ಬೆಂಗಳೂರು : ಭಾರತದಲ್ಲಿನ ಗ್ರಾಹಕರಿಗೆ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಮತ್ತು ನಾನ್ ಹೈಬ್ರಿಡ್ ರೂಪಾಂತರಗಳ ಡೆಲಿವೆರಿಯನ್ನು ಪ್ರಾರಂಭಿಸಿದೆ. ಅನೇಕ ಕಡೆಗಳಲ್ಲಿ ಮೊದಲು ಬಂದವರಿಗೆ ಆದ್ಯತೆಯ ಆಧಾರದ ಮೇಲೆ ವಿತರಣೆ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಇದರ ಹೈಬ್ರಿಡ್ ಆವೃತ್ತಿಯನ್ನು ಹೆಚ್ಸಿನ ಸಂಖ್ಯೆಯಲ್ಲಿ ಬುಕ್ ಮಾಡಲಾಗಿದೆ. ವರದಿಗಳ ಪ್ರಕಾರ, ಅದರ ನಾನ್ ಹೈಬ್ರಿಡ್ ರೂಪಾಂತರಗಳಲ್ಲಿ ಸುಮಾರು 10 ತಿಂಗಳ  ವೈಟಿಂಗ್ ಪೀರಿಯೇಡ್ ಇದ್ದರೆ, ಟಾಪ್ ವೆರಿಯೇಂಟ್ ನಲ್ಲಿ ಸುಮಾರು ಒಂದು ವರ್ಷದ ವೈಟಿಂಗ್ ಪೀರಿಯೇಡ್  ಇದೆ. 


COMMERCIAL BREAK
SCROLL TO CONTINUE READING

ಇನ್ನು ಬೇಸ್ ಪೆಟ್ರೋಲ್ ರೂಪಾಂತರದ ಬೆಲೆಯು 18.30 ಲಕ್ಷದಿಂದ ಪ್ರಾರಂಭವಾಗಿ, ಟಾಪ್-ಸ್ಪೆಕ್ ಸ್ಟ್ರಾಂಗ್ ಹೈಬ್ರಿಡ್ ರೂಪಾಂತರ 28.97 ಲಕ್ಷಕದವರೆಗೆ ಏರಿಕೆಯಾಗುತ್ತದೆ. 50,000 ಟೋಕನ್ ಹಣವನ್ನು ಪಾವತಿಸಿ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ (ಅಧಿಕೃತ ಡೀಲರ್‌ಶಿಪ್‌ಗಳಲ್ಲಿ) ಈ ಕಾರನ್ನು ಬುಕ್ ಮಾಡಬಹುದು. ಇದು ಒಟ್ಟು 5 ಟ್ರಿಮ್ ಹಂತಗಳಲ್ಲಿಈ ಕಾರು  ಲಭ್ಯವಿದೆ. G,GX,VX,ZX ಮತ್ತು ZX(O).7 ಬಣ್ಣಗಳ  ಆಯ್ಕೆಗಳಲ್ಲಿ ಈ ಕಾರನ್ನು ಪರಿಚಯಿಸಲಾಗಿದೆ. ಇದು ಮೊನೊಕಾಕ್ ಫ್ರಂಟ್-ವೀಲ್-ಡ್ರೈವ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದರ ಉದ್ದ 4755mm, ಅಗಲ 1845mm ಮತ್ತು ಎತ್ತರ 1785mm. ಇದರ ವ್ಹೀಲ್ ಬೇಸ್ 2850 ಎಂಎಂ. 


ಇದನ್ನೂ ಓದಿ : ಕೇವಲ 1 ಗಂಟೆಯಲ್ಲಿ ಫುಲ್ ಚಾರ್ಜ್ ಆಗಬಲ್ಲ, 450kg ತೂಕದ ಮಿನಿ ಎಲೆಕ್ಟ್ರಿಕ್ ಕಾರ್, ಮೈಲೇಜ್ ಕೇಳಿದ್ರೆ ಶಾಕ್ ಆಗ್ತೀರಾ!


ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್, ಲೇನ್ ಕೀಪ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಪ್ರಿ-ಕೊಲಿಜನ್ ಸಿಸ್ಟಮ್ ನಂತಹ ವೈಶಿಷ್ಟ್ಯಗಳನ್ನು ನೀಡುವ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಪಡೆಯುತ್ತದೆ. ಇದು 6 ಏರ್‌ಬ್ಯಾಗ್‌ಗಳು, ಟ್ರಾಕ್ಶನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು EBD ಜೊತೆಗೆ ABS ನಂತಹ ವೈಶಿಷ್ಟ್ಯಗಳನ್ನು ಕೂಡಾ ಹೊಂದಿದೆ. 


ಇದನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ  ಬಿಡುಗಡೆ ಮಾಡಲಾಗಿದೆ. 2.0-ಲೀಟರ್ NA ಪೆಟ್ರೋಲ್ ಮತ್ತು 2.0-ಲೀಟರ್ TNGA ಪೆಟ್ರೋಲ್ (ಹೈಬ್ರಿಡ್). ಇವುಗಳು CVT ಗೇರ್‌ಬಾಕ್ಸ್ (NA ಪೆಟ್ರೋಲ್‌ನಲ್ಲಿ) ಮತ್ತು ಇ-ಡ್ರೈವ್ ಟ್ರಾನ್ಸ್‌ಮಿಷನ್ (ಹೈಬ್ರಿಡ್‌ನಲ್ಲಿ) ನೊಂದಿಗೆ ಬರುತ್ತದೆ. ಇದರ ಸ್ಟ್ರಾಂಗ್ ಹೈಬ್ರಿಡ್ ಮಾದರಿಯು 21.1 kmpl ಮೈಲೇಜ್ ನೀಡುತ್ತದೆ.


ಇದನ್ನೂ ಓದಿ :  ದೇಶದ ಅತೀ ಅಗ್ಗದ Car ಮಾರುಕಟ್ಟೆಗೆ ಲಗ್ಗೆ! ಇದರ ಫೀಚರ್ ನೋಡಿದ್ರೆ ವಾವ್ಹ್.. ಅನ್ನೋದು ಪಕ್ಕಾ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.