Threads vs Twitter: ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್ ಗೆ ನೇರ ಸೆಡ್ಡು ಹೊಡೆದ ಥ್ರೆಡ್ಸ್  ಆಪ್ ಅಬ್ಬರದ ಆರಂಭ ಕಂಡಿದೆ.  ಈ ಆ್ಯಪ್ ಅತಿ ಕಡಿಮೆ ಸಮಯದಲ್ಲಿ ಕೋಟಿಗಟ್ಟಲೆ ಬಳಕೆದಾರರ ಖಾತೆಗಳನ್ನು ಸೃಷ್ಟಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ ಮತ್ತು ಪೋಸ್ಟ್‌ಗಳ ಸಂಖ್ಯೆಯಲ್ಲಿಯೂ ಕೂಡ ಭಾರಿ ಮುನ್ನುಗ್ಗುತ್ತಿದೆ. ಇದುವರೆಗೆ 9.5 ಕೋಟಿಗೂ ಹೆಚ್ಚು ಪೋಸ್ಟ್‌ಗಳು ಮತ್ತು 5 ಕೋಟಿಗೂ ಹೆಚ್ಚು ಖಾತೆಗಳನ್ನು ಥ್ರೆಡ್ಸ್ ನಲ್ಲಿ ರಚಿಸಲಾಗಿದೆ. ಈ ಪ್ರಕ್ರಿಯೆಯು ನಿರಂತರವಾಗಿ ಮುಂದುವರೆದಿದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ದಿ ವರ್ಜ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಬಳಕೆದಾರರು ಥ್ರೆಡ್ಸ್ ಪ್ಲಾಟ್‌ಫಾರ್ಮ್‌ನಲ್ಲಿ 95 ಮಿಲಿಯನ್‌ಗಿಂತಲೂ ಹೆಚ್ಚು ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಪೋಸ್ಟ್‌ಗಳಿಗೆ 190 ಮಿಲಿಯನ್ ಗೂ ಅಧಿಕ ಲೈಕ್‌ಗಳು ಕೂಡ ಬಂದಿವೆ. ವರದಿಗಳ ಪ್ರಕಾರ, ಥ್ರೆಡ್ಸ್ ಅಪ್ಲಿಕೇಶನ್ ಬಿಡುಗಡೆಯಾದ ಎರಡು ಗಂಟೆಗಳಲ್ಲಿ, 20 ಲಕ್ಷ ಬಳಕೆದಾರರು ಥ್ರೆಡ್ಸ್ ನಲ್ಲಿ ತಮ್ಮ ಖಾತೆಗಳನ್ನು ತೆರೆದಿದ್ದಾರೆ.


ಇದೇ ವೇಳೆ, ಮೊದಲ 7 ಗಂಟೆಗಳಲ್ಲಿ ಬಳಕೆದಾರರ ಸಂಖ್ಯೆ 1 ಕೋಟಿ ತಲುಪಿದೆ ಮತ್ತು 12 ಗಂಟೆಗಳಲ್ಲಿ ಈ ಸಂಖ್ಯೆ 3 ಕೋಟಿ ದಾಟಿದೆ. ವರದಿಗಳ ಪ್ರಕಾರ, Twitter ಅಪ್ಲಿಕೇಶನ್ 10 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟಲು ಎರಡು ವರ್ಷಗಳನ್ನು ತೆಗೆದುಕೊಂಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.


ಥ್ರೆಡ್ಸ್ ಗೆ ಬೆದರಿಕೆಯೊಡ್ಡಿದ ಟ್ವಿಟ್ಟರ್!
ಇನ್ನೊಂದೆಡೆ ಫೇಸ್ ಬುಕ್ ನಡೆಸುವ ಕಂಪನಿ ಮೇಟಾ ವಿರುದ್ಧ ಥ್ರೆಡ್ಸ್ ಗೆ ಸಂಬಂಧಿಸಿದಂತೆ ಕಾನೂನು ಸಮರ ಸಾರುವುದಾಗಿ ಟ್ವಿಟರ್ ಬೆದರಿಕೆ ಹಾಕಿದೆ. ಸೆಮಾಫೋರ್ ಬಳಿ ಇರುವ ಒಂದು ಪತ್ರದ ಪ್ರಕಾರ, ಟ್ವಿಟರ್ ವಕೀಲರು ಮಾರ್ಕ್ ಜುಕರ್‌ಬರ್ಗ್‌ ಟ್ವಿಟರ್‌ನ ವ್ಯಾಪಾರ ರಹಸ್ಯಗಳನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ದುರುಪಯೋಗ ಮಾಡುತ್ತಿದ್ದಾರೆ ಎಂದು  ಆರೋಪಿಸಿದ್ದಾರೆ.


ಇದನ್ನೂ ಓದಿ-Weather Forecast: ಮುಂಬೈನಲ್ಲಿ ಅಲರ್ಟ್ ಘೋಷಣೆ, ದೆಹಲಿ ಸೇರಿದಂತೆ ಈ ರಾಜ್ಯಗಳಲ್ಲಿ ಮಳೆರಾಯನ ಭಾರಿ ಆರ್ಭಟ!


ಇನ್ನೊಂದೆಡೆ ಟ್ವಿಟರ್ (Tech News In Kannada) ಅನ್ನು ಪ್ರತಿನಿಧಿಸುವ ವಕೀಲ ಅಲೆಕ್ಸ್ ಸ್ಪಿರೊ, ಟ್ವಿಟ್ಟರ್ ಕಂಪನಿಯ ಮಾಜಿ ಉದ್ಯೋಗಿಗಳನ್ನು ನೇಮಿಸಿಕೊಂಡು ಮೇಟಾ ಥ್ರೆಡ್ಸ್ ರೂಪದಲ್ಲಿ ಟ್ವಿಟ್ಟರ್ ನ ಕಾಪಿಕ್ಯಾಟ್ ಆಪ್ ರಚಿಸಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಟ್ವಿಟರ್ ತನ್ನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಜಾರಿಗೊಳಿಸಲು ಉದ್ದೇಶಿಸಿದೆ ಎಂದು ಸ್ಪಿರೊ ಹೇಳಿದ್ದಾರೆ. ಕಂಪನಿಯು ಅನ್ಯಾಯದಿಂದ ಪರಿಹಾರ ಪಡೆಯಲು ನ್ಯಾಯಾಲಯದ ಪರಿಹಾರಗಳನ್ನು ಬಳಸಲು ಉಪಯೋಗಿಸಲಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ-Tech News: ಈ ದಿನ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳಲಿದೆ ಚಂದ್ರಯಾನ 3, ಮಾಹಿತಿ ನೀಡಿದ ಇಸ್ರೋ


Instagram ತಂಡ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಿದೆ
ಮೆಟಾ ಬುಧವಾರ ರಾತ್ರಿ ಸಂದೇಶ ಆಧಾರಿತ ತನ್ನ ಅಪ್ಲಿಕೇಶನ್ ಥ್ರೆಡ್ಸ್ ಬಿಡುಗಡೆ ಮಾಡಿದೆ  ಮತ್ತು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ಅದನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ಅಪ್ಲಿಕೇಶನ್ ಅನ್ನು ಮೆಟಾದ ಇನ್‌ಸ್ಟಾಗ್ರಾಮ್ ತಂಡ ಅಭಿವೃದ್ಧಿಪಡಿಸಿದೆ ಮತ್ತು ಇದು ಟ್ವಿಟ್ಟರ್ ಗೆ ನೇರ ಸೆಡ್ಡು ಹೊಡೆದಿದೆ. ಪ್ರಪಂಚದ 100 ಕ್ಕೂ ಹೆಚ್ಚು ದೇಶಗಳಲ್ಲಿ ಥ್ರೆಡ್ಸ್ ಆಪ್ ಬಿಡುಗಡೆಗೊಳಿಸಲಾಗಿದೆ. ಆದರೆ, ಯುರೋಪಿಯನ್ ಯೂನಿಯನ್ ತನ್ನ ಕಠಿಣ ನಿಯಮಗಳಿಂದಾಗಿ ಅದಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.