SMS Exploit Hacking - SMS ಮೂಲಕ ಬರುವ OTP ಕೂಡ ಸುರಕ್ಷಿತವಾಗಿಲ್ಲ, ಹೊಸ ಮೊಬೈಲ್ ಸ್ಕ್ಯಾಮ್ ಪತ್ತೆ
SMS Exploit Hacking - ಇಂಟರ್ನೆಟ್ ಹಾಗೂ ಮೊಬೈಲ್ ನಮ್ಮ ಜೀವನವನ್ನು ಎಷ್ಟು ಸುಲಭವಾಗಿಸಿವೆಯೋ ಅಷ್ಟೇ ಅವುಗಳನ್ನು ಬಳಸಿ ಹ್ಯಾಕರ್ ಗಳು ನಮ್ಮ ಜೀವನವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ದಿನನಿತ್ಯ ಜನರು ಆನ್ಲೈನ್ ಫ್ರಾಡ್ ಗೆ ಗುರಿಯಾಗುತ್ತಲೇ ಇದ್ದಾರೆ.
ನವದೆಹಲಿ: SMS Exploit Hacking - ಇಂಟರ್ನೆಟ್ ಹಾಗೂ ಮೊಬೈಲ್ ನಮ್ಮ ಜೀವನವನ್ನು ಎಷ್ಟು ಸುಲಭವಾಗಿಸಿವೆಯೋ ಅಷ್ಟೇ ಅವುಗಳನ್ನು ಬಳಸಿ ಹ್ಯಾಕರ್ ಗಳು ನಮ್ಮ ಜೀವನವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ದಿನನಿತ್ಯ ಜನರು ಆನ್ಲೈನ್ ಫ್ರಾಡ್ ಗೆ ಗುರಿಯಾಗುತ್ತಲೇ ಇದ್ದಾರೆ. ಇನ್ನೇನು ನಮ್ಮ ಮೊಬೈಲ್ ಫೋನ್ ಸಂಭವನೀಯ ಅಪಾಯದಿಂದ ಮುಕ್ತವಾಗಿದೆ ಎನ್ನುವಾಗಲೇ ಹೊಸದೊಂದು ಸಂಕಷ್ಟ ಎದುರಾಗುತ್ತದೆ. ಪ್ರಸ್ತುತ ಹೊಸದೊಂದು ದಾಳಿಯ ಕುರಿತು ಪತ್ತೆಹಚ್ಚಲಾಗಿದೆ. ಈ ದಾಳಿಯಲ್ಲಿ ಹ್ಯಾಕರ್ ಗಳು ಯಾರೊಬ್ಬರ ಮೊಬೈಲ್ ಗೆ ಟೆಕ್ಸ್ಟ್ ಮೂಲಕ ಕಳುಹಿಸಲಾಗುವ ಸಂದೇಶಗಳನ್ನು ತಮ್ಮ ಸಿಸ್ಟಂಗೆ ರಿಡೈರೆಕ್ಟ್ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಟೆಕ್ಸ್ಟ್ ಮೆಸೇಜಿಂಗ್ ಮ್ಯಾನೇಜ್ಮೆಂಟ್ ಸರ್ವಿಸ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಈ ದಾಳಿಯಿಂದ ಅವರು ಜನರ ಮೊಬೈಲ್ ಗೆ ಬರುವ OTP ಹಾಗೂ ಲಾಗಿನ್ ಕ್ರೆಡೆನ್ಸಿಯಲ್ಸ್ ಗಳನ್ನು ಕದಿಯುತ್ತಿದ್ದಾರೆ.
ಇದನ್ನೂ ಓದಿ- WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ, ಬದಲಾಗಲಿದೆ ನಿಮ್ಮ ಚಾಟಿಂಗ್ ವಿಧಾನ
1190 ರೂಗಳಿಗೆ ಮಾಹಿತಿ ಮಾರಾಟ
ಮದರ್ಬೋರ್ಡ್ ವರದಿಗಾರ ಜೋಸೆಫ್ ಕಾಕ್ಸ್ ಅವರ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಹ್ಯಾಕರ್ ಗಳು ಗುರಿಯಾಗಿಸಿದ್ದಾರೆ. ವರದಿಗಳ ಪ್ರಕಾರ ಹ್ಯಾಕರ್ ಗಳು ಸುಲಭವಾಗಿ ಮೊಬೈಲ್ ಸಂಖ್ಯೆಗೆ ಬರುವ SMS ಹಾಗೂ ಡೇಟಾ ಅನ್ನು ಇಂಟರ್ಸೆಪ್ಟ್ ಮಾಡುವ SMS ಗಳನ್ನು ಸುಲಭವಾಗಿ ರಿಡೈರೆಕ್ಟ್ ಮಾಡುತ್ತಾರೆ. ಈ ದಾಳಿಯ ವಿಚಿತ್ರ ಸಂಗತಿ ಎಂದರೆ, ಹ್ಯಾಕರ್ ಗಳು ಕೇವಲ ರೂ 1190 ಅಂದರೆ ಸುಮಾರು $16 ನೀಡುವ ಮೂಲಕ ಈ ಸೇವೆಗೆ ತಲುಪಲು ಯಶಸ್ವಿಗಾಗುತ್ತಾರೆ. ಇದೊಂದು ಸಾಮಾನ್ಯ ಶುಲ್ಕವಾಗಿದ್ದು, ವ್ಯಾಪಾರಿಗಳಿಂದ SMS ರಿಡೈರೆಕ್ಷನ್ ಸರ್ವಿಸ್ ಗಾಗಿ ಪಡೆಯಲಾಗುತ್ತದೆ. ಆದರೆ ಇದು ಹ್ಯಾಕರ್ಸ್ ಗಳಿಗೆ ನೀಡಲಾಗುವುದಿಲ್ಲ. ಪ್ರಸ್ತುತ ಈ ರೀತಿಯ ಹ್ಯಾಕಿಂಗ್ ಅಮೇರಿಕಾದಲ್ಲಿ ಮಾತ್ರ ನಡೆಯುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ- Android, ಐಫೋನ್‌ನಲ್ಲಿ WhatsApp Call ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ತಂತ್ರ
ಭಾರತದಲ್ಲಿಯೂ ಕೂಡ ಇದೆ ಕಾರಣಕ್ಕೆ SMS ಮೂಲಕ OTP ಬರಲು ತಡವಾಗುತ್ತಿದೆ
ಬಾರತದಲ್ಲಿಯೂ ಕೂಡ ಸದ್ಯ SMS (SMS Hacking) ಮೂಲಕ OTP ಬರಲು ವಿಳಂಬವಾಗುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಸಮಸ್ಯೆ ಕೇವಲ ಬ್ಯಾಂಕಿಂಗ್, ಇ-ಕಾಮರ್ಸ್ ಅಥವಾ ಇತರೆ ಕಂಪನಿಗಳ ಸೇವೆಗೆ ಮಾತ್ರ ಸೀಮಿತವಾಗಿ ಉಳಿಯದೆ, ಡೆಬಿಟ್ ಕಾರ್ಡ್ ವಹಿವಾಟು ಅಥವಾ ಇತರೆ ಇಂತಹ ಸೇವೆಗಳಿಗೂ ಕೂಡ ಎಂಟ್ರಿ ನೀಡಿದೆ. ಇವುಗಳಲ್ಲಿ ಲಾಗಿನ್ ಮಾಡಲು ಡಬಲ್ ಪರಿಶೀಲನೆಯ ಅವಶ್ಯಕತೆ ಬೀಳುತ್ತದೆ. ಈ OTP ಬರುವಲ್ಲಿ ಆಗುತ್ತಿರುವ ವಿಳಂಬಕ್ಕೆ ಮುಖ್ಯ ಕಾರಣ ಎಂದರೆ TRAI ಜಾರಿಗೊಳಿಸಿರುವ ನೂತನ ಗೈಡ್ ಲೈನ್ ಗಳು. OTP ಫ್ರಾಡ್ (OTP Fraud) ಗಳನ್ನು ತಡೆಯುವ ದೃಷ್ಟಿಯಿಂದ ಟ್ರೈ (Telecom Regulatory Authority Of India) ಹೊಸ SMS ಟೆಂಪ್ಲೇಟ್ ಜಾರಿಗೊಳಿಸಿದೆ. ಮತ್ತು ಇದು OTP ಸೇವೆಯ (OTP Service) ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದ ದೇಶಾದ್ಯಂತ ಸಾವಿರಾರು ಗ್ರಾಹಕರಿಗೆ ತೊಂದರೆಯಾಗುತ್ತಿದೆ.
ಇದನ್ನೂ ಓದಿ-Alert : ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ ಆಗಬಹುದು.! ಕೂಡಲೇ ಈ 8 ಆಪ್ಸ್ ಡಿಲಿಟ್ ಮಾಡಿ
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.