ಎಲ್ಲಾ ದಾಖಲೆ ಮುರಿದು ಮುನ್ನುಗುತ್ತಿದೆ ಈ ಕಾರು ! ಗ್ರಾಹಕರು ಅತಿ ಹೆಚ್ಚು ಖರೀದಿಸುತ್ತಿರುವ ಕಾರಿದು !
Top Selling Car Brand In Oct 2023 : ತನ್ನ ಮಾಸಿಕ ಮಾರಾಟ ದಾಖಲೆಯನ್ನು ಮುರಿದು ಮಾರುತಿ ಸುಜುಕಿ ಹೊಸ ಇತಿಹಾಸ ಬರೆದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು 1,67,520 ಕಾರುಗಳನ್ನು ಮಾರಾಟ ಮಾಡ
Top Selling Car Brand In Oct 2023 : ಮಾರುತಿ ಸುಜುಕಿ ಅಕ್ಟೋಬರ್ 2023 ರಲ್ಲಿ ತನ್ನ ಅತ್ಯಧಿಕ ಮಾಸಿಕ ಮಾರಾಟವನ್ನು ದಾಖಲಿಸಿದೆ. ಇದರೊಂದಿಗೆ, ದೇಶದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡುವ ಕಂಪನಿಯಾಗಿ ಹೊರಹೊಮ್ಮಿದೆ. ಅಕ್ಟೋಬರ್ 2023ರಲ್ಲಿ, ಅದರ ಮಾರಾಟವು ವಾರ್ಷಿಕ ಆಧಾರದ ಮೇಲೆ 19 ಪ್ರತಿಶತದಷ್ಟು ಅಂದರೆ
1,99,217 ಯುನಿಟ್‌ಗಳಷ್ಟು ಹೆಚ್ಚಾಗಿದೆ. ಈ ಸಂಖ್ಯೆಯೊಂದಿಗೆ, ತನ್ನ ಮಾಸಿಕ ಮಾರಾಟ ದಾಖಲೆಯನ್ನು ಮುರಿದು ಮಾರುತಿ ಸುಜುಕಿ ಹೊಸ ಇತಿಹಾಸ ಬರೆದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು 1,67,520 ಕಾರುಗಳನ್ನು ಮಾರಾಟ ಮಾಡಿತ್ತು.
ದೇಶದಲ್ಲಿ 1,77,266 ಯುನಿಟ್‌ಗಳು ಮಾರಾಟ :
ಅಕ್ಟೋಬರ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 1,77,266 ಯುನಿಟ್‌ಗಳಷ್ಟು ಮಾರಾಟವಾಗಿದೆ. ಇದು ಕಂಪನಿಯ ಅತ್ಯುತ್ತಮ ಅಂಕಿಅಂಶಗಳಲ್ಲಿ ಒಂದಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ದೇಶೀಯ ಮಾರಾಟ 1,47,072 ಯುನಿಟ್ ಆಗಿತ್ತು. ಅಂದರೆ, ಅಕ್ಟೋಬರ್ 2023 ರಲ್ಲಿ, ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ ಮಾರಾಟವು ಸುಮಾರು 21 ಪ್ರತಿಶತದಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ : ಇನ್ಮುಂದೆ ಅಮೆಜಾನ್‌ನಲ್ಲೇ ಹುಂಡೈ ಕಾರ್ ಬುಕ್ ಮಾಡಬಹುದು
ಯುಟಿಲಿಟಿ ವೆಹಿಕಲ್ ವಿಭಾಗದಲ್ಲಿ ಬಿಗ್ ಜಂಪ್ :
ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ ಪ್ರಯಾಣಿಕ ವಾಹನ (ಕಾರು) ಮಾರಾಟವು ಅಕ್ಟೋಬರ್ 2023 ರಲ್ಲಿ 1,68,047 ಯುನಿಟ್‌ಗಳಷ್ಟಾಗಿದೆ. ಇದು ಅಕ್ಟೋಬರ್ 2022ರಲ್ಲಿ 1,40,337 ಯುನಿಟ್‌ಗಳಷ್ಟಿತ್ತು. ಯುಟಿಲಿಟಿ ವೆಹಿಕಲ್ ವಿಭಾಗದಲ್ಲಿ, ಕಂಪನಿಯು 91 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ವಿಭಾಗವು ಬ್ರೆಝಾ, ಗ್ರ್ಯಾಂಡ್ ವಿಟಾರಾ, ಎರ್ಟಿಗಾ ಮತ್ತು XL6 ನಂತಹ ಮಾದರಿಗಳನ್ನು ಒಳಗೊಂಡಿದೆ.
ಹಿಂದೆ ಬಿತ್ತು ಹ್ಯುಂಡೈ, ಟಾಟಾ, ಮಹೀಂದ್ರಾ :
ಹುಂಡೈನ ದೇಶೀಯ ಮಾರಾಟವು ಶೇಕಡಾ 15 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ 48,001 ಯುನಿಟ್‌ಗಳಷ್ಟು ಮಾರಾಟವಾಗಿತ್ತು. ಆದರೆ ಈಗ ಇದು 55,128 ಯುನಿಟ್‌ಗಳನ್ನು ತಲುಪಿದೆ. ಮತ್ತೊಂದೆಡೆ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ನ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಶೇಕಡಾ 7 ರಷ್ಟು ಏರಿಕೆಯಾಗಿ 48,337 ಯುನಿಟ್‌ಗಳಿಗೆ ತಲುಪಿದೆ. ಇದರಲ್ಲಿ ಎಲೆಕ್ಟ್ರಿಕ್ ವಾಹನಗಳೂ ಸೇರಿವೆ. ಇದರ ಹೊರತಾಗಿ, ಮಹೀಂದ್ರಾದ ಯುಟಿಲಿಟಿ ವಾಹನಗಳ ಸಗಟು ಮಾರಾಟವು ವರ್ಷದಿಂದ ವರ್ಷಕ್ಕೆ 36 ಪ್ರತಿಶತದಷ್ಟು ಹೆಚ್ಚಾಗಿದ್ದು, ಮಾರಾಟವು 43,708 ಯುನಿಟ್‌ಗಳಿಗೆ ತಲುಪಿದೆ.
ಇದನ್ನೂ ಓದಿ : ಜಿಯೋ ಬಳಕೆದಾರರಿಗೊಂದು ಗುಡ್ ನ್ಯೂಸ್, 30 ದಿನಗಳವರೆಗೆ ಉಚಿತ ಡೇಟಾ, ಕಾಲಿಂಗ್ ಹಾಗೂ ಓಟಿಟಿ ಲಾಭ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ