ಬೆಂಗಳೂರು : ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸುವ ಪ್ರವೃತ್ತಿ ದಿನೇ ದಿನೇ  ಹೆಚ್ಚಾಗಿದೆ. ಈಗ ಮನೆ ಕಟ್ಟಲು ಕೂಡಾ ಮರುಬಳಕೆಯ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಹೀಗೆ 3ಡಿ ಪ್ರಿಂಟ್ ಮೂಲಕ ಮನೆ ಸಿದ್ಧಪಡಿಸಲಾಗುತ್ತಿದೆ. ಲಾಸ್ ಏಂಜಲೀಸ್ ಮೂಲದ ಸ್ಟಾರ್ಟಪ್ ಕಂಪನಿ ಅಜುರೆ ಈ ಯೋಜನೆಯನ್ನು ಪ್ರಾರಂಭಿಸಿದೆ. ಕಂಪನಿಯು 3ಡಿ ಪ್ರಿಂಟ್‌ಗಳ ಮೂಲಕ ಮನೆಗಳನ್ನು ನಿರ್ಮಿಸಲು ಪ್ಲಾಸ್ಟಿಕ್ ಅನ್ನು ಬಳಸುತ್ತಿದೆ. ಅಜೂರೆ ಹಲವಾರು  ಮನೆಯ  ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇದರ ಬೆಲೆ ಕೂಡಾ ತೀರಾ ಕಡಿಮೆ. 


COMMERCIAL BREAK
SCROLL TO CONTINUE READING

ಏಪ್ರಿಲ್‌ನಲ್ಲಿ, ಮರುಬಳಕೆಯ ಪ್ಲಾಸ್ಟಿಕ್ ವಸ್ತುಗಳಿಂದ ತಯಾರಿಸಿದ ವಿಶ್ವದ ಮೊದಲ 3D ಮುದ್ರಿತ ಬ್ಯಾಕ್ ಯಾರ್ಡ್ ಸ್ಟುಡಿಯೋ'ವನ್ನು ಅಜೂರೆ ಅನಾವರಣಗೊಳಿಸಿತು. ಸ್ಟಾರ್ಟ್‌ಅಪ್ ಪ್ರಕಾರ, ಅಜೂರೆ ಮುದ್ರಣ ಸಾಮಗ್ರಿಗಳಲ್ಲಿ 60% ಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಆಹಾರ ಪ್ಯಾಕೇಜಿಂಗ್‌ನಲ್ಲಿ ಕಂಡುಬರುವ ವಾಟರ್ ಪ್ರೂಫ್ ಪ್ಲಾಸ್ಟಿಕ್ ಪಾಲಿಮರ್ ಅನ್ನು ಬಳಸುತ್ತದೆ. 


ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆಗೆ 5G Smartphone ಹೊರ ತರುತ್ತಿದೆ ಜಿಯೋ .. ! ಬೆಲೆ ಕೇಳಿದರೆ ಖರೀದಿಸುವುದು ಗ್ಯಾರಂಟಿ


ಕಂಪನಿಯು ಈಗ ಮುಂದುವರಿಯಲು ಸಿದ್ಧವಾಗಿದೆ. ಸಾಂಪ್ರದಾಯಿಕ ಮನೆಗಿಂತ 70 ಪ್ರತಿಶತ ವೇಗ ಮತ್ತು 30 ಪ್ರತಿಶತ ಅಗ್ಗವಾಗಿರುವ ಮನೆಗಳನ್ನು ಕಂಪನಿ ನಿರ್ಮಿಸುತ್ತಿದೆ ಎಂದು ಹೇಳಿದೆ. ಹೆಚ್ಚಿನ 3D ಪ್ರಿಂಟಿಂಗ್ ಮನೆ ಬಿಲ್ಡರ್‌ಗಳು ಪ್ರಸ್ತುತ ತಮ್ಮ ಮನೆಗಳನ್ನು ನಿರ್ಮಿಸಲು ಕಾಂಕ್ರೀಟ್ ಅನ್ನು ಬಳಸುತ್ತಾರೆ. ಆದರೆ ಅಜೂರ್ ಮರುಬಳಕೆಯ ಪ್ಲಾಸ್ಟಿಕ್ ಅನ್ನು ಬಳಸುತ್ತಿದೆ.


ನಮ್ಮ ಗ್ರಾಹಕರು ಮತ್ತು ಭವಿಷ್ಯದ ಪೀಳಿಗೆಗೆ ಸುಸ್ಥಿರ ಉತ್ಪನ್ನಗಳನ್ನು  ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅಜುರೆ ಸಿಇಒ ರಾಸ್ ಮ್ಯಾಗೈರ್ ಹೇಳಿದ್ದಾರೆ. ಪ್ಲ್ಯಾಸ್ಟಿಕ್ 3D ಪ್ರಿಂಟೆಡ್ ಸ್ಟುಡಿಯೋ ಮತ್ತು ಆಕ್ಸೆಸರಿ ಡ್ಯುಲಿಂಗ್ ಯುನಿಟ್ ಅನ್ನು  ಪ್ರಿ ಆರ್ಡರ್ ಗಾಗಿ ಸಿದ್ದಗೊಳಿಸಲಾಗಿದೆ. 


ಇದನ್ನೂ ಓದಿ : ಭಾರತದ ಸ್ಟಾರ್ಟಪ್ ವಿಭಾಗದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದ ಬೆಂಗಳೂರು


24 ಗಂಟೆಗಳಲ್ಲಿ ಸಿದ್ಧವಾಗಲಿದೆ ಮನೆ :
24 ಗಂಟೆಗಳಲ್ಲಿ ಮನೆ ಸಿದ್ಧಪಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. 120 ಚದರ ಅಡಿಯ ಸ್ಕೈ ಬ್ಯಾಕ್‌ಯಾರ್ಡ್ ಸ್ಟುಡಿಯೊದ ಅತ್ಯಂತ ಚಿಕ್ಕ ಫ್ಯೂಚರಿಸ್ಟಿಕ್‌ನ ಬೆಲೆ $24,900 (ಅಂದಾಜು ರೂ. 20 ಲಕ್ಷ). ಈ ಮನೆ ಒಂದೇ ಕೋಣೆಯನ್ನು ಹೊಂದಿದ್ದು, ಉಳಿದ ಸ್ಥಳವನ್ನು ಬ್ಯಾಕ್ ಯಾರ್ಡ್  ಕಚೇರಿ ಅಥವಾ ಜಿಮ್ ಆಗಿ ಬಳಸಬಹುದು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.