ವಿಶ್ವ ದೂರಸಂಪರ್ಕ ದಿನದ ಕುರಿತು ತಿಳಿದಿರಬೇಕಾದ ವಿಚಾರಗಳಿವು
World Telecommunication Day: ತಮ್ಮ ಐಸಿಟಿ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಬೇರೆ ಬೇರೆ ರಾಷ್ಟ್ರಗಳು ತಮ್ಮ ಪರಿಣತಿ ಹಾಗೂ ಸಂಪನ್ಮೂಲಗಳನ್ನು ಪರಸ್ಪರ ಹಂಚಿಕೊಳ್ಳಬಹುದು. ಇದನ್ನು ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಒಪ್ಪಂದಗಳು ಹಾಗೂ ಯೋಜನೆಗಳ ಮೂಲಕ, ಅಂತಾರಾಷ್ಟ್ರೀಯ ಸಂಸ್ಥೆಗಳ ಕಾರ್ಯಾಚರಣೆಯ ಮೂಲಕ ಸಾಧಿಸಬಹುದು.
World Telecommunication Day: ವಿಶ್ವಸಂಸ್ಥೆ ಜನ ಜೀವನದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ) ಮಹತ್ವವನ್ನು ಅರ್ಥ ಮಾಡಿಸಲು ವಿಶ್ವ ದೂರಸಂಪರ್ಕ ದಿನಾಚರಣೆಯನ್ನು ಆಚರಿಸುತ್ತದೆ. 1865ರ ಮೇ 17ರಂದು ಪ್ರಥಮ ಅಂತಾರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟ ಸ್ಥಾಪನೆಯಾದ ನೆನಪಿಗೆ ಪ್ರತಿವರ್ಷವೂ ಮೇ 17ರಂದು ದೂರಸಂಪರ್ಕ ದಿನಾಚರಣೆಯನ್ನು ಆಚರಿಸಲಾಗುತ್ತದೆ.
2023ರ ವಿಶ್ವ ದೂರಸಂಪರ್ಕ ದಿನವನ್ನು "ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳನ್ನು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸುವುದು" ಎಂಬ ಘೋಷವಾಕ್ಯದಡಿ ಆಚರಿಸಲಾಗುತ್ತಿದೆ. ಈ ವರ್ಷದ ಆಚರಣೆ ಡಿಜಿಟಲ್ ಅಂತರವನ್ನು ತಗ್ಗಿಸಲು ಮತ್ತು ಹಿಂದುಳಿದ ರಾಷ್ಟ್ರಗಳ ಜನರನ್ನು ಅಭಿವೃದ್ಧಿ ಪಡಿಸಲು ಐಸಿಟಿಗಳ ಪಾತ್ರದ ಕುರಿತು ಗಮನ ಹರಿಸುತ್ತದೆ.
ಐಸಿಟಿಗಳು ಹಿಂದುಳಿದ ರಾಷ್ಟ್ರಗಳಲ್ಲಿ ಜೀವನಮಟ್ಟ ವೃದ್ಧಿಸಲು ಪ್ರಮುಖ ಪಾತ್ರ ವಹಿಸುತ್ತವೆ. ಐಸಿಟಿಗಳನ್ನು ಶಿಕ್ಷಣ, ಆರೋಗ್ಯ, ಹಾಗೂ ಇತರ ಅಗತ್ಯ ಸೇವೆಗಳನ್ನು ಪಡೆಯಲು ಬಳಸಿಕೊಳ್ಳಬಹುದು. ಐಸಿಟಿಗಳು ಆರ್ಥಿಕ ಅಭಿವೃದ್ಧಿ ಸಾಧಿಸಲು ಮತ್ತು ಉದ್ಯೋಗ ಸೃಷ್ಟಿಸಲು ಸಹಾಯ ಮಾಡುತ್ತವೆ.
ಆದರೆ, ಹಿಂದುಳಿದ ರಾಷ್ಟ್ರಗಳಲ್ಲಿರುವ ಎಲ್ಲ ಜನರಿಗೂ ಐಸಿಟಿಗಳನ್ನು ಬಳಸುವಂತೆ ಮಾಡುವಲ್ಲಿ ಹಲವಾರು ಸವಾಲುಗಳಿವೆ. ಆ ಸವಾಲುಗಳಲ್ಲಿ ಪ್ರಮುಖವಾದವುಗಳೆಂದರೆ,
>> ಅಪಾರ ಪ್ರಮಾಣದ ಖರ್ಚು
>> ಮೂಲಭೂತ ವ್ಯವಸ್ಥೆಗಳ ಕೊರತೆ
>> ಕೌಶಲ್ಯದ ಕೊರತೆ
>> ಜಾಗೃತಿಯ ಕೊರತೆ
ಇಂತಹ ಸವಾಲುಗಳ ಕುರಿತಾದ ಅರಿವು ಮೂಡಿಸಲು ಮತ್ತು ಅವುಗಳನ್ನು ಸರಿಪಡಿಸಲು ವಿಶ್ವ ದೂರಸಂಪರ್ಕ ದಿನ ಸೂಕ್ತ ಅವಕಾಶವನ್ನು ಕಲ್ಪಿಸುತ್ತದೆ. ಅದರೊಡನೆ, ಈ ದಿನ ಐಸಿಟಿಗಳು ಹಿಂದುಳಿದ ರಾಷ್ಟ್ರಗಳಲ್ಲಿ ಜಾರಿಗೆ ತಂದ ಬೆಳವಣಿಗೆಯನ್ನು ಸಂಭ್ರಮಿಸಲೂ ಸೂಕ್ತ ಅವಕಾಶವಾಗಿದೆ.
ವಿಶ್ವ ದೂರಸಂಪರ್ಕ ದಿನದ ಕುರಿತು ತಿಳಿದಿರಬೇಕಾದ ವಿಚಾರಗಳು:
* ವಿಶ್ವ ದೂರಸಂಪರ್ಕ ದಿನಾಚರಣೆಯನ್ನು ಪ್ರತಿವರ್ಷವೂ ಮೇ 17ರಂದು ಆಚರಿಸಲಾಗುತ್ತದೆ.
* 2023ರ ದೂರಸಂಪರ್ಕ ದಿನಾಚರಣೆ "ಅತ್ಯಂತ ಹಿಂದುಳಿದ ರಾಷ್ಟ್ರಗಳನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸುವುದು" ಎಂಬ ಥೀಮ್ ಹೊಂದಿದೆ.
* ಐಸಿಟಿಗಳು ಅತ್ಯಂತ ಹಿಂದುಳಿದ ರಾಷ್ಟ್ರಗಳಲ್ಲಿ ಜನರ ಜೀವನಮಟ್ಟ ಸುಧಾರಿಸುವಲ್ಲಿ ಬಹುಮುಖ್ಯ ಪಾತ್ರ ಹೊಂದಿವೆ.
* ಹಾಗೆಂದು ಹಿಂದುಳಿದ ರಾಷ್ಟ್ರಗಳ ಜನರಿಗೂ ಐಸಿಟಿಗಳ ಪ್ರಯೋಜನ ಲಭಿಸುವಂತಾಗಬೇಕಾದರೆ ಒಂದಷ್ಟು ಸವಾಲುಗಳಿಗೆ ಉತ್ತರಿಸಬೇಕಾಗುತ್ತದೆ.
ಮಾಹಿತಿ ಮತ್ತು ಸಂಪರ್ಕ ವ್ಯವಸ್ಥೆ ಅಭಿವೃದ್ಧಿ ಪಡಿಸಲು ರಾಷ್ಟ್ರವೊಂದು ಹೊಂದಿರಬೇಕಾದ ಮೂಲಭೂತ ವ್ಯವಸ್ಥೆಗಳು:
ನಂಬಿಕರ್ಹವಾದ, ಮತ್ತು ಹೆಚ್ಚು ವೆಚ್ಚದಾಯಕವಲ್ಲದ ಅಂತರ್ಜಾಲ ವ್ಯವಸ್ಥೆ. ಇಂತಹ ಸಮರ್ಪಕ ಅಂತರ್ಜಾಲ ವ್ಯವಸ್ಥೆಯ ಲಭ್ಯತೆಯಿಲ್ಲದೆ ಐಸಿಟಿಯ ಇತರ ಸೇವೆಗಳನ್ನು ಬಳಸಲು ಸಾಧ್ಯವಿಲ್ಲ.
ಸಮರ್ಥ ದೂರಸಂಪರ್ಕ ಜಾಲ:
ಇದು ವೈರ್ಡ್ ಹಾಗೂ ವೈರ್‌ಲೆಸ್ ದೂರಸಂಪರ್ಕ ವ್ಯವಸ್ಥೆಗಳನ್ನು ಒಳಗೊಂಡಿದೆ. ಈ ಜಾಲ ಮಾಹಿತಿ ಮತ್ತು ಧ್ವನಿ ಸಂಪರ್ಕವನ್ನು ತಲುಪಿಸಲು ಅತ್ಯಂತ ಅವಶ್ಯಕವಾಗಿದೆ.
ಸಮರ್ಥ ಕಂಪ್ಯೂಟಿಂಗ್ ಸಾಮರ್ಥ್ಯ:
ಇದು ಕಂಪ್ಯೂಟರ್‌ಗಳು, ಸರ್ವರ್‌ಗಳು, ಹಾಗೂ ಮಾಹಿತಿಗಳನ್ನು ಸಂಗ್ರಹಿಸಲು, ಅರ್ಥೈಸಿಕೊಳ್ಳಲು ಮತ್ತು ರವಾನಿಸಲು ಅಗತ್ಯವಿರುವ ಇತರ ಉಪಕರಣಗಳನ್ನು ಒಳಗೊಂಡಿರುತ್ತದೆ.
ಕುಶಲ ವೃತ್ತಿಪರರು:
ಇದು ಐಸಿಟಿ ಮೂಲಭೂತ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು, ನಿರ್ಮಿಸಲು, ಹಾಗೂ ನಿರ್ವಹಿಸಲು ಅಗತ್ಯವಿರುವ ಜ್ಞಾನ ಹಾಗೂ ಕೌಶಲ್ಯ ಹೊಂದಿರುವ ಉದ್ಯೋಗಿಗಳನ್ನು ಒಳಗೊಂಡಿರುತ್ತದೆ.
ಬೆಂಬಲ ನೀತಿ ಹಾಗೂ ಪರಿಸರ:
ಇದು ಐಸಿಟಿಗಳ ಸ್ಥಾಪನೆ ಹಾಗೂ ಬಳಕೆಗೆ ಹಣ ಹೂಡಿಕೆ ಮಾಡುವುದನ್ನು ಉತ್ತೇಜಿಸುವ, ಐಸಿಟಿಗಳ ಬಳಕೆಯನ್ನು ಬೆಂಬಲಿಸುವ ನೀತಿಗಳನ್ನು ಒಳಗೊಂಡಿರುತ್ತದೆ.
ಈ ಮೂಲಭೂತ ವ್ಯವಸ್ಥೆಗಳೊಡನೆ, ಒಂದು ದೇಶದ ಮಾಹಿತಿ ಮತ್ತು ಸಂವಹನ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಇನ್ನೂ ಹಲವು ಅಂಶಗಳು ಕಾರಣವಾಗುತ್ತವೆ. ಅವೆಂದರೆ,
ಸರ್ಕಾರದಿಂದ ಸ್ಥಿರವಾದ ಬದ್ಧತೆ:
ಐಸಿಟಿ ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಸೇವೆಗಳನ್ನು ಉತ್ತೇಜಿಸಲು ಸರ್ಕಾರ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಹೂಡಿಕೆ, ನಿಯಂತ್ರಣ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾಧಿಸಬಹುದು.
ಖಾಸಗಿ ವಲಯದ ಹೂಡಿಕೆ:
ಐಸಿಟಿ ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಖಾಸಗಿ ಸಂಸ್ಥೆಗಳೂ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಇದನ್ನು ದೂರಸಂಪರ್ಕ ಜಾಲಗಳ ನಿರ್ಮಾಣ ಮತ್ತು ನಿರ್ವಹಣೆ, ಮಾಹಿತಿ ಕೇಂದ್ರಗಳು ಹಾಗೂ ಇತರ ಐಸಿಟಿ ವ್ಯವಸ್ಥೆಗಳ ಸ್ಥಾಪನೆಯ ಮೂಲಕ ಸಾಧಿಸಬಹುದು.
ಅಂತಾರಾಷ್ಟ್ರೀಯ ಸಹಕಾರ:
ತಮ್ಮ ಐಸಿಟಿ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಬೇರೆ ಬೇರೆ ರಾಷ್ಟ್ರಗಳು ತಮ್ಮ ಪರಿಣತಿ ಹಾಗೂ ಸಂಪನ್ಮೂಲಗಳನ್ನು ಪರಸ್ಪರ ಹಂಚಿಕೊಳ್ಳಬಹುದು. ಇದನ್ನು ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಒಪ್ಪಂದಗಳು ಹಾಗೂ ಯೋಜನೆಗಳ ಮೂಲಕ, ಅಂತಾರಾಷ್ಟ್ರೀಯ ಸಂಸ್ಥೆಗಳ ಕಾರ್ಯಾಚರಣೆಯ ಮೂಲಕ ಸಾಧಿಸಬಹುದು.
ರಾಷ್ಟ್ರವೊಂದರ ಮಾಹಿತಿ ಮತ್ತು ಸಂವಹನ ವ್ಯವಸ್ಥೆಯ ಅಭಿವೃದ್ಧಿಯಿಂದಾಗುವ ಪ್ರಯೋಜನಗಳು:-
ಹೆಚ್ಚಿನ ಆರ್ಥಿಕ ಪ್ರಗತಿ: ಐಸಿಟಿಗಳು ಉತ್ಪಾದಕತೆ, ದಕ್ಷತೆ ಹಾಗೂ ಹೊಸತನಗಳ ಅನ್ವೇಷಣೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಲು ನೆರವಾಗುತ್ತವೆ.
ಉತ್ತಮ ಶಿಕ್ಷಣ ಮತ್ತು ಆರೋಗ್ಯ:
ಐಸಿಟಿಗಳು ಈ ಮೊದಲು ಲಭ್ಯವಿರದ ಮಾಹಿತಿ ಮತ್ತು ಸಂಪನ್ಮೂಲಗಳ ಬಳಕೆಗೆ ಅನುವು ಮಾಡಿಕೊಡುವ ಮೂಲಕ ಶಿಕ್ಷಣ ಮತ್ತು ಆರೋಗ್ಯವನ್ನು ಅಭಿವೃದ್ಧಿ ಪಡಿಸಲು ಕಾರಣವಾಗುತ್ತವೆ.
ಅಭಿವೃದ್ಧಿ ಹೊಂದಿದ ಸರ್ಕಾರಿ ಸೇವೆಗಳು:
ಐಸಿಟಿಗಳು ಸರ್ಕಾರಿ ಸೇವೆಗಳನ್ನು ಹೆಚ್ಚು ಸಮರ್ಥ, ಸುಲಭ ಹಾಗೂ ಪಾರದರ್ಶಕವನ್ನಾಗಿಸಿ, ಅವುಗಳನ್ನು ಇನ್ನಷ್ಟು ಯಶಸ್ವಿಯಾಗುವಂತೆ ಮಾಡುತ್ತವೆ.
ಸಾಮಾಜಿಕ ಒಗ್ಗಟ್ಟು ಹೆಚ್ಚಳ:
ಐಟಿಸಿಗಳು ಸಂಪರ್ಕ ಮತ್ತು ಸಹಯೋಗಗಳಿಗೆ ಉತ್ತಮ ವೇದಿಕೆ ಒದಗಿಸಿ, ಆ ಮೂಲಕ ಸಾಮಾಜಿಕ ಒಗ್ಗಟ್ಟನ್ನು ಅಭಿವೃದ್ಧಿ ಪಡಿಸುತ್ತವೆ. ಯಾವುದೇ ದೇಶದ ದೂರಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದು ಒಂದು ಸವಾಲಿನ ವಿಚಾರವಾಗಿದೆ. ಆದರೆ, ಇದನ್ನು ಸಾಧಿಸುವುದರಿಂದ ಉಂಟಾಗುವ ಪ್ರಯೋಜನಗಳು ಅಪಾರವಾಗಿವೆ. ಐಸಿಟಿ ಮೂಲಭೂತ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ದೇಶಗಳು ತಮ್ಮ ಆರ್ಥಿಕ ಪ್ರಗತಿ, ಶಿಕ್ಷಣ, ಆರೋಗ್ಯ, ಸರ್ಕಾರಿ ಸೇವಾ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಸಾಮಾಜಿಕ ಒಗ್ಗಟ್ಟು ಸಾಧಿಸಲು ಸಾಧ್ಯವಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.