Google Search: ಪ್ರಶ್ನೆ ಯಾವುದೇ ಆಗಿರಲಿ, ಉತ್ತರ ಮಾತ್ರ ಚಿಟಿಕೆಯಲ್ಲಿ ಸಿಗುವುದು ಖಚಿತ, ಇದಕ್ಕೆ ಕಾರಣ... ಇಂದಿನ ಜಮಾನದಲ್ಲಿ ಪ್ರತಿಯೊಬ್ಬರು ಗೂಗಲ್‌ ಬಳಕೆ ಮಾಡುತ್ತಿರುವುದು. ಯಾವುದೇ ಪ್ರಶ್ನೆಯಾದರೂ ಸರಿ, ಸರ್ಚ್ ಮಾಡಿದರೆ ಅದರ ಸಂಪೂರ್ಣ ಮಾಹಿತಿ ಸಿಗುತ್ತದೆ. ಸರ್ಚ್ ವೈಶಿಷ್ಟ್ಯದ ಸಹಾಯದಿಂದ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ‌


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನೋಟು ಎಣಿಸುವಾಗ ಈ ತಪ್ಪು ಮಾಡದಿರಿ ! ಶಾಶ್ವತವಾಗಿ ಮುನಿಸಿಕೊಂಡು ಹೊರತು ಬಿಡುತ್ತಾಳೆಯಂತೆ ಲಕ್ಷ್ಮೀ 


ಆದರೆ ಪ್ರತಿ ಪ್ರಶ್ನೆಗೆ ಉತ್ತರವನ್ನು ಗೂಗಲ್‌ʼನಲ್ಲಿ ಸರ್ಚ್‌ ಮಾಡುವುದು ಕೆಲವೊಮ್ಮೆ ತೊಂದರೆಗೆ ಕಾರಣವಾಗಬಹುದು. ಗೂಗಲ್‌ʼನಲ್ಲಿ ಕೆಲವು ವಿಷಯಗಳನ್ನು ಹುಡುಕಿದರೆ ಜೈಲು ಪಾಲಾಗುತ್ತೀರಿ ಎಂಬುದು ನಿಮಗೆ ತಿಳಿದಿದೆಯೇ? ಐಟಿ ನಿಯಮಗಳು, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕ ಡೊಮೇನ್‌ʼನಲ್ಲಿ ಸರ್ಚ್‌ ಮಾಡಲು ಸಾಧ್ಯವಾಗದ ಅಥವಾ ನಿಷೇಧಿಸಲ್ಪಟ್ಟಿರುವ ಕೆಲ ವಿಷಯಗಳಿವೆ. ಅವು ಯಾವುವು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.


ಮಕ್ಕಳ ಅಸಭ್ಯಕರ ವಿಷಯ:


Google ನಲ್ಲಿ ಮಕ್ಕಳಿಗೆ ಸಂಬಂಧಿಸಿದ ಯಾವುದೇ ಅಶ್ಲೀಲ ವಿಷಯವನ್ನು ಅಪ್ಪಿತಪ್ಪಿಯೂ ಸರ್ಚ್‌ ಮಾಡಬೇಡಿ. ಈ ರೀತಿ ಮಾಡುವುದು ಅಪರಾಧ. ಇದಕ್ಕಾಗಿ ಕಠಿಣ ಕಾನೂನು ಇದೆ. ಈ ರೀತಿ ಮಾಡಿ ಸಿಕ್ಕಿಬಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಪ್ರಕರಣದಲ್ಲಿ, ವ್ಯಕ್ತಿಗೆ ಐದರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು.


ಬಾಂಬ್ ತಯಾರಿಕೆ:


ಬಾಂಬ್ ತಯಾರಿಸುವುದು ಹೇಗೆ ಎಂದು ಗೂಗಲ್ʼನಲ್ಲಿ ಸರ್ಚ್ ಮಾಡಿ ಸಿಕ್ಕಿಬಿದ್ದರೆ, ಭದ್ರತಾ ಏಜೆನ್ಸಿಗಳ ಕಪಿಮುಷ್ಟಿಗೆ ಸಿಲುಕಬಹುದು. ಅಷ್ಟೇ ಅಲ್ಲದೆ, ಇದು ದೇಶದ ಭದ್ರತೆಗೆ ಅಪಾಯ ತರುವ ವಿಚಾರ ಎಂದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.


ಇದನ್ನೂ ಓದಿ: ಬೆಳ್ಳಿ ಉಂಗುರ ಧರಿಸುವುದು ಈ 3 ರಾಶಿಯವರಿಗೆ ಅಶುಭ: ಒಳಿತಿಗಿಂತ ಕೆಡುಕೇ ಹೆಚ್ಚು; ಕಡಗ, ಉಂಗುರವಾಗಿ ಧರಿಸಿದರಂತೂ ತಪ್ಪಿದ್ದಲ್ಲ ಕಷ್ಟ!


ಹ್ಯಾಕಿಂಗ್ ವಿಧಾನ:


ಗೂಗಲ್ ಸರ್ಚ್ ಸಹಾಯದಿಂದ ಇಂಟರ್ ನೆಟ್ʼನಲ್ಲಿ ಹ್ಯಾಕ್ ಮಾಡುವ ಮಾರ್ಗವನ್ನು ಹುಡುಕಿದರೆ ಕಠಿಣ ಶಿಕ್ಷೆಗೆ ಗುರಿಯಾಗುವುದು ಖಚಿತ. ಇದು ಜೈಲು ಶಿಕ್ಷೆಗೆ ಕೂಡ ಎಡೆಮಾಡಿಕೊಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews