Telegram Ceo Father Of 100 Child : ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಾನು 100ಕ್ಕೂ ಹೆಚ್ಚು ಮಕ್ಕಳ ತಂದೆ ಎನ್ನುವುದನ್ನು ಹೇಳಿದ್ದಾರೆ.ಅದರಲ್ಲಿಯೂ ಆ ಎಲ್ಲಾ ಮಕ್ಕಳು ತನ್ನ ಸ್ವಂತ ಮಕ್ಕಳೇ ಎನ್ನುವುದನ್ನು ಒತ್ತಿ ಹೇಳಿದ್ದಾರೆ.ಇನ್ನು ಈ ಎಲ್ಲಾ ಮಕ್ಕಳು 12 ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುವುದನ್ನು ಕೂಡಾ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನನಗೆ 100 ಕ್ಕೂ ಹೆಚ್ಚು ಮಕ್ಕಳಿದ್ದಾರೆ ಎಂದು ಈಗಷ್ಟೇ ತಿಳಿದು ಬಂದಿದೆ ಎಂದು 39 ವರ್ಷದ ಪಾವೆಲ್ ಡುರೊವ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.ಈ ಕತೆ ಶುರುವಾಗಿದ್ದು 15 ವರ್ಷಗಳ ಹಿಂದೆ. 15 ವರ್ಷಗಳ ಹಿಂದೆ  ಪಾವೆಲ್ ಡುರೊವ್ ವೀರ್ಯ ದಾನ ಮಾಡಳು ಶುರು ಮಾಡಿದರು.ವಿವಾಹಿತ ಸ್ನೇಹಿತ  ಫರ್ಟಿಲಿಟಿ   ಸಮಸ್ಯೆಯಿಂದ ಮಗು ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದು ತನಗೆ ವೀರ್ಯ ದಾನ ಮಾಡುವಂತೆ ಕೇಳಿಕೊಂಡಿದ್ದರು.ಸ್ನೇಹಿತನ ಬೇಡಿಕೆಗೆ ಒಪ್ಪಿ  ಪಾವೆಲ್ ಡುರೊವ್ ವೀರ್ಯ ದಾನ ಮಾಡುವುದಕ್ಕೂ ಮುಂದಾದರು.ಆದರೆ ಅವರು ಕ್ಲಿನಿಕ್‌ಗೆ ಹೋದಾಗ,ಅವರ ವೀರ್ಯವು ಉತ್ತಮ ಗುಣಮಟ್ಟದ್ದಾಗಿದೆ ಎನ್ನುವ ಸತ್ಯವೂ ತಿಳಿಯಿತು.ಹೀಗಾಗಿ ಅವರು ನಿರಂತರವಾಗಿ ವೀರ್ಯ ದಾನ ಮಾಡುವಂತೆ ಅವರನ್ನು ಕೇಳಿ ಕೊಳ್ಳಲಾಯಿತು.


ಇದನ್ನೂ ಓದಿ : ಟೆಲಿಗ್ರಾಮ್‌ನಲ್ಲಿ ಆ ಫೈಲ್ ಕ್ಲಿಕ್ ಮಾಡಬೇಡಿ; ಸೈಬರ್ ಸಂಶೋಧಕರಿಂದ ಎಚ್ಚರಿಕೆ, ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ!!


ವೀರ್ಯ ದಾನ ಎಂದರೇನು? :
ಲೋಮಾ ಲಿಂಡಾ ಯೂನಿವರ್ಸಿಟಿ ಸೆಂಟರ್ ಫಾರ್ ಫರ್ಟಿಲಿಟಿ ಮತ್ತು ಐವಿಎಫ್ ಪ್ರಕಾರ,ವೀರ್ಯ ದಾನಿಯು ತನ್ನ ವೀರ್ಯವನ್ನು ದಾನ ಮಾಡುವ ವ್ಯಕ್ತಿಯಾಗಿದ್ದು,ಇದರಿಂದ ಮಗು ಮಾಡಿಕೊಳ್ಳಲು ಸಾಧ್ಯವಾಗದಿರುವ ದಂಪತಿ  ಮಗುವನ್ನು ಹೊಂದಬಹುದು.1884 ರಿಂದ,ವೀರ್ಯ ದಾನದ ಸಹಾಯದಿಂದ ಅಮೆರಿಕದಲ್ಲಿ ಮಕ್ಕಳು ಜನಿಸುತ್ತಿದ್ದಾರೆ.


ವೀರ್ಯ ದಾನದ ಅಗತ್ಯ ಯಾವಾಗ ಹೆಚ್ಚಾಗುತ್ತದೆ? : 
ಮಗುವನ್ನು ಗರ್ಭಧರಿಸಲು,ಪುರುಷನ ವೀರ್ಯದ ಗುಣಮಟ್ಟ ಕಡಿಮೆಯಾದಾಗ ದಂಪತಿಗೆ ವೀರ್ಯ ದಾನಿಯ ಅಗತ್ಯವಿರುತ್ತದೆ.  


ವೀರ್ಯವನ್ನು ಯಾರು ದಾನ ಮಾಡಬಹುದು? :
ವೀರ್ಯವನ್ನು ದಾನ ಮಾಡಲು,ಕೆಲವು ದೈಹಿಕ ಮತ್ತು ಮಾನಸಿಕ ಮಾನದಂಡಗಳನ್ನು ಪೂರೈಸುವುದು ಅವಶ್ಯಕವಾಗಿದೆ. 
ಆರೋಗ್ಯ:ದಾನಿ ದೈಹಿಕವಾಗಿ ಆರೋಗ್ಯವಂತನಾಗಿರಬೇಕು,ಯಾವುದೇ ಗಂಭೀರ ಕಾಯಿಲೆ ಅಥವಾ ಸೋಂಕಿನಿಂದ ಬಳಲುತ್ತಿರಬಾರದು. 
ವಯಸ್ಸು :ಹೆಚ್ಚಿನ ವೀರ್ಯ ಬ್ಯಾಂಕ್‌ಗಳು ವೀರ್ಯ ದಾನವನ್ನು 18 ರಿಂದ 40 ವರ್ಷ ವಯಸ್ಸಿನ ಪುರುಷರಿಂದ ಮಾತ್ರ ಸ್ವೀಕರಿಸುತ್ತವೆ.  
ವೀರ್ಯ ಗುಣಮಟ್ಟ:ವೀರ್ಯದ ಎಣಿಕೆ, ಚಲನಶೀಲತೆ ಮತ್ತು ಗಾತ್ರವು ಸಾಮಾನ್ಯವಾಗಿರಬೇಕು.
ಮಾನಸಿಕ ಆರೋಗ್ಯ :ದಾನಿಯು ಮಾನಸಿಕವಾಗಿ ಸ್ಥಿರವಾಗಿರಬೇಕು ಮತ್ತು ಪ್ರಬುದ್ಧನಾಗಿರಬೇಕು.ಇದನ್ನು ಖಚಿತಪಡಿಸಿಕೊಳ್ಳಲು, ವೀರ್ಯ ದಾನಿ ಕೆಲವು ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. 
ಆನುವಂಶಿಕ ಕಾಯಿಲೆಗಳು :ದಾನಿಯ ಕುಟುಂಬದಲ್ಲಿ ಯಾವುದೇ ಗಂಭೀರ ಆನುವಂಶಿಕ ಕಾಯಿಲೆ ಇರಬಾರದು.ಇದಕ್ಕಾಗಿ,ದಾನಿಗಳ ಕೆಲವು ಪರೀಕ್ಷೆಗಳು ಮತ್ತು ಕುಟುಂಬದ ವೈದ್ಯಕೀಯ ಇತಿಹಾಸವನ್ನು ನೋಡಲಾಗುತ್ತದೆ. 


ಇದನ್ನೂ ಓದಿ : ಬೆಸ್ಟ್ ಸೇಲ್ಲಿಂಗ್ ಪ್ಲಾನ್ ಅನ್ನು ಮತ್ತೊಮ್ಮೆ ಪರಿಚಯಿಸಿದ Jio!ಗ್ರಾಹಕರಿಗೆ ಖುಷಿಯೋ ಖುಷಿ


ವೀರ್ಯ ದಾನ ಪ್ರಕ್ರಿಯೆ :
ನೋಂದಣಿ :ದಾನಿಯು ಮಾನ್ಯತೆ ಪಡೆದ ವೀರ್ಯ ಬ್ಯಾಂಕ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಸ್ಕ್ರೀನಿಂಗ್ :ನೋಂದಣಿಯ ನಂತರ,ದಾನಿಯ ವೈದ್ಯಕೀಯ ಮತ್ತು ಮಾನಸಿಕ ಪರೀಕ್ಷೆಯನ್ನು ಮಾಡಲಾಗುತ್ತದೆ.ಇದರಲ್ಲಿ ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆ, ಸೋಂಕು ಪರೀಕ್ಷೆ, ಜೆನೆಟಿಕ್ ಪರೀಕ್ಷೆ ಸೇರಿವೆ.
ವೀರ್ಯ ಪರೀಕ್ಷೆ:ದಾನಿಯ ಪರೀಕ್ಷೆಗಳು ನಾರ್ಮಲ್ ಆಗಿದ್ದರೆ ಅವನಿಂದ ವೀರ್ಯ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ.ವೀರ್ಯದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಪ್ರಯೋಗಾಲಯದಲ್ಲಿ ಮಾದರಿಯನ್ನು ಪರೀಕ್ಷಿಸಲಾಗುತ್ತದೆ.
ದಾನಿಗಳ ವಿವರ :ದಾನಿಯ ದೈಹಿಕ ಗುಣಲಕ್ಷಣಗಳು, ಶಿಕ್ಷಣ, ಉದ್ಯೋಗ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಗೌಪ್ಯ ಪ್ರೊಫೈಲ್‌ನಲ್ಲಿ ದಾಖಲಿಸಲಾಗುತ್ತದೆ. 
ವೀರ್ಯ ಸಂಗ್ರಹಣೆ :ಈ ಎಲ್ಲಾ ಪರೀಕ್ಷೆಗಳ ನಂತರ, ಉತ್ತಮ ವೀರ್ಯವನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಫ್ರೀಜಿಂಗ್ ಮಾಡಲಾಗುತ್ತದೆ. 


ವೀರ್ಯ ದಾನಿಯಾಗುವ ಪ್ರಯೋಜನಗಳು : 
ವೀರ್ಯ ದಾನದ ಮೂಲಕ, ಪುರುಷನು ಅನೇಕ ಸಂತಾನಹೀನ ದಂಪತಿಗಳಿಗೆ ಪೋಷಕರಾಗುವ ಸಂತೋಷವನ್ನು ನೀಡಬಹುದು.ಇದಲ್ಲದೆ, ನೀವು ವೀರ್ಯ ದಾನದ ಮೂಲಕವೂ ಹಣವನ್ನು ಗಳಿಸಬಹುದು. 


https://bit.ly/3AClgDd


Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.