LPG ಗ್ಯಾಸ್... ಅಡುಗೆಮನೆಯ ಕೆಲಸವನ್ನು ಹೆಚ್ಚು ಸುಲಭಗೊಳಿಸಿದ ತಂತ್ರಜ್ಞಾನ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಎಲ್‌ಪಿಜಿ ಬಳಸುತ್ತಿದ್ದಾರೆ. ಆದರೆ ಅನೇಕ ಬಾರಿ ಅವಶ್ಯಕತೆ ಇದ್ದಾಗಲೇ ಗ್ಯಾಸ್‌ ಖಾಲಿಯಾಗಿ ಬಿಡುತ್ತದೆ. ಇನ್ನು LPG ಸಿಲಿಂಡರ್ ಅನ್ನು ಬಳಸುವುದು ತುಂಬಾ ಸುಲಭ, ಆದರೆ ಸಿಲಿಂಡರ್ನಲ್ಲಿ ಎಷ್ಟು ಅನಿಲ ಉಳಿದಿದೆ ಎಂದು ಕಂಡುಹಿಡಿಯುವುದು ತುಂಬಾ ಕಷ್ಟ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೈತರಿಗೆ ಕೇಂದ್ರ ಸರ್ಕಾರದಿಂದ ʼದಸರಾʼ ಗಿಫ್ಟ್‌! ಈ ದಿನದಂದು ಬಿಡುಗಡೆಯಾಗಲಿದೆ ಪಿಎಂ ಕಿಸಾನ್‌ ನಿಧಿ


ನಮಗೆ ಹೆಚ್ಚು ಅಗತ್ಯವಿರುವ ಕ್ಷಣದಲ್ಲಿಯೇ ಅನೇಕ ಬಾರಿ ಗ್ಯಾಸ್ ಖಾಲಿಯಾಗುತ್ತವೆ. ಹೀಗಿರುವಾಗ ಮನೆಯ ಸಿಲಿಂಡರ್‌ನಲ್ಲಿ ಇನ್ನೆಷ್ಟು ಗ್ಯಾಸ್‌ ಉಳಿದಿದೆ ಎಂದು ಸುಲಭವಾಗಿ ಪತ್ತೆಹಚ್ಚುವ ಕೆಲ ವಿಧಾನಗಳನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.


ಸಿಲಿಂಡರ್ ಅನ್ನು ಎತ್ತಿ ಅದರ ತೂಕವನ್ನು ಅಳೆಯುವ ಮೂಲಕ ಸಿಲಿಂಡರ್ನಲ್ಲಿ ಎಷ್ಟು ಅನಿಲ ಉಳಿದಿದೆ ಎಂದು ಕೆಲವರು ಅಂದಾಜು ಮಾಡುತ್ತಾರೆ. ಈ ವಿಧಾನ ಅಲ್ಲದೆ, ಗ್ಯಾಸ್‌ ಜ್ವಾಲೆಯ ಬಣ್ಣವು ನೀಲಿ ಬಣ್ಣದಿಂದ ಹಳದಿ ಬಣ್ಣಕ್ಕೆ ಬದಲಾದಾಗ, ಸಿಲಿಂಡರ್ನಲ್ಲಿನ ಅನಿಲವು ಖಾಲಿಯಾಗುತ್ತಾ ಬರುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.


ಇದನ್ನೂ ಓದಿ: ಬಿಗ್‌ಬಾಸ್‌ ಖಡಕ್‌ ಸ್ಪರ್ಧಿ ಲಾಯರ್‌ ಜಗದೀಶ್‌ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಒಂದು ಕೇಸ್‌ಗೆ ಪಡೆಯುವ ಸಂಭಾವನೆ ಕೇಳಿದ್ರೆ ಉಸಿರುಗಟ್ಟುತ್ತೆ ಖಂಡಿತ!!


ಇದಲ್ಲದೆಯೂ ಒಂದು ವಿಚಿತ್ರ ವಿಧಾನವಿದೆ. ಇದನ್ನು ಕೇಳಿದಾಕ್ಷಣ ನಿಮಗೆ ಅಚ್ಚರಿಯಾಗಬಹುದು. ಆ ವಿಧಾನವೆಂದರೆ, ಒದ್ದೆಯಾದ ಬಟ್ಟೆಯ ಸಹಾಯದಿಂದ  ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ಕಂಡುಹಿಡಿಯಬಹುದು. ಇದಕ್ಕಾಗಿ, ಮೊದಲು ಗ್ಯಾಸ್ ಸಿಲಿಂಡರ್ ಸುತ್ತಲೂ ಒದ್ದೆಯಾದ ಬಟ್ಟೆಯನ್ನು ಕಟ್ಟಬೇಕು. ಸುಮಾರು 1 ನಿಮಿಷದ ನಂತರ, ಈ ಬಟ್ಟೆಯನ್ನು ತೆಗೆಯಬೇಕು. ಈಗ ಸಿಲಿಂಡರ್ನಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಎಚ್ಚರಿಕೆಯಿಂದ ಗಮನಿಸಿ. ಸಿಲಿಂಡರ್‌ನ ಕೆಲವು ಭಾಗವು ಒಣಗಿಹೋಗಿರುವುದನ್ನು ಕಾಣಬಹುದು, ಇನ್ನೂ ಕೊಂಚ ಭಾಗ ತೇವವಾಗಿರುತ್ತದೆ. ಅಂದರೆ ಸಿಲಿಂಡರ್ನ ಖಾಲಿ ಭಾಗವು ಬಿಸಿಯಾಗಿ ನೀರು ತ್ವರಿತವಾಗಿ ಹೀರಲ್ಪಡುತ್ತದೆ. ಅಂತೆಯೇ ಗ್ಯಾಸ್‌ ಇರುವ ಜಾಗ ತಂಪಾಗಿರುತ್ತದೆ. ಅದಕ್ಕಾಗಿಯೇ ಆ ಸ್ಥಳದಲ್ಲಿ ನೀರು ಒಣಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.