Inverter Bulb: ನಿಮ್ಮ ಮನೆಯಲ್ಲಿಯೂ ಕೂಡ ಹಗಲು ರಾತ್ರಿ ನಿರಂತರ ವಿದ್ಯುತ್ ಕಡಿತದ ಸಮಸ್ಯೆ ಇದ್ದರೆ, ಅದರಿಂದ ನಿಮ್ಮ ಕೆಲಸ ಪ್ರಭಾವಿತಗೊಳ್ಳುವುದು ಗ್ಯಾರಂಟಿ.  ರಾತ್ರಿ ವೇಳೆ ವಿದ್ಯುತ್ ವ್ಯತ್ಯಯ ಉಂಟಾದಾಗ ಬೆಳಕಿನ ಸಮಸ್ಯೆ ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಯಾವುದೇ ತೊಂದರೆಯಾಗಬಾರದು ಎಂಬುದನ್ನೂ ಗಮನದಲ್ಲಿಟ್ಟುಕೊಂಡು ಇಂದು ನಾವು ನಿಮಗಾಗಿ ಒಂದು ಎಲ್ಇಡಿ ಬಲ್ಬ್ ಮಾಹಿತಿಯನ್ನು ತಂದಿದ್ದೇವೆ. ಈ ಬಲ್ಬ್ ವಿದ್ಯುತ್ ಹೋದ ನಂತರವೂ ಹಲವು ಗಂಟೆಗಳವರೆಗೆ ಕೆಲಸ ಮಾಡುತ್ತದೆ. ಈ ಬಲ್ಬ್ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಇಂದು ನಾವು ಅದರ ವಿಶೇಷತೆ ಮತ್ತು ಅದರ ಬೆಲೆಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Watch Netflix Free: ವರ್ಷವಿಡೀ ನೆಟ್ ಫ್ಲಿಕ್ಸ್ ಮೇಲೆ ಉಚಿತ ಚಲನಚಿತ್ರಗಳನ್ನು ವೀಕ್ಷಿಸಬೇಕೆ? ಇಲ್ಲಿದೆ ಪ್ಲಾನ್ !


ಇದು ಯಾವ ಬಲ್ಬ್
ನಾವು ಇಲ್ಲಿ ಮಾಹಿತಿ ನೀಡಲು ಹೋಗುತ್ತಿರುವ ಬಲ್ಬ್‌ನ ಹೆಸರು DP 7812 (ರೀಚಾರ್ಜಿಬಲ್ LED ಎಮರ್ಜೆನ್ಸಿ ಬಲ್ಬ್) 18W LED, 2000mAh ಬ್ಯಾಟರಿ ಮೂಲಕ 6 ಗಂಟೆಗಳ ಬೆಳಕು ನೀಡುವ  ಎಮರ್ಜೆನ್ಸಿ ಲೈಟ್ ಇದಾಗಿದ್ದು, ಇದನ್ನು ನೀವು  ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಇದರ ಬೆಲೆಯ ಬಗ್ಗೆ ಹೇಳುವುದಾದರೆ, ಗ್ರಾಹಕರು ಇದನ್ನು ಕೇವಲ 549 ರೂಗಳಲ್ಲಿ ಖರೀದಿಸಬಹುದು, ಸಾಮಾನ್ಯ ಎಲ್ಇಡಿ ಬಲ್ಬ್ಗೆ ಹೋಲಿಸಿದರೆ ಇದರ ಬೆಲೆ ಸುಮಾರು ಎರಡು ಪಟ್ಟು ಹೆಚ್ಚು, ಆದರೆ ಇದರ ಹೊರತಾಗಿಯೂ, ಇದು ಸಾಮಾನ್ಯ ಎಲ್ಇಡಿ ಬಲ್ಬ್ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.  ನಿಮಗೆ ಗಂಟೆಗಳ ಕಾಲ ಬೆಳಕನ್ನು ನೀಡುತ್ತದೆ. ಈ ಎಲ್‌ಇಡಿ ಬಲ್ಬ್‌ಗಳು ಶಕ್ತಿಯುತವಾಗಿದ್ದು, ವಿದ್ಯುತ್ ಕಡಿತದ ನಂತರ ಸುಮಾರು 4 ಗಂಟೆಗಳ ಕಾಲ ಅವು ಉರಿಯುತ್ತಲೇ ಇರುತ್ತವೆ ಮತ್ತು ನೀವು ತುರ್ತು ಸಮಯದಲ್ಲಿ ಅವುಗಳನ್ನು ಬಳಸಬಹುದು. ವಿಶೇಷವೆಂದರೆ ಅವುಗಳನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅಗತ್ಯವಿಲ್ಲ ಮತ್ತು ಅವುಗಳು ತಮ್ಮದೇ ಆದ ರೀತಿಯಲ್ಲಿ ಚಾರ್ಜ್ ಆಗುತ್ತವೆ.


ಇದನ್ನೂ ಓದಿ-Big Update: ಇಂದಿನಿಂದ 4 ಸ್ಮಾರ್ಟ್ ಫೋನ್ ಗಳಲ್ಲಿ ಸಿಂಗಲ್ ವಾಟ್ಸ್ ಆಪ್ ಅಕೌಂಟ್ ನಿರ್ವಹಿಸಿ, ಝಕರ್ಬರ್ಗ್ ಘೋಷಣೆ


ವೈಶಿಷ್ಟ್ಯಗಳು ಏನು?
ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಬಲ್ಬ್ ವಿದ್ಯುತ್ ಕಡಿತದ ಸಮಯದಲ್ಲಿ 6 ಗಂಟೆಗಳ ಕಾಲ ನಿರಂತರ ಬೆಳಕಿನ ಬ್ಯಾಕಪ್ ಅನ್ನು ಒದಗಿಸುತ್ತದೆ, ಇವು ಶಕ್ತಿಯುತವಾದ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿವೆ, ಚಾರ್ಜ್ ಆಗಲು ಇವು  8-10 ಗಂಟೆಗಳ ಸಮಯವಕಾಶ ತೆಗೆದುಕೊಳ್ಳುತ್ತವೆ. ಈ 18W ಇನ್ವರ್ಟರ್ ತುರ್ತು LED ಬಲ್ಬ್ ಆನ್ ಮಾಡಿದಾಗ  ಅದು ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ. ಇದನ್ನು ನಿಮ್ಮ ಮನೆ, ಚಿಲ್ಲರೆ ಅಂಗಡಿಗಳು ಮತ್ತು ಆಸ್ಪತ್ರೆಯಲ್ಲಿ ನಿಮ್ಮ ಅಧ್ಯಯನ / ಡ್ರಾಯಿಂಗ್ ರೂಮ್ ಮತ್ತು ಸ್ನಾನಗೃಹದಲ್ಲಿ ಬಳಸಬಹುದು. ಇದರಲ್ಲಿ ನಿಮಗೆ 6 ತಿಂಗಳ ವಾರಂಟಿ ಸಿಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ