ಬೆಂಗಳೂರು : ಬೇಸಿಗೆಯಲ್ಲಿ ಎಸಿ ಕೂಲರ್ ನ ಅಗತ್ಯ ಹೆಚ್ಚಿರುತ್ತದೆ.  ಬೇಸಿಗೆ ಬಂತೆಂದರೆ ಸಾಕು ಅವುಗಳ ಬೆಲೆಯೂ ಗಗನಕೇರುತ್ತದೆ. ಹೆಚ್ಚಿನ ಬೆಲೆಯಿಂದಾಗಿ ಎಲ್ಲರಿಗೂ ಎಸಿ ಖರೀದಿಸುವುದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಎಸಿ ಬಳಸಿದ ಕಾರಣದಿಂದಾಗಿ ಬರುವ ಅಧಿಕ ವಿದ್ಯುತ್ ಬಿಲ್ ನಂತರ ಕಾಡಲು ಶುರುವಾಗುತ್ತದೆ. ಆದರೆ ಇನ್ನು ಆ ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಮಾರುಕಟ್ಟೆಗೆ ಕಾಲಿಟ್ಟಿರುವ ಕೂಲಿಂಗ್ ಬೆಡ್ ಶೀಟ್  ಹಾಸಿಗೆಯ ಮೇಲೆ ಹಾಸುತ್ತಿದ್ದತೆಯೇ ತಂಪು ಗಾಳಿ ನೀಡುತ್ತದೆ. 


COMMERCIAL BREAK
SCROLL TO CONTINUE READING

Amazon ನಲ್ಲಿ ಕೈಗೆಟುಕುವ ಬೆಲೆಗೆ ಲಭ್ಯ : 
ಇದನ್ನು ಕೂಲಿಂಗ್ ಜೆಲ್ ಮೆಟ್ರೆಸ್ ಎಂದು ಕರೆಯಲಾಗುತ್ತದೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಲಭ್ಯವಿದೆ. ಈ ಹಾಸಿಗೆಯನ್ನು ಅಮೆಜಾನ್‌ನಿಂದ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಇದರ ಬೆಲೆ 1500 ರೂ. ಆದರೆ Amazonನಲ್ಲಿ 699 ರೂಗಳಲ್ಲಿ ಲಭ್ಯವಿದೆ. ಬೆಡ್‌ಶೀಟ್‌ಗಳ ಮೇಲೆ ಭಾರಿ ರಿಯಾಯಿತಿ ಲಭ್ಯವಿದೆ.


ಇದನ್ನೂ ಓದಿ : ಕೇವಲ 200 ರೂ.ಗೆ ಖರೀದಿಸಿ ಪೋರ್ಟಬಲ್ ಮಿನಿ ಫ್ಯಾನ್


ಬೆಡ್ ಶೀಟ್ ಹೇಗೆ ನೀಡುತ್ತದೆ ತಂಪು ಗಾಳಿ : 
ಈ ಬೆಡ್ ಶೀಟ್ ನಲ್ಲಿ ಜೆಲ್ ತಂತ್ರಜ್ಞಾನವನ್ನು ಬಳಸಲಾಗಿದೆ. ಇದನ್ನು  ಸಾಕೆಟ್‌ನಲ್ಲಿ ಅನ್ವಯಿಸಿದ ತಕ್ಷಣ ಹಾಳೆಯನ್ನು ನಿಮಿಷಗಳಲ್ಲಿ ತಂಪಾಗಿಸುತ್ತದೆ. ಇದು ವೈಬ್ರೆಟ್ ಆಗುವುದಿಲ್ಲ. ಮೌನವಾಗಿ ತಮ್ಮ  ಕೆಲಸವನ್ನು ಮಾಡುತ್ತದೆ. 


ಒಣ ಬಟ್ಟೆಯಿಂದ ಸ್ವಚ್ಛಗೊಳಿಸಬೇಕು :
ಈ ಬೆಡ್ ಶೀಟ್ ಕೊಳಕಾಗಿದ್ದರೆ, ಅದನ್ನು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಒಂದು ವೇಳೆ ಒದ್ದೆಯಾದ ಬಟ್ಟೆಯನ್ನು ಬಳಸಿದರೆ, ಬೆಡ್ ಶೀಟ್ ಹಾಳಾಗಬಹುದು.   ಆದ್ದರಿಂದ, ಅದನ್ನು ಸ್ವಚ್ಛಗೊಳಿಸಲು ಒಣ ಬಟ್ಟೆಯನ್ನು ಮಾತ್ರ ಬಳಸಿ. 


ಇದನ್ನೂ ಓದಿ : Solar Charging Smartwatch: ಬಿಸಿಲಲ್ಲಿ ಚಾರ್ಜ್ ಆಗುವ ಸ್ಮಾರ್ಟ್ ವಾಚ್ ಬಿಡುಗಡೆ, ಇದರಂತಹ ವೈಶಿಷ್ಟ್ಯ ಬೇರೆ ವಾಚ್ ನಲ್ಲಿಲ್ಲ


ಈ ಬೆಡ್ ಶೀಟ್ ಅನ್ನು ಬೇಸಿಗೆಯಲ್ಲಿ ಬಳಸಲಾಗುತ್ತದೆ. ಇದನ್ನು  ಬಳಸುವಾಗ ಫ್ಯಾನ್ ಆನ್ ಮಾಡಿದರೆ ಇನ್ನೂ ಹೆಚ್ಚು ತಂಪಾಗುತ್ತದೆ.   ಆದರೆ ಇದನ್ನೂ ಬಳಸುವಾಗ ಹಾಸಿಗೆಯ ಅಗತ್ಯವಿರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.