ನವದೆಹಲಿ : WhatsApp Tips And Tricks:  Whatsapp ಅತ್ಯಂತ ಜನಪ್ರಿಯ ಸಂದೇಶ ರವಾನೆ   ಪ್ಲಾಟ್ ಫಾರಂ  ಆಗಿದೆ. ಮೆಸೇಜ್ ಕಳುಹಿಸಲು ಇದೀಗ ಎಲ್ಲರೂ ವಾಟ್ಸಾಪ್ ಅನ್ನೇ ಅವಲಂಬಿಸಿದ್ದಾರೆ.  ವಾಟ್ಸಾಪ್ ಚಾಟ್, ವಾಟ್ಸಾಪ್ ಕಾಲ್, ಅಥವಾ ವಾಟ್ಸಾಪ್ ವೀಡಿಯೊ ಕಾಲ್ ಇತ್ತೀಚಿನ ದಿನಗಳಲಿ ಭಾರೀ ಜನಪ್ರಿಯವಾಗಿದೆ.  ಈ ಅಪ್ಲಿಕೇಶನ್ ಅನ್ನು ಪ್ರಪಂಚದಾದ್ಯಂತ ಹೆಚ್ಚು ಬಳಸಲಾಗುತ್ತಿದೆ. ಇದು ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಈ ಅಪ್ಲಿಕೇಶನ್ ಮೂಲಕ ತ್ವರಿತ ಸಂದೇಶವನ್ನು ಕಳುಹಿಸಬಹುದು.  


COMMERCIAL BREAK
SCROLL TO CONTINUE READING

ವಾಟ್ಸಾಪ್  ಚಾಟ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದ್ದರೂ, ಬೇರೆಯವರು ನಿಮ್ಮ ಚಾಟ್ ಅನ್ನು ಓದಲು ಸಾಧ್ಯವೇ ? ಹೀಗೊಂದು ಪ್ರಶ್ನೆ ನಿಮ್ಮನ್ನು ಕಾಡಬಹುದು.    ಹೌದು ಇದು ಸಾಧ್ಯ. ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ, ಬೇರೆಯವರು ನಿಮ್ಮ ಚಾಟ್‌ಗಳಿಗೆ ಸುಲಭವಾಗಿ ಅಕ್ಸೆಸ್ ಪಡೆದುಕೊಳ್ಳಬಹುದು ಮಾತ್ರವಲ್ಲ ನಿಮ್ಮ ಚಾಟ್ ಗಳನ್ನು ಸಲೀಸಾಗಿ ಓದಬಹುದು.  ಹೀಗೆ ಯಾರಾದರೂ ನಿಮೆಗೆ ಗೊತ್ತಿಲ್ಲದಂತೆ ನಿಮ್ಮ ವಾಟ್ಸಾಪ್ ಚಾಟ್ ಅನ್ನು ಓದುತ್ತಿದ್ದಾರೆಯೇ ಎಂದು  ನೀವು ಕೂಡಾ ತಿಳಿದುಕೊಳ್ಳಬಹುದು.  ಅದಕ್ಕಾಗಿ ಕೆಳಗೆ ಹೇಳುವ ಟ್ರಿಕ್ ಅನ್ನು ಅನುಸರಿಸಿ. 


ಇದನ್ನೂ ಓದಿ : Dangerous Apps: ಸ್ಮಾರ್ಟ್‌ಫೋನ್‌ನಲ್ಲಿರುವ ಈ 7 ಆ್ಯಪ್‌ಗಳು ನಿಮ್ಮ ಅಕೌಂಟ್ ಖಾಲಿ ಮಾಡಬಹುದು, ಎಚ್ಚರ!


WhatsApp ವೆಬ್ : 
WhatsApp ವೆಬ್ ಮೂಲಕ, ನೀವು ಯಾವುದೇ ಲ್ಯಾಪ್‌ಟಾಪ್ ಅಥವಾ PC ಯಲ್ಲಿ ನಿಮ್ಮ WhatsApp ಅನ್ನು ಓಪನ್ ಮಾಡಿದ್ದರೆ, ಈ ವೈಶಿಷ್ಟ್ಯದ ಮೂಲಕ, ಬೇರೆಯವರು ನಿಮ್ಮ ಚಾಟ್ ಅನ್ನು ಸುಲಭವಾಗಿ ಓದಬಹುದು. ನೀವು ಯಾರಿಗಾದರೂ ಮೊಬೈಲ್ ನೀಡಿದ್ದು, ಅವರು ನಿಮ್ಮ WhatsApp ಅನ್ನು WhatsApp ವೆಬ್‌ಗೆ ಸಂಪರ್ಕಿಸಿದ್ದರೆ, ನಿಮ್ಮ ಎಲ್ಲಾ ಸಂದೇಶಗಳನ್ನು ಅವರು ಓದಬಹುದು. ನಿಮ್ಮ WhatsApp ಚಟುವಟಿಕೆ ಮೇಲೆ ಕಣ್ಣಿಡಬಹುದು. 


ಇದನ್ನೂ ಓದಿ : Smartphone Tips: ನಿಮ್ಮೀ ತಪ್ಪುಗಳು ನಿಮ್ಮ ಸ್ಮಾರ್ಟ್ ಫೋನ್ ಜೀವಿತಾವಧಿಗೆ ಮಾರಕ, ಎಚ್ಚರ!


ಯಾರು ಚಾಟ್ ಓದುತ್ತಿದ್ದಾರೆಂದು ಕಂಡುಹಿಡಿಯುವುದು ಹೇಗೆ ?
ನಿಮ್ಮ ವೈಯಕ್ತಿಕ ಚಾಟ್ ಅನ್ನು ಯಾರು ಓದುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ತುಂಬಾ ಸುಲಭವಾದ ಮಾರ್ಗವಾಗಿದೆ. ನಿಮ್ಮ ಫೋನ್‌ನಲ್ಲಿ ಲಿಂಕ್ ಮಾಡಲಾದ ಡಿವೈಸ್ ಗೆ ಹೋಗುವ ಮೂಲಕ ಎಲ್ಲಾ ವಿವರಗಳನ್ನು ಪರಿಶೀಲಿಸಬಹುದು. ಈ ಲಿಂಕ್‌ನ ಸಹಾಯದಿಂದ, ನಿಮ್ಮ ಚಾಟ್ ಅನ್ನು ಯಾರಾದರೂ ಓದುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು.  ಲಿಂಕ್ಡ್ ಡಿವೈಸ್ ಸಹಾಯದಿಂದ ನಿಮ್ಮ WhatsAppಗೆ ಯಾವ ಸಾಧನಗಳನ್ನು ಕನೆಕ್ಟ್ ಮಾಡಲಾಗಿದೆ ಎಂಬುದನ್ನು ಸಹ ತಿಳಿದುಕೊಳ್ಳಬಹುದು. ಲಿಂಕ್ಡ್ ಡಿವೈ ಅನ್ನು ನಿಮ್ಮ ಫೋನ್‌ನಿಂದ  ಲಾಗ್ ಔಟ್ ಮಾಡಬಹುದು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.