ಭವಿಷ್ಯದಲ್ಲಿ ನಿಮಗಾಗುವ ಕಾಯಿಲೆಯ ಬಗ್ಗೆ ಮಾಹಿತಿ ನೀಡಲಿದೆ ಪಿನ್ ಕೋಡ್! ಅದ್ಹೇಗೆ ಸಾಧ್ಯ?
Genome Sequencing: ಪ್ರತಿಯೊಬ್ಬ ವ್ಯಕ್ತಿಯ ಡಿಎನ್‌ಎ ವಿಭಿನ್ನವಾಗಿರುತ್ತದೆ, ಯಾವುದೇ ವ್ಯಕ್ತಿಯ ಡಿಎನ್‌ಎ ವಿಶ್ವದ ಇತರ ಯಾವುದೇ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಹೀಗಾಗಿ ಇನ್ಮುಂದೆ ನಿಮ್ಮ ರಕ್ತದ ಮಾದರಿಯು ನಿಮ್ಮ ಆರೋಗ್ಯದ ಜಾತಕವನ್ನು ಬಹಿರಂಗಪಡಿಸಲಿದೆ
ನವದೆಹಲಿ: ಇಂದು ನಿಮಗೆ ಹೃದಯಾಘಾತದ ಅಪಾಯವಿದೆಯೇ ಅಥವಾ ಇಲ್ಲವೇ ಅಥವಾ ಕಾಫಿಗೆ ಅಲರ್ಜಿ ಇದೆಯೇ ಅಥವಾ ಇಲ್ಲವೇ ಎಂದು ಯಾರಾದರೂ ನಿಮ್ಮ ಆರೋಗ್ಯದ ಕುರಿತು ಭವಿಷ್ಯ ನುಡಿದರೆ, ನೀವು ಅವರ ಮಾತನ್ನು ನಂಬದೆ ಇರಬಹುದು, ಆದರೆ ವೈದ್ಯಕೀಯ ವಿಜ್ಞಾನ ಇದೀಗ ಜಗತ್ತಿನಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಕೃತಕ ಬುದ್ಧಿಮತ್ತೆಯಿಂದ ಇದೆಲ್ಲವೂ ಸಾಧ್ಯ ಎಂದು ಹೇಳಲಾಗುತ್ತಿದೆ.
ಮುಂದಿನ ದಿನಗಳಲ್ಲಿ, ನೀವು ಆಸ್ಪತ್ರೆಗೆ ದಾಖಲಾದಾಗ, ಔಷಧಿಯು ನಿಮ್ಮ ಮೇಲೆ ಎಷ್ಟು ವೇಗವಾಗಿ ಪರಿಣಾಮ ಬೀರುತ್ತದೆ (Science And Tech News In Kannada), ಎಷ್ಟು ಡೋಸ್ ಅವಶ್ಯಕತೆ ಇದೆ ಅಥವಾ ಯಾವುದೇ ಔಷಧಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೇ ಎಂದು ವೈದ್ಯರಿಗೆ ಮುಂಚಿತವಾಗಿ ಇದರಿಂದ ತಿಳಿಯುವ ಸಾಧ್ಯತೆ ಇದೆ. ಇದು ನಿಮ್ಮ ವೈದ್ಯರಿಗೆ ವೇಗವಾಗಿ ಚಿಕಿತ್ಸೆ ನೀಡಲು ಮತ್ತು ನಿಮ್ಮನ್ನು ಆಸ್ಪತ್ರೆಯಿಂದ ಬೇಗ ಬಿಡುಗಡೆ ಮಾಡಲು ಸಹಾಯ ಮಾಡಲಿದೆ.
ಜೆನೆಟಿಕ್ ಮೇಕಪ್
ಇದೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನೆ ಇದೀಗ ನಿಮ್ಮ ಮನದಲ್ಲಿಯೂ ಮೂಡಿರಬಹುದು ಅಲ್ಲವೇ, ಹಾಗಾದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಈ ಜುಗಲ್ಬಂದಿ ಎಂದು ಎಂಬುದರ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಹಾಗೆ ನೋಡಿದರೆ, ಪ್ರತಿಯೊಬ್ಬ ವ್ಯಕ್ತಿಯ ಡಿಎನ್‌ಎ ವಿಭಿನ್ನವಾಗಿರುತ್ತದೆ, ಯಾವುದೇ ವ್ಯಕ್ತಿಯ ಡಿಎನ್‌ಎ ವಿಶ್ವದ ಇತರೆ ಯಾವುದೇ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಸರಳ ಭಾಷೆಯಲ್ಲಿ, ನಾವು ಇದನ್ನು ಪೋಷಕರಿಂದ ಪಡೆದ ವೈಶಿಷ್ಟ್ಯಗಳು, ಅಭ್ಯಾಸಗಳು ಅಥವಾ ರೋಗಗಳು ಎಂದೂ ಕರೆಯಬಹುದು.
ಪೋಷಕರಿಂದ ಪಡೆದ ಈ ಆನುವಂಶಿಕತೆಯನ್ನು ವೈದ್ಯಕೀಯ ಭಾಷೆಯಲ್ಲಿ ಜೆನೆಟಿಕ್ ಮೇಕಪ್ ಎಂದು ಕರೆಯಲಾಗುತ್ತದೆ, ನಂತರ ನಿಮ್ಮ ಡಿಎನ್‌ಎ ಸಂರಚನೆಯನ್ನು ರಕ್ತ ಪರೀಕ್ಷೆಯ ಮಾದರಿಯಿಂದ ಬೇರ್ಪಡಿಸಲಾಗುತ್ತದೆ ಮತ್ತು ಅದನ್ನು ವಿವಿಧ ಕೋನಗಳಿಂದ ವೈಜ್ಞಾನಿಕವಾಗಿ ಅಧ್ಯಯನ ನಡೆಸಲಾಗುತ್ತದೆ. ಇದನ್ನು ಜೀನೋಮ್ ಸೀಕ್ವೆನ್ಸಿಂಗ್ ಎಂದು ಕರೆಯಲಾಗುತ್ತದೆ. ನಿಮ್ಮ ಡಿಎನ್‌ಎ ಡಿಕೋಡ್ ಮಾಡುವ ಮೂಲಕ, ನೀವು ಕ್ಯಾನ್ಸರ್-ಉಂಟುಮಾಡುವ ಜೀನ್‌ಗಳನ್ನು ಹೊಂದಿದ್ದೀರಾ, ನಿಮ್ಮ ಜೀನ್‌ಗಳು ನಿಮ್ಮ ರಕ್ತವನ್ನು ಹೆಪ್ಪುಗಟ್ಟಿಸುತ್ತವೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲಾಗುತ್ತದೆ, ಇದರಿಂದ ನೀವು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಸಾಧ್ಯತೆಯನ್ನು ಹೇಳಲಾಗುತ್ತದೆ.
ರಕ್ತದ ಮಾದರಿ ನಿಮ್ಮ ಆರೋಗ್ಯದ ಜಾತಕವನ್ನು ಜಾಲಾಡಲಿದೆ
ಟಿಬಿ ಇತ್ಯಾದಿ ಸಾಂಕ್ರಾಮಿಕ ರೋಗಗಳಿಗೆ ವಿಶೇಷ ಬ್ಯಾಕ್ಟೀರಿಯಾ ಕಾರಣವಾಗಿರುತ್ತದೆ. ಜೀನೋಮ್ ಸೀಕ್ವೆನ್ಸಿಂಗ್‌ನೊಂದಿಗೆ ಅದನ್ನು ಕಂಡುಹಿಡಿಯುವುದು ಕಷ್ಟವೇನಲ್ಲ, ಆದರೆ ಹೃದ್ರೋಗ ಅಥವಾ ಮಧುಮೇಹದಂತಹ ಜೀವನಶೈಲಿಯ ಕಾಯಿಲೆಗಳಲ್ಲಿ DNA ಅನ್ನು ಓದುವುದು ಮತ್ತು ವಿಶ್ಲೇಷಿಸುವುದು ಸುಲಭವಲ್ಲ. ಈಗ ಐಐಟಿ ಮುಂಬೈನಲ್ಲಿರುವ ಹೇಸ್ಟಾಕ್ ಅನಾಲಿಟಿಕ್ಸ್ ಇದನ್ನು ಪ್ರಾರಂಭಿಸಿದೆ.
ಪಾರ್ಕಿನ್‌ಸನ್‌ನಿಂದ ಪಿತ್ತಗಲ್ಲು, ಮೂತ್ರಪಿಂಡದ ಕಲ್ಲುಗಳಿಂದ ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್‌ನಿಂದ ಹೃದಯಾಘಾತದವರೆಗೆ, ನಿಮ್ಮ ಆರೋಗ್ಯವನ್ನು ಊಹಿಸಲು ಒಂದೇ ರಕ್ತದ ಮಾದರಿಯನ್ನು ಹೇಳಲಾಗುತ್ತಿದೆ. ಈ ಕುರಿತು ಮಾತನಾಡಿರುವ ಕಂಪನಿಯ ಸಿಇಒ ಅನಿರ್ವಾನ್ ಚಟರ್ಜಿ, ಮುಂಬೈನ ಅನೇಕ ಆಸ್ಪತ್ರೆಗಳೊಂದಿಗೆ ಸಂಬಂಧ ಹೊಂದುವ ಮೂಲಕ ರೋಗಿಗಳ ಮೇಲೆ ಈ ತಂತ್ರವನ್ನು ಬಳಸಲು ಆರಂಭಿಸಲಾಗಿದೆ ಎಂದಿದಾರೆ. ಪ್ರಸ್ತುತ ಈ ಹೆಲ್ತ್ ಸ್ಟಾರ್ಟ್ಅಪ್ ಗಾಜಿಯಾಬಾದ್‌ನ ಯಶೋದಾ ಆಸ್ಪತ್ರೆಯಲ್ಲೂ ತನ್ನ ಸೇವೆಗಳನ್ನು ಒದಗಿಸಲಿದೆ.
ಈ ಜೀನೋಮ್ ಪರೀಕ್ಷೆಯ ಎರಡನೇ ಲಿಂಕ್ ಫಾರ್ಮಾಕೋಜೆನೊಮಿಕ್ಸ್ ಅಂದರೆ ನಿಮ್ಮ ದೇಹದ ಮೇಲೆ ಔಷಧದ ಪರಿಣಾಮ ಏನು. ಆಲ್ಕೋಹಾಲ್ನ ಪರಿಣಾಮವು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ವಿಭಿನ್ನವಾಗಿರುತ್ತದೆ ಎಂಬ ರೀತಿಯಲ್ಲಿ ನೀವು ಅದನ್ನು ಅರ್ಥಮಾಡಿಕೊಳ್ಳಬಹುದು. ಕಡಿಮೆ ಕುಡಿದ ನಂತರವೂ ಅನೇಕ ಜನರು ಯಕೃತ್ತಿನ ವೈಫಲ್ಯಕ್ಕೆ ಬಲಿಯಾಗುತ್ತಾರೆ ಮತ್ತು ಬಹಳಷ್ಟು ಕುಡಿದ ನಂತರವೂ ಅನೇಕ ಜನರಿಗೆ ಅದರ ಪರಿಣಾಮ ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ಆನುವಂಶಿಕ ರಚನೆಯು ಜ್ವರದ ಸಂದರ್ಭದಲ್ಲಿ, ಪ್ಯಾರಸಿಟಮಾಲ್ ಔಷಧಿಯು ನಿಮ್ಮ ಮೇಲೆ ಎಷ್ಟು ಸಮಯದವರೆಗೆ ಮತ್ತು ಬೇರೆಯವರ ಮೇಲೆ ಎಷ್ಟು ಸಮಯದವರೆಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕೂಡ ಅದು ನಿರ್ಧರಿಸಲಿದೆ.
ಫಾರ್ಮಾಕೋ ಜಿನೋಮಿಕ್ಸ್
ಇದೇ ರೀತಿ ಪ್ರತಿ ಮಧುಮೇಹಿಗಳಿಗೆ ಮೆಟ್‌ಫಾರ್ಮಿನ್ ನೀಡುವ ಮೊದಲು, ಯಾವ ರೋಗಿಗೆ ಮೆಟ್‌ಫಾರ್ಮಿನ್ ನೀಡುವುದರಿಂದ ಗಮನಾರ್ಹ ಪ್ರಯೋಜನವಿಲ್ಲ ಎಂಬುದು ವೈದ್ಯರಿಗೆ ತಿಳಿಯಲಿದೆ. ಈ ವಿಜ್ಞಾನವನ್ನು ಫಾರ್ಮಾಕೋಜೆನೊಮಿಕ್ಸ್ ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನದ ಮೇಲೂ ಕೂಡ ಕೆಲಸ ನಡೆಸಲಾಗುತ್ತಿದೆ. ಈ ಕುರಿತು ಮಾತನಾಡುವ ಯಶೋದಾ ಆಸ್ಪತ್ರೆಯ ಸಿಇಒ ಡಾ. ಸುನಿಲ್ ದಾಗರ್, ಮಾನವ ದೇಹದಲ್ಲಿ ಇರುವ 7000 ಜೀನ್‌ಗಳು ಮತ್ತು 9000 ರೂಪಾಂತರಗಳನ್ನು ಅಧ್ಯಯನ ಮಾಡುವ ಮೂಲಕ, ಅವರ ಭವಿಷ್ಯದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ಇದರಿಂದ ಅವರು ಮುಂಚಿತವಾಗಿ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಮುಂಬರುವ ದಿನಗಳಲ್ಲಿ ಜೀನೋಮ್ ಪರೀಕ್ಷೆಯ ದತ್ತಾಂಶ ಹೆಚ್ಚಾದಂತೆ ಯಾವ ಪ್ರದೇಶದ ಜನರಲ್ಲಿ ಯಾವ ರೋಗಗಳು ಹೆಚ್ಚಾಗಿ ಬರಲಿವೆ, ಯಾವ ಆ್ಯಂಟಿಬಯೋಟಿಕ್ ಯಾವ ಪ್ರದೇಶದ ಜನರಲ್ಲಿ ಅಥವಾ ಯಾವ ವ್ಯಕ್ತಿಯಲ್ಲಿ ಕಡಿಮೆ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ. ಹೀಗಾಗಿ ಇದರಿಂದ ಗರಿಷ್ಠ ಪ್ರಯೋಜನ ಪಡೆಯಬಹುದು. ಯಾವ ಪ್ರಮಾಣದ ಔಷಧಿಯನ್ನು ನೀಡುವ ಮೂಲಕ ಕಾಯಿಲೆ ಸರಿಪಡಿಯಬಹುದು ಎಂಬುದು ತಿಳಿಯಲಿದೆ. ಈ ರೀತಿಯಾಗಿ, ಪಿನ್ ಕೋಡ್ ಆಧಾರದ ಮೇಲೆ, ಜನರ ಆನುವಂಶಿಕ ರಚನೆಯ ಡೇಟಾವನ್ನು ಸಂಗ್ರಹಿಸಬಹುದು. ನಗರ ಮತ್ತು ಹಳ್ಳಿಯ ಆಧಾರದ ಮೇಲೆ ಔಷಧಗಳನ್ನು ಬಳಸುವ ನಿರ್ಧಾರವನ್ನು ಸಹ ತೆಗೆದುಕೊಳ್ಳಬಹುದು.
ಇದನ್ನೂ ಓದಿ-ಅಮೆಜಾನ್ ಪ್ರೈಮ್ 30 ದಿನಗಳ ಉಚಿತ ಚಂದಾದಾರಿಕೆ ಪಡೆಯಲು ತಕ್ಷಣ ಈ ಕೆಲಸ ಮಾಡಿ!
AIIMS ಭೋಪಾಲ್ ಕೂಡ ಖಿನ್ನತೆಯನ್ನು ಪತ್ತೆಹಚ್ಚಲು ಈ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಯಾವ ರೋಗಿಯ ಮೆದುಳಿನ ಖಿನ್ನತೆಯ ವಂಶವಾಹಿಗಳು ಇರುತ್ತವೆ ಎಂಬುದನ್ನು, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಇದನ್ನೆಲ್ಲಾ ಕಂಡುಹಿಡಿಯಬಹುದು.
ಇದನ್ನೂ ಓದಿ-ಚಲಿಸುತ್ತಿರುವ ಕಾರಿನಲ್ಲಿ ಆಕಸ್ಮಿಕವಾಗಿ ಈ ತಾಂತ್ರಿಕ ದೋಷ ಕಂಡು ಬಂದರೆ ಏನು ಮಾಡಬೇಕು?
ಆದಾಗ್ಯೂ, ಆ ಕಾಲ ಬರಲು ಪ್ರಸ್ತುತ ಇರುವ ದೊಡ್ಡ ಅಡೆತಡೆ ಎಂದರೆ ಅದು ಹಣ. ಪ್ರಸ್ತುತ ಯಶೋದಾ ಆಸ್ಪತ್ರೆಯಲ್ಲಿ ಈ ಒಂದು ಜೀನೋಮ್ ಪರೀಕ್ಷೆಯ ವೆಚ್ಚವನ್ನು 21,000 ರೂ. ಇರಿಸಲಾಗಿದೆ. ಆದರೆ, ಭಾರತದಂತಹ ದೇಶದಲ್ಲಿ, ಎಷ್ಟು ಜನರು ಪೃವೆಂಟಿವ ಹೆಲ್ತ್ ಕೆಯರ್ ಅಂದರೆ ರೋಗ ಬರುವ ಮುನ್ನವೇ ಅದನ್ನು ಪತ್ತೆ ಹಚ್ಚುವ ಕೆಲಸ ಮಾಡಲು ಇಷ್ಟೊಂದು ದೊಡ್ಡ ಮಟ್ಟದ ಹೂಡಿಕೆ ಮಾಡಲು ಸಿದ್ಧರಾಗುತ್ತಾರೆ ಎಂಬುದು ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.