ್ ಇಂಡಿಯಾ ಮಿಷನ್‌ ಗೂ ಕೂಡ  ಉತ್ತೇಜನ ನೀಡುತ್ತದೆ ಎಂದಿದ್ದಾರೆ.


 


ಇದನ್ನೂ ಓದಿ -Ravi Shankar Prasad: ಕ್ರೈಸ್ತ, ಇಸ್ಲಾಂಗೆ ಮತಾಂತರವಾಗುವ ದಲಿತರಿಗಿಲ್ಲಾ ಮೀಸಲಾತಿ!


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.