ನವದೆಹಲಿ : ವಾಟ್ಸಾಪ್ ( WhatsApp) ಈಗ ನಮ್ಮ ಜೀವನದ ಪ್ರಮುಖ ಭಾಗವಾಗಿದೆ.  ಕಮ್ಯುನಿಕೆಶನ್ ಗಾಗಿ ಬಹುತೇಕ ಮಂದಿ ಬಳಸುವ ಜನಪ್ರಿಯ ಆಪ್ (App) ಇದಾಗಿದೆ.  ಆದರೆ ಇದರ ಕೆಲ ಸೆಟ್ಟಿಂಗ್ ಬಳಕೆದಾರರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು.  ಈ ಸೆಟ್ಟಿಂಗ್‌ಗಳನ್ನು ಬದಲಾಯಿಸದಿದ್ದರೆ, ನಿಮ್ಮ ಫೋನ್ ಹ್ಯಾಕ್ ಆಗುವ ಎಲ್ಲಾ ಸಂಭವವಿದೆ. ಅನ್ನು ಹ್ಯಾಕ್ (Hack) ಮಾಡಬಹುದು. 


COMMERCIAL BREAK
SCROLL TO CONTINUE READING

Disappearing messages : 
WhatsApp ಇತ್ತೀಚೆಗೆ Disappearing messages ಎಂಬ  ಹೊಸ ವೈಶಿಷ್ಟ್ಯವನ್ನು ಹೊರತಂದಿದೆ.  ಇದನ್ನು ಆಕ್ಟಿವೇಟ್ ಮಾಡಿಕೊಂಡರೆ, ಮೆಸೇಜ್ ಗಳು ನಿರ್ದಿಷ್ಟ ಸಮಯದ ನಂತರ ಡಿಲೀಟ್ ಆಗುತ್ತವೆ. ಆದರೆ ಪ್ರೈವೇಸಿ ಆಧಾರದಲ್ಲಿ ಇದೊಂದು ಅಪಾಯಕಾರಿ ಫೀಚರ್ ಆಗಿದೆ. ಆದರೆ, ಡಿಲೀಟ್ ಆದ ಸಂದೇಶಗಳು (Message) ಅಪ್ಲಿಕೇಶನ್‌ನಲ್ಲಿ ಕನಿಷ್ಠ 7 ದಿನಗಳವರೆಗೆ ಉಳಿಯುತ್ತವೆ. ನಿಮ್ಮ ಮೆಸೇಜ್ ನೊಟಿಫಿಕೇಶನ್ ನಲ್ಲಿ ಇದು ಇರುತ್ತದೆ. ಹಾಗೆಯೇ ಈ ಚಾಟ್‌ಗಳನ್ನು ಬೇರೆ ಬಳಕೆದಾರರು ಕೂಡಾ ಕ್ಯಾಪ್ಚರ್ ಮಾಡಬಹುದು. ಮೆಸೇಜ್ ಅನ್ನು ಬ್ಯಾಕ್ ಮಾಡಿ ಕೂಡಾ ಇಡಬಹುದು. ಹಾಗಾಗಿ ಇಂಥ ಮೆಸೇಜ್ ಗಳನ್ನು ನೀವು ತಕ್ಷಣ ಡಿಲಿಟ್ ಮಾಡಿಬಿಡಿ. 


ಇದನ್ನೂ ಓದಿ : Oppo ಸ್ಮಾರ್ಟ್‌ಫೋನ್‌ಗಳಿಗೆ 80% ವರೆಗೆ ರಿಯಾಯಿತಿ, 1 ರೂಪಾಯಿ ಡೀಲ್ ಕೂಡ ವಿಶೇಷ


 iCloud ನಲ್ಲಿ ವಾಟ್ಸಾಪ್ ಅನ್ನು ಬ್ಯಾಕಪ್ ಮಾಡಬೇಡಿ: 
ಇಲ್ಲಿಯವರೆಗೆ Apple ನ ಸೆಕ್ಯುರಿಟಿ ಅತ್ಯಂತ  ಪ್ರಬಲವಾಗಿದೆ ಎಂದು ಹೇಳಲಾಗುತ್ತದೆ. ಆದರೆ ತಜ್ಞರ ಪ್ರಕಾರ ಯಾವತ್ತೂ ವಾಟ್ಸ್ ಆಪ್ ಬ್ಯಾಕ್ ಅಪ್ ಅನ್ನು iCloudನಲ್ಲಿ  ಮಾಡಬಾರದು.  ಯಾವುದೇ ವಾಟ್ಸಾಪ್ ಚಾಟ್ ಐಕ್ಲೌಡ್‌ಗೆ ಹೋದ ನಂತರ ಆಪಲ್‌ನ ಪ್ರಾಪರ್ಟಿಯಾಗುತ್ತದೆ. iCloud ಸೇರಿದ ಮೇಲೆ ನಿಮ್ಮ ಚಾಟ್ decrypted  ಆಗುತ್ತದೆ. ಅಂದರೆ ಭದ್ರತಾ ಏಜೆನ್ಸಿಗಳು ಆಪಲ್‌ ನಿಂದ ನಿಮ್ಮ ಚಾಟ್‌ಗಳನ್ನು ತೆಗೆದುಕೊಳ್ಳಬಹುದು. ಈ ಕಾರಣಕ್ಕಾಗಿ ತಜ್ಞರು ಐಕ್ಲೌಡ್‌ನಲ್ಲಿ ಬ್ಯಾಕ್ ಅಪ್ ಮಾಡಲು ನಿರಾಕರಿಸುತ್ತಾರೆ.


ಇದನ್ನೂ ಓದಿ : ಜೂನ್ ಒಂದರಿಂದ ಗೂಗಲ್ ನ ಈ ಸೇವೆಗೆ ಹಣ ಪಾವತಿಸಬೇಕಾಗುತ್ತದೆ, ಈ ಮುಖ್ಯ ವಿಚಾರಗಳು ತಿಳಿದಿರಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.