Good Smartphones: ಚಾರ್ಜ್ ಮಾಡದೆ ಆರಾಮಾಗಿ 2-3 ದಿನ ಬಳಸಬಹುದಾದ ಸ್ಮಾರ್ಟ್ಫೋನ್ಗಳು
ದೀರ್ಘ ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ಗಳು: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಉತ್ತಮ ಬ್ಯಾಟರಿ ಇಲ್ಲದಿದ್ದರೆ, ಅದನ್ನು ಬಳಸುವುದು ನಿಷ್ಪ್ರಯೋಜಕ. ಏಕೆಂದರೆ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಬೇಕಾಗುತ್ತದೆ, ಇದರಿಂದ ನಿಮಗೆ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಉತ್ತಮ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಖರೀದಿಸುವುದು ಉತ್ತಮ.
ನವದೆಹಲಿ: 2-3 ದಿನ ಆರಾಮವಾಗಿ ಕಾರ್ಯನಿರ್ವಹಿಸುವ ಉತ್ತಮ ಬ್ಯಾಟರಿ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಖರೀದಿಸಬಯಸಿದರೆ, ನೀವು ಕನಿಷ್ಟ 6000 mAh ಬ್ಯಾಟರಿಯ ಸ್ಮಾರ್ಟ್‌ಫೋನ್ ಖರೀದಿಸಬೇಕು. ಇಷ್ಟು ಸಾಮರ್ಥ್ಯದ ಬ್ಯಾಟರಿಯೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್ 2-3 ದಿನ ಪವರ್ ಬ್ಯಾಕಪ್ ಅನ್ನು ಒದಗಿಸುತ್ತದೆ. ಇಂದು ನಾವು 6000 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಕೆಲವು ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.
Samsung Galaxy M32: Samsung Galaxy M32 6000mah ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಖರೀದಿಸಲು ನೀವು ಮನಸ್ಸು ಮಾಡಿದ್ದರೆ, ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 16,990 ರೂ. ಇದೆ. ನೀವು ಫೋನ್‌ನಲ್ಲಿ 1TB SD ಕಾರ್ಡ್ ಹಾಕಬಹುದು. ಇದರ ಹಿಂಭಾಗದಲ್ಲಿ 4 ಕ್ಯಾಮೆರಾಗಳಿದ್ದು, ಪ್ರಾಥಮಿಕ ಕ್ಯಾಮೆರಾ 64MP ಆಗಿದೆ.
ಇದನ್ನೂ ಓದಿ: ವೆಜ್ ಆರ್ಡರ್ ಮಾಡಿದ್ದ ಗ್ರಾಹಕರಿಗೆ ನಾನ್-ವೆಜ್ ಫುಡ್ ವಿತರಣೆ: ಝೊಮಾಟೊ, ಮೆಕ್‌ಡೊನಾಲ್ಡ್ಸ್‌ಗೆ ಭಾರೀ ದಂಡ
Realme Narzo 30A: Realme Narzo 30Aನ 6.51 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 2 ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಾಥಮಿಕ 13 MP ಮತ್ತು ಸೆಕೆಂಡರಿ 2MP ಕ್ಯಾಮೆರಾ ಹೊಂದಿದೆ. ಇದಲ್ಲದೆ ಮುಂಭಾಗದ ಕ್ಯಾಮರಾ 8MP ಆಗಿದೆ. ಇದು 6000 mAh ಬ್ಯಾಟರಿಯನ್ನು ಸಹ ಹೊಂದಿದೆ. ಕ್ಯಾಮರಾ ಗುಣಮಟ್ಟದಲ್ಲಿ ನೀವು ರಾಜಿ ಮಾಡಿಕೊಳ್ಳಬಹುದಾದರೆ, ಈ ಫೋನ್ ತೆಗೆದುಕೊಳ್ಳಬಹುದು. ನೀವು ಇದನ್ನು 4GB RAM ಮತ್ತು 64GB ಸ್ಟೋರೇಜ್ ರೂಪಾಂತರದಲ್ಲಿ 8,999 ರೂ.ಗೆ ಪಡೆಯಬಹುದು.
Infinix HOT 10 Play: Infinixನ ಈ ಫೋನ್‌ನಲ್ಲಿ ನೀವು 6000mah ಬ್ಯಾಟರಿಯನ್ನು ಪಡೆಯುತ್ತೀರಿ. ಇದು 6.82 ಇಂಚಿನ HD+ ಡಿಸ್ಪ್ಲೇ ಹೊಂದಿದ್ದು, ಫೋನ್ 4GB RAM ಮತ್ತು 64GB ಸ್ಟೋರೇಜ್ ಹೊಂದಿದೆ. ಇದರ ಬೆಲೆ 9,499 ರೂ. ಇದೆ.
ಇದನ್ನೂ ಓದಿ: ರೈತರ ಖಾತೆಗೆ ಬೀಳಲಿದ್ಯಾ 8,000 ರೂಪಾಯಿ..?
Motorola G10 Power: Motorola G10 Power 6.51 ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. 6000mah ಬ್ಯಾಟರಿ ಹೊರತುಪಡಿಸಿ, ಫೋನ್ 460 ಪ್ರೊಸೆಸರ್ ಮತ್ತು ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ ಹಿಂಭಾಗದಲ್ಲಿ 4 ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 48MP, ದ್ವಿತೀಯ ಕ್ಯಾಮೆರಾ 8MP ಮತ್ತು ಉಳಿದ 2 ಕ್ಯಾಮೆರಾಗಳು 2-2MP ಇವೆ. ಇದರ ಮುಂಭಾಗದ ಕ್ಯಾಮರಾ 8MP ಆಗಿದೆ. 4 GB RAM ಮತ್ತು 64 GB ಸ್ಟೋರೇಜ್ ಹೊಂದಿರುವ ಈ ಫೋನ್ 9,999 ರೂ.ಗೆ ನೀವು ಖರೀದಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.