Budget Smartphone: ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಲಾವಾ ಕೈಗೆಟುಕುವ ಬೆಲೆಯ ಜಬರ್ದಸ್ತ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ನಿನ್ನೆಯಷ್ಟೇ(ಬುಧವಾರ, 02 ಆಗಸ್ಟ್ 2023) ಲಾವಾ ಕಂಪನಿಯ "ಯುವ 2" ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, 5,000 mAhಬ್ಯಾಟರಿ ಸಾಮರ್ಥ್ಯದ ಈ ಸ್ಮಾರ್ಟ್‌ಫೋನ್ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಲಾವಾ ಯುವ 2 ಸ್ಮಾರ್ಟ್‌ಫೋನ್ ಬೆಲೆ: 
ಮೊದಲೇ ತಿಳಿಸಿದಂತೆ ಲಾವಾ ಯುವ 2 ಸ್ಮಾರ್ಟ್‌ಫೋನ್ ಬಜೆಟ್ ಸ್ಮಾರ್ಟ್‌ಫೋನ್ ಆಗಿದ್ದು ಇದರ ಬೆಲೆ ಕೇವಲ  6,999 ರೂ. ಗಳು ಮಾತ್ರ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು  ಗ್ಲಾಸ್ ಬ್ಲೂ, ಗ್ಲಾಸ್ ಲ್ಯಾವೆಂಡರ್ ಮತ್ತು ಗ್ಲಾಸ್ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. 


ಇದನ್ನೂ ಓದಿ- ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಸರ್ಕಾರ ಓದುತ್ತಾ? ಇಲ್ಲಿದೆ ಸತ್ಯಾಸತ್ಯತೆ


ಲಾವಾ ಯುವ 2 ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು: 
ಲಾವಾ ಯುವ 2 ಸ್ಮಾರ್ಟ್‌ಫೋನ್ 3ಜಿಬಿ ರ್ಯಾಮ್ ಮತ್ತು 64ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಯುನಿಸಾಕ್ T606 ಆಕ್ಟಾ-ಕೋರ್ ಪ್ರೊಸೆಸರ್ನೊಂದಿಗೆ ಸಜ್ಜುಗೊಂಡಿದ್ದು 3ಜಿಬಿ ವರ್ಚುವಲ್ ರ್ಯಾಮ್ ಗೆ ಕೂಡ ಬೆಂಬಲ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. 


90 Hz ರಿಫ್ರೆಶ್ ದರದೊಂದಿಗೆ  ಲಭ್ಯವಿರುವ ಲಾವಾ ಯುವ 2 ಸ್ಮಾರ್ಟ್‌ಫೋನ್ ಹೊಸ ಸಿಂಕ್ ಡಿಸ್ಪ್ಲೇಯನ್ನು ಹೊಂದಿದೆ. ಸಿಂಕ್ ಡಿಸ್ಪ್ಲೇ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೆಚ್ಚಿಸುತ್ತದೆ ಮತ್ತು ಬೆಜೆಲ್ಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿ ವಿವರಿಸಿದೆ. ಅಷ್ಟೇ ಅಲ್ಲದೆ, ಇದರಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಅನಾಮಧೇಯ ಸ್ವಯಂ ಕರೆ ರೆಕಾರ್ಡಿಂಗ್ ಮತ್ತು ಶಬ್ದ ರದ್ದತಿಗಾಗಿ ಡ್ಯುಯಲ್ ಮೈಕ್ರೊಫೋನ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ. 


ಪ್ರಸ್ತುತ ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುವ ಲಾವಾ ಯುವ 2 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕ್ಲೀನ್ ಮತ್ತು ಬ್ಲೋಟ್‌ವೇರ್-ಮುಕ್ತ ಆಂಡ್ರಾಯ್ಡ್ ಅನುಭವವನ್ನು ನೀಡುತ್ತದೆ ಎಂದು ಸ್ಮಾರ್ಟ್‌ಫೋನ್ ತಯಾರಕರು ಹೇಳಿಕೊಂಡಿದ್ದಾರೆ.  ಕಂಪನಿಯು ಎರಡು ವರ್ಷಗಳ ಅವಧಿಗೆ ಆಂಡ್ರಾಯ್ಡ್ ಅಪ್‌ಗ್ರೇಡ್ ಮತ್ತು ತ್ರೈಮಾಸಿಕ ಸುರಕ್ಷತೆ ನವೀಕರಣಗಳ ಭರವಸೆಯನ್ನೂ ಸಹ ನೀಡಿದೆ. 


ಇದನ್ನೂ ಓದಿ- Wi-Fiಗೆ ಸಂಬಂಧಿಸಿದ ಈ ಸುರಕ್ಷತಾ ತಪ್ಪುಗಳು ನಿಮ್ಮನ್ನು, ನಿಮ್ಮ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸಬಹುದು ಎಚ್ಚರ!


ಕ್ಯಾಮರಾ:
ಲಾವಾ ಯುವ 2 ಸ್ಮಾರ್ಟ್‌ಫೋನ್ 13MP ಡ್ಯುಯಲ್ AI ಹಿಂಬದಿಯ ಕ್ಯಾಮರಾ ಮತ್ತು 5MP ಮುಂಭಾಗದ ಕ್ಯಾಮರಾ ಜೊತೆಗೆ ಸ್ಕ್ರೀನ್ ಫ್ಲ್ಯಾಶ್ ಅನ್ನು ಒಳಗೊಂಡಿದೆ. 


ಬ್ಯಾಟರಿ: 
ಟೈಪ್-ಸಿ ಚಾರ್ಜರ್‌ನೊಂದಿಗೆ ಬರಲಿರುವ ಲಾವಾ ಯುವ 2 ಸ್ಮಾರ್ಟ್‌ಫೋನ್ 5,000 mAh ಬ್ಯಾಟರಿಯನ್ನು ಹೊಂದಿರಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.