ನಾಳೆ Redmi Note 11T 5G ಸ್ಮಾರ್ಟ್‌ಫೋನ್ ಬಿಡುಗಡೆ: ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿದ ಕುತೂಹಲ..!
Redmi Note 11T 5G ಸ್ಮಾರ್ಟ್‌ಫೋನ್ ಬಿಡುಗಡೆಯ ದಿನಾಂಕ, ಬಿಡುಗಡೆಯ ಈವೆಂಟ್ ಸಮಯ, ಭಾರತೀಯ ಮಾರುಕಟ್ಟೆಯಲ್ಲಿನ ನಿರೀಕ್ಷಿತ ಬೆಲೆ ಮತ್ತು ಹೆಚ್ಚಿನವುಗಳ ಮಾಹಿತಿ ಇಲ್ಲಿದೆ.
ನವದೆಹಲಿ: ಬಹಳ ಹಿಂದೆಯೇ ಖ್ಯಾತ ಮೊಬೈಲ್ ತಯಾರಿಕಾ ಕಂಪನಿ Xiaomi ತನ್ನ Redmi Note 11 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಅನಾವರಣಗೊಳಿಸಿತ್ತು. ಈ ಬ್ರ್ಯಾಂಡ್ ಈಗ ಭಾರತೀಯ ಮಾರುಕಟ್ಟೆಗೆ ತನ್ನ ನೋಟ್ 11ರ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ. ಈ ಶ್ರೇಣಿಯ ಮೊದಲ ಫೋನ್ Redmi Note 11T 5G ಈ ವಾರ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ.
Redmi ಈ ಹೊಸ ಫೋನ್ 33W ವೇಗದ ಚಾರ್ಜಿಂಗ್ ಬೆಂಬಲ, 90Hz ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು 6nm ಪ್ರೊಸೆಸರ್ ಅನ್ನು ಹೊಂದಿದೆ. ಭಾರತದಲ್ಲಿ Redmi Note 11T 5G ನಾಳೆ (ನ.30) ಬಿಡುಗಡೆಯಾಗಲಿದೆ. ಈವೆಂಟ್ ಅನ್ನು ಕಂಪನಿಯ ಅಧಿಕೃತ YouTube ಚಾನಲ್‌ನಲ್ಲಿ 12 PM(ಭಾರತೀಯ ಕಾಲಮಾನ)ಗೆ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಮುಂದಿನ ತಿಂಗಳು ಮಾರಾಟ ಪ್ರಾರಂಭವಾಗಬಹುದಾದರೂ ಅಭಿಮಾನಿಗಳು ಅಧಿಕೃತ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
MediaTek ಚಿಪ್‌ಸೆಟ್: ಮುಂಬರುವ Redmi Note 11T 5G 6nm ಆಧಾರಿತ MediaTek ಚಿಪ್‌ಸೆಟ್ ಅನ್ನು ಹೊಂದಿರುತ್ತದೆ ಎಂದು Xiaomi ಘೋಷಿಸಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 810 ಚಿಪ್‌ಸೆಟ್ ಆಗಿರಬಹುದು. ಇದುವೇ SoC Redmi Note 11 5G ಗೆ ಶಕ್ತಿ ನೀಡುತ್ತದೆ. RAM ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಲಭ್ಯವಿರುವ ಮೆಮೊರಿಯನ್ನು ಮೂಲಭೂತವಾಗಿ ಬಳಸಿಕೊಳ್ಳುವ RAM ಬೂಸ್ಟರ್ ತಂತ್ರಜ್ಞಾನವನ್ನು ಫೋನ್ ಬೆಂಬಲಿಸುತ್ತದೆ.
ಇದನ್ನೂ ಓದಿ: ವ್ಯಕ್ತಿ ಮೃತಪಟ್ಟ ನಂತರ Google ಖಾತೆಯ ಡೇಟಾ ಏನಾಗುತ್ತದೆ? ಉತ್ತರ ಇಲ್ಲಿದೆ ನೋಡಿ...
ಇದೇ ತಂತ್ರಜ್ಞಾನವು ಹೊಸ Realme ಫೋನ್‌ಗಳಲ್ಲಿ ಡೈನಾಮಿಕ್ RAM ಮತ್ತು ಸೀಮಿತ Samsung ಸಾಧನಗಳಲ್ಲಿ RAM Plus ಆಗಿ ಲಭ್ಯವಿದೆ. ಸೋಷಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ Redmi Note 11T 5G ಸ್ಮಾರ್ಟ್‌ಫೋನ್ 6GB RAM + 64GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಾಗಬಹುದು ಎಂದು ಹೇಳಲಾಗಿದೆ. ಇದರಲ್ಲಿ 6GB RAM + 128GB ಮತ್ತು 8GB RAM + 128GB ಆಯ್ಕೆಗಳನ್ನು ಕೂಡ ಲಭ್ಯವಿರಲಿದೆ ಎಂದು ತಿಳಿದುಬಂದಿದೆ.
90Hz ಡಿಸ್‌ಪ್ಲೇ: Redmi Note 11T 5G ಸ್ಮಾರ್ಟ್‌ಫೋನ್ 90Hz ಡಿಸ್‌ಪ್ಲೇಯೊಂದಿಗೆ ಬರಲಿದೆ ಎಂದು Xiaomi ಇಂಡಿಯಾ ಪ್ರಕಟಿಸಿದೆ. ಇದು ವಿಷಯವನ್ನು ಅವಲಂಬಿಸಿ ರಿಫ್ರೆಶ್ ದರವನ್ನು 60Hz ಗೆ ಇಳಿಸಲು ಸಾಧ್ಯವಾಗುತ್ತದೆ. ಈ ಫೋನ್ 6.6-ಇಂಚಿನ ಪೂರ್ಣ-ಎಚ್‌ಡಿ ಡಿಸ್ಪ್ಲೇಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.
Sharp Camera: ಮೈಕ್ರೋಸೈಟ್ ಕ್ಯಾಮೆರಾ ವಿಶೇಷಣಗಳನ್ನು ಹೈಲೈಟ್ ಮಾಡದಿದ್ದರೂ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ (dual rear camera setup) ಅನ್ನು ಇದರಲ್ಲಿ ನೋಡಬಹುದು. ಮುಖ್ಯ ಕ್ಯಾಮೆರಾವು 8-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾದೊಂದಿಗೆ ಇರುತ್ತದೆ. ಹೋಲ್-ಪಂಚ್ ಕಟೌಟ್ ಒಳಗೆ, ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 16-ಮೆಗಾಪಿಕ್ಸೆಲ್ ಫ್ರಂಟ್ ಶೂಟರ್ ಕೂಡ ಇರಬಹುದು.
ಇದನ್ನೂ ಓದಿ: WhatsAppನಲ್ಲಿ ಫೋಟೋ, ವಿಡಿಯೋ ನೋಡಿದ ಮೇಲೆ ಅಟೋಮೆಟಿಕ್ ಡಿಲೀಟ್ ಮಾಡುವ ಟ್ರಿಕ್ ಗೊತ್ತಾ?
33W ವೇಗದ ಚಾರ್ಜಿಂಗ್: ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಈ ಫೋನ್ 33W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ ಎಂದು ಹೇಳಲಾಗಿದೆ. Redmi Note 11T 5G ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಹೊಂದಿದೆ.
3 ಬಣ್ಣಗಳ ಆಯ್ಕೆ: Redmi Note 11T 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಆಕ್ವಾ (aqua), ಬಿಳಿ (white) ಮತ್ತು ಸಿಲ್ವರ್ (silver) ಕನಿಷ್ಠ 3 ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ Redmi Note 11T 5G ಬೆಲೆ (ನಿರೀಕ್ಷಿತ):
ಕೆಲವು ಮಾಹಿತಿಗಳ ಪ್ರಕಾರ 6GB/64GB ರೂಪಾಂತರವು ಸುಮಾರು 16,999 ರೂ. ಇದ್ದರೆ, 6GB/128GB ರೂಪಾಂತರದ ಬೆಲೆ ಸುಮಾರು 17,999 ರೂ. ಇರಲಿದೆ ಎಂದು ಹೇಳಲಾಗುತ್ತಿದೆ. 8GB/128GB ರೂಪಾಂತರವು 19,999 ರೂ. ಆಗಿರಬಹುದು ಎನ್ನಲಾಗಿದೆ. ಆದರೆ Redmi Note 11T 5G ಯ ಅಧಿಕೃತ ಬೆಲೆಯನ್ನು ಬಿಡುಗಡೆ ಸಮಾರಂಭದಲ್ಲಿ ಮಾತ್ರ ಬಹಿರಂಗಪಡಿಸಲಾಗುವುದು ಎಂದು ಕಂಪನಿಯು ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.