ನವದೆಹಲಿ : ಫ್ಲಿಪ್‌ಕಾರ್ಟ್ (Flipkart) ತನ್ನ 2021 ರ ಬಿಗ್ ಬಿಲಿಯನ್ ಡೇಸ್ ಮಾರಾಟವನ್ನು (Flipkart Big Billion Days sale) ಅಕ್ಟೋಬರ್ 3 ರಂದು ಭಾರತದಲ್ಲಿ ಆರಂಭಿಸಲಿದೆ.   ಪ್ರತಿ ವರ್ಷದಂತೆ ಈ ಬಾರಿ, ಕೂಡಾ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ  (Flipkart sale) ಐಫೋನ್ ಮೇಲೆ ಭಾರೀ ರಿಯಾಯಿತಿ ಸಿಗಲಿದೆ. ಅಲ್ಲದೆ, ಈ ವರ್ಷವೂ ಐಫೋನ್‌ಗಳಲ್ಲಿ (iPhone) ಅದ್ಭುತ ಕೊಡುಗೆಗಳು ಲಭ್ಯವಿರಲಿದೆ.  ಸೇಲ್ ಗೂ ಮುನ್ನವೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಐಫೋನ್ 12 ನಲ್ಲಿ ರಿಯಾಯಿತಿಯನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್ ಟ್ವಿಟರ್‌ನಲ್ಲಿ ಐಫೋನ್ 12 ನ ಸೇಲ್ ಬೆಲೆಯನ್ನು ತೋರಿಸುವ ವಿಡಿಯೋವನ್ನು ಶೇರ್ ಮಾಡಿದೆ.  


COMMERCIAL BREAK
SCROLL TO CONTINUE READING

ಐಫೋನ್ 12 ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿ :
ಐಫೋನ್ 12 ಅನ್ನು (iPhone 12 ) ಭಾರತದಲ್ಲಿ  65,900 ರೂ. ಗಳಿಗೆ ಮಾರಾಟ ಮಾಡಲಾಗುತ್ತದೆ. ಆದರೆ, ಫ್ಲಿಪ್ ಕಾರ್ಟ್ ಸೇಲ್ ನಲ್ಲಿ (Flipkart sale)  ಇದನ್ನು 49,999 ರೂ. ಗಳಿಗೆ ಮಾರಾಟ ಮಾಡಲಾಗುತ್ತದೆ. ಅಂದರೆ, ಈ ಫೋನ್ ಮೇಲೆ 15,901 ರೂ. ಗಳ ರಿಯಾಯಿತಿ ಸಿಗಲಿದೆ.  


ಇದನ್ನೂ ಓದಿ : ಈ ಪೋನ್ ಗಳಿಗೆ ತನ್ನ ಆಪ್ ಗಳು ಬೆಂಬಲಿಸುವುದನ್ನು ಸ್ಥಗಿತಗೊಳಿಸಲಿದೆ ಗೂಗಲ್


ಐಫೋನ್ 12 ರ ವಿಶೇಷತೆಗಳು :
ಐಫೋನ್ 12 25.13 x 1170 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದೆ. ಸ್ಕ್ರೀನ್  625 ನಿಟ್‌ಗಳ ಬ್ರೈಟ್ ನೆಸ್ , ಎಚ್‌ಡಿಆರ್ ಬೆಂಬಲ ಮತ್ತು 460 ಪಿಪಿಐ ಪಿಕ್ಸೆಲ್ ಸಾಂದ್ರತೆಯೊಂದಿಗೆ ಬರುತ್ತದೆ. ಫೋನ್ Apple A14 ಬಯೋನಿಕ್ ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 12+12MP ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ.


ಚೀನಾದಲ್ಲಿ ಕಡಿಮೆಯಾಗಿದೆ ಬೆಲೆ :
ಚೀನಾ ಮಾರುಕಟ್ಟೆಯಲ್ಲಿ (China market)  ಐಫೋನ್ 12 ಬೆಲೆ ಕಡಿಮೆಯಾಗಿದೆ. ಫೋನಿನ ಬೆಲೆ  22,863ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಈ ಫೋನ್ ಚೀನಾದಲ್ಲಿ (China) ಈ ಹಿಂದೆ 77,736 ರೂ. ಗೆ ಮಾರಾಟವಾಗುತ್ತಿತ್ತು. ಆದರೆ ಬೆಲೆ ಕಡಿತದ ನಂತರ, ಇದು  54,872 ರೂ. ಗೆ ಮಾರಾಟವಾಗುತ್ತಿದೆ. 


ಇದನ್ನೂ ಓದಿ : ಚೀನಾದಲ್ಲಿ ಧೂಳೆಬ್ಬಿಸಿದ ನಂತರ ಭಾರತಕ್ಕೂ ಲಗ್ಗೆಇಟ್ಟಿದೆ ಈ 5 ಜಿ ಸ್ಮಾರ್ಟ್ ಫೋನ್, ವೈಶಿಷ್ಟ್ಯ ತಿಳಿದರೆ ಎಂಥವರೂ ದಂಗಾಗಬೇಕು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.