Nexon, Brezza Punch ಎಲ್ಲವನ್ನೂ ಹಿಂದಿಕ್ಕಿ ಮಾರಾಟದಲ್ಲಿ ನಂ.1 ಪಟ್ಟಕ್ಕೇರಿದ SUV ಇದು !
Top Selling SUV In June 2023 : ಜೂನ್ (2023) ತಿಂಗಳ ಕಾರು ಮಾರಾಟದ ಅಂಕಿ ಅಂಶವನ್ನು ಗಮನಿಸುವುದಾದರೆ ಹುಂಡೈ ಕ್ರೆಟಾ ಹೆಚ್ಚು ಮಾರಾಟವಾದ SUV ಆಗಿದೆ. ಇದು Nexon, Brezza Punch ನಂತಹ ಎಲ್ಲಾ SUV ಗಳನ್ನು ಹಿಂದಿಕ್ಕಿ ಮಾರಾಟದ ಅಂಕಿ ಅಂಶದಲ್ಲಿ ಮುನ್ನಡೆಯಲ್ಲಿದೆ.
Top Selling SUV In June 2023 : ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ SUVಗಳ ಮಾರಾಟದಲ್ಲಿ ಏರಿಕೆ ಕಾಣುತ್ತಲೇ ಇದೆ. ಇತರ ಕಾರುಗಳಿಗೆ ಹೋಲಿಸಿದರೆ SUVಗಳು ಹೆಚ್ಚು ವಿಶಾಲ ಮತ್ತು ಎತ್ತರವಾಗಿರುವುದೇ ಇದಕ್ಕೆ ಕಾರಣ. ಅವುಗಳು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿವೆ. ಜೂನ್ (2023) ತಿಂಗಳ ಕಾರು ಮಾರಾಟದ ಅಂಕಿ ಅಂಶವನ್ನು ಗಮನಿಸುವುದಾದರೆ ಹುಂಡೈ ಕ್ರೆಟಾ ಹೆಚ್ಚು ಮಾರಾಟವಾದ SUV ಆಗಿದೆ. ಇದು Nexon, Brezza Punch ನಂತಹ ಎಲ್ಲಾ SUV ಗಳನ್ನು ಹಿಂದಿಕ್ಕಿ ಮಾರಾಟದ ಅಂಕಿ ಅಂಶದಲ್ಲಿ ಮುನ್ನಡೆಯಲ್ಲಿದೆ.
ನಂ. 1 ಪಟ್ಟಕ್ಕೇರಿದ ಕ್ರೆಟಾ :
ಜೂನ್ 2023 ರಲ್ಲಿ, ಕ್ರೆಟಾ ಮಾರಾಟದ ವಿಚಾರದಲ್ಲಿ ಭಾರೀ ಮುನ್ನಡೆ ಕಂಡಿದೆ. ಇದು ಮಾರಾಟದ ವಿಷಯದಲ್ಲಿ ಎಲ್ಲಾ SUV ಗಳನ್ನು ಹಿಂದೆ ಅಟ್ಟಿದೆ . ಕ್ರೆಟಾದ ಒಟ್ಟು 14,447 ಯೂನಿಟ್ ಗಳು ಮಾರಾಟವಾಗಿವೆ.
ಇದರೊಂದಿಗೆ, ಇದು ಹೆಚ್ಚು ಮಾರಾಟವಾಗಿರುವ SUV ಆಗಿ ಹೊರ ಹೊಮ್ಮಿದೆ. ಇದರ ನಂತರ ಟಾಟಾ ನೆಕ್ಸಾನ್ (13,827 ಯುನಿಟ್‌ಗಳು) ಹ್ಯುಂಡೈ ವೆನ್ಯೂ (11,606 ಯುನಿಟ್‌ಗಳು ), ಟಾಟಾ ಪಂಚ್ (10,990 ಯುನಿಟ್‌ಗಳು ) ಕ್ರಮವಾಗಿ ಬರುತ್ತದೆ. ಇನ್ನು ಮಾರುತಿ ಬ್ರೆಝಾದ 10,578 ಯುನಿಟ್‌ಗಳು ಮಾರಾಟವಾಗಿವೆ. ಅಂದರೆ, ಟಾಪ್-5 SUV ಗಳಲ್ಲಿ, ಎರಡು ಮಾಡೆಲ್‌ಗಳು ಹ್ಯುಂಡೈ ಮತ್ತು ಎರಡು ಮಾದರಿಗಳು ಟಾಟಾ ಮೋಟಾರ್ಸ್ ಗೆ ಸೇರಿದ ಕಾರು ಆಗಿದೆ. ಮಾರುತಿಯ ಬ್ರೆಜ್ಜಾ 5 ನೇ ಸ್ಥಾನಕ್ಕೆ ಇಳಿದಿದೆ.
ಇದನ್ನೂ ಓದಿ : ಈ ದಿನ ಬಿಡುಗಡೆಯಾಗಲಿದೆ iPhone 15 : ಬೆಲೆ ಎಷ್ಟು ಗೊತ್ತಾ ?
ಹುಂಡೈ ಕ್ರೆಟಾ :
ಹ್ಯುಂಡೈ ಕ್ರೆಟಾದ ಬೆಲೆ ರೂ 10.87 ಲಕ್ಷದಿಂದ ರೂ 19.20 ಲಕ್ಷದವರೆಗೆ ಸಾಗುತ್ತದೆ. ಇದು 5 ಆಸನಗಳ ಕಾರು. ಇದು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (115 PS/144 Nm) ಮತ್ತು 1.5-ಲೀಟರ್ ಡೀಸೆಲ್ (116 PS/250 Nm) ಆಯ್ಕೆಯನ್ನು ಪಡೆಯುತ್ತದೆ. ಇದು 6-ಸ್ಪೀಡ್ ಮ್ಯಾನುವಲ್, ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್‌ಮಿಷನ್ (IVT) ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತದೆ.
ಹುಂಡೈ ಕ್ರೆಟಾ ವೈಶಿಷ್ಟ್ಯ :
ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇದು ಪನೋರಮಿಕ್ ಸನ್‌ರೂಫ್, ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್
(10.25 ಇಂಚು), ಕನೆಕ್ಟೆಡ್ ಕಾರ್ ಟೆಕ್ನಾಲಜಿ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಚಾರ್ಜಿಂಗ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ.
ಇದನ್ನೂ ಓದಿ : ಭೂಮಿಯತ್ತ ಧಾವಿಸುತ್ತಿದೆ 52 ಅಡಿ ಉದ್ದದ ಕ್ಷುದ್ರಗ್ರಹ, ಎಚ್ಚರಿಕೆ ನೀಡಿದ ನಾಸಾ!
ಪ್ರಯಾಣಿಕರ ಸುರಕ್ಷತೆಗಾಗಿ, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್ EBD ಯಂತಹ ಪಾರ್ಕಿಂಗ್ ವೈಶಿಷ್ಟ್ಯಗಳು ಕ್ಯಾಮರಾ ಮತ್ತು ABS ನೊಂದಿಗೆ ಲಭ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.