Translation Tips: ನೀವೂ ಕೂಡ ಆಗ್ಗಾಗ್ಗ ವಿದೇಶ ಪ್ರವಾಸ ಮಾಡುತ್ತಿದ್ದು, ವಿದೇಶಿ ಭಾಷೆ (Foreign Language) ನಿಮಗೆ ಅರ್ಥವಾಗುವುದಿಲ್ಲ ಎಂದಾದಲ್ಲಿ, ಗೂಗಲ್ (Google) ಲೆನ್ಸ್ ನಿಮಗೆ ಅನುವಾದಕನ ಕೆಲಸ ಮಾಡಿಕೊಡುತ್ತದೆ. ಹೀಗಾಗಿ ಗೂಗಲ್ ಲೆನ್ಸ್ ಬಳಸಿ ಪಠ್ಯವನ್ನು ಹೇಗೆ ಅನುವಾದಿಸಬಹುದು ಎಂಬುದರ ಮಾಹಿತಿ ಈ ಲೇಖನದಲ್ಲಿ ಇಂದು ನಾವು ನಿಮಗೆ ಹೇಳಿಕೊಡಲಿದ್ದೇವೆ.  ಕೆಲವು ಸರಳ ಹಂತಗಳನ್ನು ಅನುಸರಿಸಿ, ನೀವು ಕೆಲವೇ ಸೆಕೆಂಡು ಗಳಲ್ಲಿ ಚಿಹ್ನೆಗಳು, ಮೆನುಗಳು ಮತ್ತು ಸಂಭಾಷಣೆಗಳನ್ನು ಅರ್ಥಮಾಡಿಕೊಳ್ಳಬಹುದು. ಬನ್ನಿ ಹೇಗೆ ತಿಳಿದುಕೊಳ್ಳೋಣ (Technology News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-WhatsApp Favorite Feature: ವಾಟ್ಸ್ ಆಪ್ ನಲ್ಲಿ ಶೀಘ್ರದಲ್ಲೇ ಬರಲಿದೆ ನಿಮ್ಮ ನೆಚ್ಚಿನ ವೈಶಿಷ್ಟ್ಯ, ಇಲ್ಲಿದೆ ಡೀಟೈಲ್ಸ!


ಗೂಗಲ್ ಲೆನ್ಸ್ ಅಪ್ಲಿಕೇಷನ್ ಮೂಲಕ ನೀವು ಈ ಕೆಲಸ ಮಾಡಬಹುದು
-  ಇದಕ್ಕಾಗಿ ನೀವು ಮೊದಲು ನಿಮ್ಮ ಫೋನ್‌ನಲ್ಲಿ ಗೂಗಲ್ ಲೆನ್ಸ್ ಅಪ್ಲಿಕೇಶನ್ ತೆರೆಯಿರಿ. ನಿಮ್ಮ ಫೋನ್‌ನಲ್ಲಿ ಈ ಅಪ್ಲಿಕೇಶನ್ ಇಲ್ಲದಿದ್ದರೆ, ನೀವು ಅದನ್ನು Google Play Store (Android) ಅಥವಾ App Store (iPhone) ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
- ಒಂದು ವೇಳೆ ಅದು ನಿಮಗೆ ಅನುಮತಿಗಳನ್ನು ಕೇಳಿದರೆ, ಕ್ಯಾಮರಾ ಬಳಸಲು ಅನುಮತಿ ನೀಡಿ. ಏಕೆಂದರೆ, ಗೂಗಲ್ ಲೆನ್ಸ್ ಕೆಲಸ ಮಾಡಲು ಇದು ಬೇಕಾಗುತ್ತದೆ.
- ಈಗ 'ಅನುವಾದ' ಆಯ್ಕೆಯನ್ನು ಆಯ್ಕೆಮಾಡಿ: ಸಾಮಾನ್ಯವಾಗಿ ಸ್ಕ್ರೀನ್ ಕೆಳಭಾಗದಲ್ಲಿ ನಿಮಗೆ ಕೆಲ ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ನೀವು  'ಅನುವಾದ' ಐಕಾನ್ ಅನ್ನು ಕ್ಲಿಕ್ಕಿಸಬಹುದು ಅಥವಾ  ಸ್ವೈಪ್ ಮಾಡಬಹುದು 
- ನೀವು ಅನುವಾದಿಸಲು ಬಯಸುವ ಪಠ್ಯದ ಮೇಲೆ ನಿಮ್ಮ ಕ್ಯಾಮರಾವನ್ನು ಫೋಕಸ ಮಾಡಿ: ಉತ್ತಮ ಫಲಿತಾಂಶಗಳಿಗಾಗಿ, ಪಠ್ಯವು ಸ್ಪಷ್ಟವಾಗಿರುವಂತೆ ನೋಡಿಕೊಳ್ಳಿ.
- ಲೈವ್ ಅನುವಾದವನ್ನು ನೋಡಿ: ಅನುವಾದಿಸಿದ ಪಠ್ಯವು ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಮೂಲ ಪಠ್ಯದ ಮೇಲೆ ಕಾಣಿಸಿಕೊಳ್ಳುತ್ತದೆ.


ಇದನ್ನೂ ಓದಿ-Facebook Insta Outage: ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಫೆಸ್ಬುಕ್, ಇನ್ಸ್ಟಾ, ಖಾತೆ ತನ್ನಷ್ಟಕ್ಕೆ ತಾನೇ ಲಾಗ್ಔಟ್ ಆಗುತ್ತಿವೆ


ಅಂಡ್ರಾಯಿಡ್  ಬಳಕೆದಾರರು ಗೂಗಲ್ ಲೆನ್ಸ್ ಈ ರೀತಿ ಬಳಸಿ
- ನಿಮ್ಮ ಫೋನ್‌ನಲ್ಲಿ ಕ್ಯಾಮರಾ ಆಪ್ ತೆರೆಯಿರಿ.
- "ಲೆನ್ಸ್" ಅಥವಾ "ಅನುವಾದ" ಮೋಡ್ ಅನ್ನು ಹುಡುಕಿ: ಇದು ಸಾಮಾನ್ಯವಾಗಿ ಕೆಳಭಾಗದಲ್ಲಿ ಅಥವಾ ವ್ಯೂಫೈಂಡರ್‌ನಲ್ಲಿಯೇ ಪರದೆಯ ಮೇಲೆ ಬಟನ್ ಅಥವಾ ಐಕಾನ್ ರೂಪದಲ್ಲಿರಬಹುದು.
- ನೀವು ಅನುವಾದಿಸಲು ಬಯಸುವ ಪಠ್ಯದ ಮೇಲೆ ಕ್ಯಾಮೆರಾ ತೆಗೆದುಕೊಂಡು ಹೋಗಿ.  ನೀವು ಲೆನ್ಸ್ ಅಪ್ಲಿಕೇಶನ್ ಅನ್ನು ಬಳಸುವಂತೆಯೇ.
- 'ಅನುವಾದ' ಟ್ಯಾಪ್ ಮಾಡಿ (ಅಗತ್ಯವಿದ್ದರೆ): ನಿಮ್ಮ ಸಾಧನದ ಮಾದರಿಯನ್ನು ಅವಲಂಬಿಸಿ, ಅನುವಾದ ಓವರ್‌ಲೇ ಅನ್ನು ಸಕ್ರಿಯಗೊಳಿಸಲು ನೀವು "ಅನುವಾದ" ಬಟನ್ ಅನ್ನು ಟ್ಯಾಪ್ ಮಾಡಬೇಕಾಗಬಹುದು. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ