ನವದೆಹಲಿ : ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಪದಕಗಳನ್ನು ಗೆದ್ದ ಎಲ್ಲಾ ಭಾರತೀಯ ಕ್ರೀಡಾಪಟುಗಳಿಗೆ ಬಹುಮಾನ ನೀಡುವುದಾಗಿXiaomi ಘೋಷಿಸಿದೆ. Xiaomiಯ Mi 11 ಅಲ್ಟ್ರಾ ಸ್ಮಾರ್ಟ್ ಫೋನ್ ಅನ್ನು ಪದಕ ವಿಜೇತ ಭಾರತೀಯ ಆಟಗಾರರಿಗೆ ಕಂಪನಿ ಬಹುಮಾನವಾಗಿ ನೀಡಲಿದೆ. ಶಿಯೋಮಿ ಇಂಡಿಯಾದ ಎಂಡಿ ಮನು ಕುಮಾರ್ ಜೈನ್ (Manu Kumar Jain) ಟ್ವೀಟ್ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದ್ದಾರೆ. 


COMMERCIAL BREAK
SCROLL TO CONTINUE READING

ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದ ನೀರಚ್ ಚೋಪ್ರಾ :
Tokyo Olympics 2020ರಲ್ಲಿ, ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಭಾರತ ಒಟ್ಟು ಏಳು ಪದಕಗಳನ್ನು ಗೆದ್ದಿದೆ.  ಇಲ್ಲಿಯವರೆಗಿನ ಅತ್ಯಧಿಕ ಸಂಖ್ಯೆ ಇದಾಗಿದೆ.  2012ರ ಒಲಿಂಪಿಕ್ಸ್‌ನಲ್ಲಿ ಭಾರತ ಆರು ಪದಕಗಳನ್ನು ಗೆದ್ದಿತ್ತು.  ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿದ್ದಾರೆ. ಚೋಪ್ರಾ, ಮೀರಾಬಾಯಿ ಚಾನು(Meera bai Chanu) , ರವಿಕುಮಾರ್ ದಹಿಯಾ, ಲವ್ಲಿನಾ ಬೊರ್ಗೊಹೈನ್, ಪಿವಿ ಸಿಂಧು (PV Sindhu) ಮತ್ತು ಭಜರಂಗ್ ಪುನಿಯಾ  ಈ ಬಾರಿ ಪದಕ ಗೆದ್ದ ಆಟಗಾರರು. 


ಎರಡು ದಿನಗಳವರೆಗೆ ಬರುತ್ತದೆ ಈ ಫೋನಿನ್ ಚಾರ್ಜ್, 3D ಬ್ಯೂಟಿ ಮೋಡ್ ನಲ್ಲಿ ಫೋಟೋ ತೆಗೆಯಬಹುದು Infinix ಬಿಡುಗಡೆ ಮಾಡಿದೆ ಹೊಸ Smartphone,


ಭಾರತೀಯ ಹಾಕಿ ತಂಡದ ಆಟಗಾರರಿಗೆ Mi 11X :
Xiaomi India ಎಂಡಿ ಮನು ಕುಮಾರ್ ಜೈನ್, ಭಾರತೀಯ ಪುರುಷರ ಹಾಕಿ ತಂಡದ ಪ್ರತಿಯೊಬ್ಬರಿಗೂ Mi 11X ಸ್ಮಾರ್ಟ್‌ಫೋನ್ ಘೋಷಿಸಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕಅನ್ನು ತಮ್ಮದಾಗಿಸಿಕೊಂಡಿದ್ದಾರೆ.


Xiaomi Mi 11 ಅಲ್ಟ್ರಾ ಬೆಲೆ :
Xiaomi Mi 11 ಅಲ್ಟ್ರಾ,  ಕಂಪನಿಯ ಪ್ರಮುಖ ಸ್ಮಾರ್ಟ್ಫೋನ್ ಆಗಿದ್ದು,  12GB RAM/256GB ಸ್ಟೋರೇಜ್ ವೆರಿಯೇಂಟ್ ನ ಬೆಲೆ 69,999 ರೂ. 6GB RAM / 128GB ಸ್ಟೋರೇಜ್ ವೆರಿಯೇಂಟ್ ನ ಬೆಲೆ ರೂ 29,999 ಮತ್ತು 8GB RAM / 128GB ಸ್ಟೋರೇಜ್ ವೆರಿಯೇಂಟ್ ನ  ಬೆಲೆ ರೂ 31,999ಗಳಾಗಿವೆ.


ಇದನ್ನೂ ಓದಿ : Airtel- ನಿಮ್ಮ ಏರ್‌ಟೆಲ್ ಸಂಖ್ಯೆಯಲ್ಲಿಯೂ ಈ ಸಂದೇಶ ಸ್ವೀಕರಿಸಿದ್ದೀರಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ