Threads New Feature Test : ಇನ್ಸ್ಟಾ ದ ವೈಶಿಷ್ಟ್ಯದ ಹಾಗೆ ಥ್ರೇಡ್ಸ್ ಕೂಡ ಪೋಸ್ಟ್ ಗಳನ್ನು ಸೇವ್ ಮಾಡಿಕೊಳ್ಳಬಹುದಾದ ಒಂದು ವೈಶಿಷ್ಟ್ಯದ ಪ್ರಯೋಗವನ್ನು ನಡೆಸುತ್ತಿದೆ. ಈ ವೈಶಿಷ್ಟ್ಯದ ಮೂಲಕ ಬಳಕೆದಾರರಿಗೆ ಇಷ್ಟವಾದ ಪೋಸ್ಟ್ ನ್ನು ಸೇವ್ ಮಾಡಬಹುದು ಮತ್ತು ಸೇವ್ ಮಾಡಿದ ಪೋಸ್ಟನ್ನು ಮರು ವೀಕ್ಷಿಸಬಹುದಾಗಿದೆ. ಈ ವೈಶಿಷ್ಟ್ಯದ ಪರೀಕ್ಷೆಯ ಕುರಿತು ಇನ್ಸ್ಟಾಗ್ರಾಂ ಮುಖ್ಯಸ್ಥ  ಆಡಮ್ ಮೊಸ್ಸೆರಿ  ಥ್ರೇಡ್ಸ್ ಪೋಸ್ಟ್‌ನಲ್ಲಿ ಘೋಷಿಸಿದ್ದಾರೆ ಮತ್ತು ಕಂಪನಿಯು ಸೀಮಿತ ಪರೀಕ್ಷೆಯನ್ನು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

“ನಾವು ಹೆಚ್ಚು ವಿನಂತಿಸಿದ ವೈಶಿಷ್ಟ್ಯದ ಸೀಮಿತ ಪರೀಕ್ಷೆಯನ್ನು ಪ್ರಾರಂಭಿಸಿದ್ದೇವೆ.  ಥ್ರೇಡ್ಸ್ ನಲ್ಲಿ ಪೋಸ್ಟ್‌ಗಳನ್ನು ಉಳಿಸುವ ಸಾಮರ್ಥ್ಯ. ನಿಮ್ಮ ನೆಚ್ಚಿನ ಪೋಸ್ಟ್‌ಗಳನ್ನು ಬುಕ್‌ಮಾರ್ಕ್ ಮಾಡಿ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿರುವ ವೈಶಿಷ್ಟ್ಯದಂತೆಯೇ  ಅವುಗಳನ್ನು ನಂತರ ಮರುಭೇಟಿ ಮಾಡಬಹುದಾಗಿದೆ ” ಎಂದು ಮೊಸ್ಸೆರಿ ಹೇಳಿದರು.


ಥ್ರೇಡ್ಸ್ ಈಗಾಗಲೇ 130 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ತಲುಪಿದೆ, ಕಳೆದ ತ್ರೈಮಾಸಿಕಕ್ಕಿಂತ 30 ಮಿಲಿಯನ್ ಹೆಚ್ಚಾಗಿದೆ ಎಂದು ಕಂಪನಿಯು ಪ್ರಕಟಿಸಿದೆ. ಪರೀಕ್ಷೆಯನ್ನು ಹೊಂದಿರುವ ಬಳಕೆದಾರರಿಗಾಗಿ ಪೋಸ್ಟ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡಾಟ್ ಮೆನು ಮೂಲಕ ಹೊಸ ಸೇವ್ ವೈಶಿಷ್ಟ್ಯವನ್ನು ಪ್ರವೇಶಿಸುವ ಮೂಲಕ ಸೇವ್ ಮಾಡಬಹುದಾಗಿದೆ. 


ಇದನ್ನೂ ಓದಿ: ದೃಶ್ಯಗಳ ಮೂಲಕವೇ ಕಿಕ್ಕೇರಿಸುವ ಶೈಲಿಯ `ಕೈಲಾಸ’ ಟ್ರಾನ್ಸ್ ವಿಡಿಯೋ ಸಾಂಗ್!


ಅಲ್ಲದೆ  ಇದನ್ನು ಹೊರತಾಗಿ  "ಥ್ರೇಡ್ಸ್ ನಲ್ಲಿ ಬೇರೆ ಯಾವೆಲ್ಲ ವೈಶಿಷ್ಟ್ಯಗಳನ್ನು ನೋಡಲು ಬಯಸುತ್ತೀರಿ?" ಎಂದು ಮೊಸ್ಸೆರಿ ಬರೆದಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.