ಬೆಂಗಳೂರು : WhatsApp ವಿಶ್ವದ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಅದರ ಜನಪ್ರಿಯತೆಯನ್ನೇ ಸೈಬರ್ ಅಪರಾಧಿಗಳು ದಾಳವನ್ನಾಗಿ ಮಾಡಿಕೊಂಡು ತಮ್ಮ  ಕೈ ಚಳಕ ತೋರುತ್ತಿದ್ದಾರೆ. ಕಾಲಕಾಲಕ್ಕೆ ವಾಟ್ಸಾಪ್ ಗೆ ಸಂಬಂಧಿಸಿದ ವಂಚನೆಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. WhatsAppನ ಅನೇಕ ಪರ್ಯಾಯ ಅಪ್ಲಿಕೇಶನ್‌ಗಳು ಕೂಡಾ ಈಗ ಚಾಲ್ತಿಯಲ್ಲಿವೆ. ಅಂತಹ ಅಪ್ಲಿಕೇಶನ್‌ಗಳು ಮೂಲ ಆಪ್ ಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಕಾರಣದಿಂದಾಗಿ ಜನರು ಅವುಗಳನ್ನು ಡೌನ್‌ಲೋಡ್ ಮಾಡಿ ಮತ್ತು ಬಳಸುತ್ತಾರೆ. ಆದರೆ ಅಂತಹ ಅಪ್ಲಿಕೇಶನ್‌ಗಳಿಂದ ನಿಮ್ಮ ಡೇಟಾ ಮತ್ತು ಗೌಪ್ಯತೆ ಎರಡಕ್ಕೂ  ಅಪಾಯವಿದೆ. 


COMMERCIAL BREAK
SCROLL TO CONTINUE READING

YoWhatsApp ನಿಂದ ಈ ಅಪಾಯ :
ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್ ಸ್ಕಿ ವರದಿಯ ಪ್ರಕಾರ,  ಇಂತಹ ಆಪ್ ಗಳು ಬಳಕೆದಾರರ ಡೇಟಾವನ್ನು ಕದಿಯುತ್ತಿವೆ. ಈ ವರದಿಯ ಪ್ರಕಾರ, YoWhatsAppನ ಆವೃತ್ತಿ 2.22.11.75 ರಲ್ಲಿ ಮಾಲ್ವೇರ್ ಕಂಡುಬಂದಿದೆ.  ಇದು ಬಳಕೆದಾರರ  ಡಿವೈಸ್ ಗಳಲ್ಲಿ ಮಾಲ್ವೇರ್ ಅನ್ನು  ಆಕ್ಟಿವ್ ಮಾಡಿ,  ವಿವರಗಳನ್ನು ಕದಿಯಲು ಪ್ರಾರಂಭಿಸುತ್ತದೆ. ಈ ಮೂಲಕ, ಸೈಬರ್ ಅಪರಾಧಿಗಳು ಎಲ್ಲಿ ಬೇಕಾದರೂ ಕುಳಿತು ನಿಮ್ಮ ಖಾತೆಯನ್ನು ಬಳಸಬಹುದು.


ಇದನ್ನೂ ಓದಿ : Flipkart Big Diwali Sale: ಕೇವಲ 12 ಸಾವಿರ ರೂಪಾಯಿಗೆ ಐಫೋನ್ ಖರೀದಿಸುವ ಅವಕಾಶ!


WhatsApp ನ MODDED ಆವೃತ್ತಿ ಕೂಡಾ ಅಪಾಯಕಾರಿ :
WhatsAppನ ನಕಲು ಆವೃತ್ತಿಗಳಲ್ಲಿ ಒಂದು YoWhatsApp.  ಇದರಲ್ಲೂ ಬಳಕೆದಾರರು ಮೂಲ WhatsAppಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಇದರಿಂದಾಗಿ ಇದನ್ನು ಬಳಸುವವರ ಸಂಖ್ಯೆಯೂ ಅಧಿಕವಾಗಿದೆ. ಈ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿದಾಗ ಅದು ನಿಮ್ಮ ಫೋನ್‌ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಈ ಅಪ್ಲಿಕೇಶನ್‌ನಲ್ಲಿ ಟ್ರಯಾಡಾ ಟ್ರೋಜನ್ ಮತ್ತು ಇತರ ಹಲವು ಮಾಲ್‌ವೇರ್‌ಗಳು ಕಂಡುಬಂದಿವೆ. ಈ ಮಾಲ್‌ವೇರ್‌ಗಳು ನಿಮಗೆ ಗೊತ್ತಿಲ್ಲದೆಯೇ ಬೇರೆ ಬೇರೆ ಆಪ್ ಗಳ ಚಂದಾದಾರಿಕೆಗಳನ್ನು ಪ್ರಾರಂಭಿಸುತ್ತವೆ. 


GB WhatsApp ನಿಮ್ಮ ಡೇಟಾವನ್ನು ಸಹ ಕದಿಯುತ್ತಿದೆ :
ಇದಲ್ಲದೇ ಇತ್ತೀಚೆಗೆ ಸೈಬರ್ ಸೆಕ್ಯುರಿಟಿ ಸಂಸ್ಥೆ ESET ಕೂಡ ತನ್ನದೇ ಆದ ವರದಿಯನ್ನು ಬಿಡುಗಡೆ ಮಾಡಿದೆ. ವಾಟ್ಸಾಪ್‌ನ ತದ್ರೂಪಿಯಾದ ಜಿಬಿ ವಾಟ್ಸಾಪ್ ಎಂಬ ಥರ್ಡ್ ಪಾರ್ಟಿ ಅನಧಿಕೃತ ಅಪ್ಲಿಕೇಶನ್ ಭಾರತೀಯ ಬಳಕೆದಾರರ ಡೇಟಾವನ್ನು ಕದಿಯುತ್ತಿದೆ ಎಂದು ಹೇಳಲಾಗಿದೆ. ಇದು ಭಾರತದಲ್ಲೂ ಹಲವು ಬಳಕೆದಾರರನ್ನು ಹೊಂದಿದೆ. 


ಇದನ್ನೂ ಓದಿ : Instagram Reels: ಭಾರತೀಯ ಬಳಕೆದಾರರಿಗೆ ದೀಪಾವಳಿ ಗಿಫ್ಟ್, ಈ ರೀತಿ ರೀಲ್ಸ್ ಮಾಡಿ ಲಕ್ಷಾಂತರ ರೂ. ಸಂಪಾದಿಸಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.