ನವದೆಹಲಿ : ಫೋಟೋಗಳನ್ನು ಬ್ಯಾಕಪ್ ಮಾಡಲು ಗೂಗಲ್ ಫೋಟೋವನ್ನು (Google photo) ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಗೂಗಲ್ ಫೋಟೋಗಳಿಂದ ಕೂಡಾ ಕೆಲ ಫೋಟೋಗಳು ಡಿಲಿಟ್ ಆಗಿ ಬಿಡುತ್ತವೆ. ಈ ಸಂದರ್ಭದಲ್ಲಿ ಡಿಲೀಟ್ ಆದ ಪೋಟೊಗಳನ್ನು ರಿಕವರ್ ಮಾಡಿಕೊಳ್ಳುವುದು ಹೇಗೆ ಎಂಬ ಮಾರ್ಗವನ್ನು ಹುಡುಕಲು ಆರಂಭಿಸುತ್ತೇವೆ. ಒಂದು ವೇಳೆ ಡಿಲೀಟ್ ಆದ ಪೋಟೋ ರಿಕವರ್ (Photo recover) ಆದರೂ ಎಲ್ಲಾ ಫೋಟೋಗಳು ರಿಕವರ್ ಆಗುತ್ತಾ ಅನ್ನೋ ಸಂದೇಹ ಕೂಡಾ ಇದ್ದೇ ಇರುತ್ತದೆ. ಹೀಗಿರುವಾಗ, ಗೂಗಲ್ ಫೋಟೋದಲ್ಲಿ ಡಿಲೀಟ್ ಆದ ಫೋಟೋಗಳನ್ನು ಮತ್ತೆ ರಿಸ್ಟೋರ್ (Restore) ಮಾಡಿಕೊಳ್ಳುವುದು ಹೇಗೆ ಎಂಬ ಟ್ರಿಕ್ ಅನ್ನು ನಾವು ಹೇಳುತ್ತೇವೆ.  


COMMERCIAL BREAK
SCROLL TO CONTINUE READING

ಈ ವಿಧಾನವನ್ನು ಅಳವಡಿಸಿಕೊಳ್ಳಿ:
-ಡಿಲೀಟ್ ಆದ ಫೋಟೋಗಳನ್ನು ರಿಕವರ್ ಮಾಡಿಕೊಳ್ಳಲು ಮೊದಲು  Google Photo ಅಪ್ಲಿಕೇಶನ್‌ಗೆ ಹೋಗಿ 
-ಇಲ್ಲಿ ನೀವು ಬಲಭಾಗದಲ್ಲಿ ಮೂರು ಲೈನ್ ಗಳು ಕಾಣುತ್ತವೆ. ಅದರ ಮೇಲೆ ಕ್ಲಿಕ್ ಮಾಡಿ 
-ಇಲ್ಲಿ Trash ಅಥವಾ Bin ಆಯ್ಕೆಯನ್ನು ಆರಿಸಿ ನೀವು ರಿಕವರ್ ಮಾಡಲು ಬಯಸುವ ಚಿತ್ರಗಳನ್ನು ಆಯ್ಕೆಮಾಡಿ.
ಫೋಟೋಗಳನ್ನು ಆಯ್ಕೆ ಮಾಡಿದ ನಂತರ, restore ಬಟನ್ ಮೇಲೆ ಕ್ಲಿಕ್ ಮಾಡಿ
ಇಷ್ಟಾದ ನಂತರ ಡಿಲೀಟ್ ಆದ  photos ರಿಕವರ್ ಆಗುತ್ತವೆ. 


ಇದನ್ನೂ ಓದಿ : ಗೆಲಾಕ್ಸಿ ಬುಕ್ ಪ್ರೊ ಸೀರಿಸ್ Laptop ಲಾಂಚ್ ಮಾಡಿದ Samsung


Trash ಸೆಕ್ಷನ್ ನಲ್ಲಿರುತ್ತವೆ ಗೂಗಲ್ ಫೋಟೋ : 
ಡಿಲೀಟ್ (Delete) ಆದ ಫೋಟೊಗಳು  google photoವಿನ  ಫೋಟೋಗಳ Trash  ಸೆಕ್ಷನ್ ಗೆ ಹೋಗುತ್ತದೆ.  ಒಮ್ಮೆ Trash  ಸೆಕ್ಷನ್ ಗೆ ಹೋದ ಫೋಟೊಗಳು 60 ದಿನಗಳವರೆಗೆ ಇಲ್ಲಿ ಲಭ್ಯವಿರುತ್ತವೆ. ಹಾಗಾಗಿ ನೀವು ಫೋಟೋವನ್ನು ರಿಕವರ್ ಮಾಡುವುದಾದರೆ 60 ದಿನಗಳ ಒಳಗೆ ಮಾಡಬೇಕಾಗುತ್ತದೆ. ನಂತರ ಡಿಲೀಟ್ ದ ಫೋಟೋ ರಿಕವರ್ ಮಾಡುವುದು ಸಾಧ್ಯವಾಗುವುದಿಲ್ಲ. 


 ಐಫೋನ್‌ನಿಂದ ಫೋಟೋ ರಿಕವರ್ ಮಾಡಲು ಹೀಗೆ ಮಾಡಿ : 
ನೀವು ಐಫೋನ್ ಬಳಸುತ್ತಿದ್ದರೆ, Google ಫೋಟೋಗಳಿಂದ ಡಿಲೀಟ್ ಆದ ಫೋಟೋಗಳನ್ನು ರಿಸ್ಟೋರ್ ಮಾಡಬಹುದು.  ಇದಕ್ಕಾಗಿ, ಗೂಗಲ್ ಫೋಟೋ ಒಪನ್ ಮಾಡಿದ ನಂತರ, ಎಡಭಾಗದಲ್ಲಿರುವ ಹ್ಯಾಂಬರ್ಗರ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಬಾಕ್ಸ್ ಅನ್ನು ಚೆಕ್ ಮಾಡಿ.  ಅದರ ನಂತರ,  3 ಡಾಟ್ ಗಳನ್ನು ಹೊಂದಿರುವ ಐಕಾನ್ (Icon)ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಸೆಕೆಲ್ಟ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ . 


ಇದನ್ನೂ ಓದಿ : Internet Speed: ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿದರೆ ಸಾಕು


ವೆಬ್‌ನಲ್ಲಿ ಫೋಟೋ ರಿಕವರ್ ಮಾಡುವುದು ಹೇಗೆ ? 
-ಮೊದಲಿಗೆ ನಿಮ್ಮ ಕಂಪ್ಯೂಟರ್‌ನ (Computer) ಬ್ರೌಸರ್‌ಗೆ ಹೋಗಿ https://photos.google.com/ ಅನ್ನು ನಮೂದಿಸಿ ಮತ್ತು Google ಫೋಟೋಗಳನ್ನು ತೆರೆಯಿರಿ
- ಮುಂದುವರಿಯಲು Google  id ಯಿಂದ ಸೈನ್ ಇನ್ ಮಾಡಿ
- ಹೋಂ ಪೇಜ್ ನಲ್ಲಿರುವ ಹ್ಯಾಂಬರ್ಗರ್ ಐಕಾನ್ ಮೇಲೆ ಕ್ಲಿಕ್ ಮಾಡಿ trash ಸೆಲೆಕ್ಟ್ ಮಾಡಿ 
- ಈಗ ನೀವು ರಿಸ್ಟೋರ್ ಮಾಡಲು ಬಯಸುವ  ಫೋಟೋಗಳನ್ನು ಆಯ್ಕೆಮಾಡಿ. ಫೋಟೋಗಳನ್ನು ಆಯ್ಕೆ ಮಾಡಿದ ನಂತರ, ಬಲ ಮೂಲೆಯಲ್ಲಿರುವ Restore ಬಟನ್ ಕ್ಲಿಕ್ ಮಾಡಿ. 
- ಈ ಬಟನ್ 'Empty Trash ಬಟನ್ ಪಕ್ಕದಲ್ಲಿರುತ್ತದೆ. 
- ಇಷ್ಟಾದ ನಂತರ ನಿಮ್ಮ ಫೋಟೋಗಳು ಫೋಟೋ ಲೈಬ್ರರಿಯಲ್ಲಿ ಕಾಣಿಸಿಕೊಳ್ಳುತ್ತವೆ .


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.