ಕೇವಲ 2700 ರೂ.ಗಳಲ್ಲಿ ನಿಮ್ಮ ಸಾಮಾನ್ಯ ಕಾರ್ ಸೀಟ್ ಅನ್ನು ವೆಂಟಿಲೇಟೆಡ್ ಸೀಟ್ ಆಗಿ ಬದಲಾಯಿಸಿ
ಪ್ರಸ್ತುತ ಕಾರುಗಳಲ್ಲಿ ವೆಂಟಿಲೇಟೆಡ್ ಸೀಟ್ ವೈಶಿಷ್ಟ್ಯ ಹೆಚ್ಚು ಜನಪ್ರಿಯವಾಗುತ್ತಿದೆ. ಅದರಲ್ಲೂ ಬೇಸಿಗೆಯಲ್ಲಿ ಕಾರ್ ವೆಂಟಿಲೇಟೆಡ್ ಸೀಟ್ ಪ್ರಯಾಣವನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ. ಇದನ್ನು ಖರೀದಿಸಲು ಹೆಚ್ಚು ಖರ್ಚು ಮಾಡುವ ಅಗತ್ಯವೂ ಇಲ್ಲ. ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ ಕಾರ್ ವೆಂಟಿಲೇಟೆಡ್ ಸೀಟ್‌ಗಳು.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಾರುಗಳಲ್ಲಿ ವೆಂಟಿಲೇಟೆಡ್ ಸೀಟ್ ವೈಶಿಷ್ಟ್ಯವು ಜನರ ಮನಸೂರೆಗೊಳ್ಳುತ್ತಿದೆ. ಅದರಲ್ಲೂ ಬೇಸಿಗೆಯಲ್ಲಿ ಕಾರುಗಳಲ್ಲಿ ವೆಂಟಿಲೇಟೆಡ್ ಸೀಟ್‌ಗಳನ್ನು ಬಳಸುವುದರಿಂದ ಪ್ರಯಾಣವು ಆರಾಮದಾಯಕವಾಗಿರುತ್ತದೆ. ನೀವೂ ಸಹ ನಿಮ್ಮ ಸಾಮಾನ್ಯ ಕಾರಿನಲ್ಲಿ ವೆಂಟಿಲೇಟೆಡ್ ಸೀಟ್‌ಗಳನ್ನು ಬಳಸಲು ಬಯಸಿದರೆ ಅದಕ್ಕಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಅತಿ ಕಡಿಮೆ ಬೆಲೆಯಲ್ಲಿ ಕಾರ್ ವೆಂಟಿಲೇಟೆಡ್ ಸೀಟ್‌ಗಳು ಲಭ್ಯವಾಗಲಿವೆ.
ಏನಿದು ಕಾರ್ ವೆಂಟಿಲೇಟೆಡ್ ಸೀಟ್‌ಗಳು?
ಕಾರ್ ವೆಂಟಿಲೇಟೆಡ್ ಸೀಟ್‌ಗಳು ವಿಶೇಷ ರೀತಿಯ ಆಸನಗಳಾಗಿವೆ, ಅದು ಗಾಳಿಯ ಪ್ರಸರಣದ ಹೆಚ್ಚುವರಿ ವ್ಯವಸ್ಥೆಯನ್ನು ಹೊಂದಿದೆ. ಸರಿಯಾಗಿ ನಿರ್ದೇಶಿಸಿದ ಗಾಳಿಯ ಪೂರೈಕೆಯು ಚಾಲಕ ಅಥವಾ ಪ್ರಯಾಣಿಕರ ದೇಹವನ್ನು ತಕ್ಷಣ ತಂಪಾಗಿಸುವ ಪರಿಣಾಮವನ್ನು ಒದಗಿಸುತ್ತದೆ. ವೆಂಟಿಲೇಟೆಡ್ ಕಾರ್ ಆಸನಗಳು ಹೆಚ್ಚಾಗಿ ಕಾರಿನ ಹವಾನಿಯಂತ್ರಣ ವ್ಯವಸ್ಥೆಯನ್ನು ಪೂರಕವಾಗಿ ಜೊತೆಯಲ್ಲಿರುತ್ತವೆ, ಆದರೆ ಅವುಗಳು ಪ್ರತ್ಯೇಕ ಕೂಲಿಂಗ್ ವ್ಯವಸ್ಥೆಯನ್ನು ಸಹ ಅಳವಡಿಸಬಹುದಾಗಿದೆ. ಹವಾನಿಯಂತ್ರಿತ ಆಸನಗಳು ಹೆಚ್ಚುವರಿ ಐಷಾರಾಮಿ ಸಲಕರಣೆಗಳ ಆಯ್ಕೆಯಾಗಿದೆ.
ಇದನ್ನೂ ಓದಿ- ವಿದ್ಯುತ್ ಇಲ್ಲದೆ ತಂಪಾದ ಗಾಳಿ ನೀಡುತ್ತೆ ಈ ಫ್ಯಾನ್, ಬೆಲೆಯೂ ಕಡಿಮೆ
ಕಾರ್ ವೆಂಟಿಲೇಟೆಡ್ ಸೀಟ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ಕಾರ್ ವೆಂಟಿಲೇಟೆಡ್ ಸೀಟ್‌ಗಳ ತತ್ವವು ತುಂಬಾ ಸರಳವಾಗಿದೆ. ಇವುಗಳನ್ನು ಪ್ಲಾಸ್ಟಿಕ್ ರಂಧ್ರಗಳಿಂದ ಸಜ್ಜುಗೊಳಿಸಿರಲಾಗಿರುತ್ತದೆ. ಎಲೆಕ್ಟ್ರಿಕ್ ಮೋಟಾರು ಪಂಪ್‌ನಿಂದ ಚಾಲಿತ ಅಂತರ್ನಿರ್ಮಿತ ಫ್ಯಾನ್‌ಗಳು ಬ್ಯಾಕ್‌ರೆಸ್ಟ್ ಮತ್ತು ಸೀಟಿನಲ್ಲಿರುವ ರಂಧ್ರಗಳ ಮೂಲಕ ನೇರವಾಗಿ ಗಾಳಿ ಪಸರಿಸುತ್ತದೆ. ಹೆಚ್ಚು ನಿರ್ದಿಷ್ಟವಾಗಿ ಆಸನದ ಕೆಳಗೆ, ತಾಪಮಾನವು ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಆದ್ದರಿಂದ, ಕಾರು ಹವಾನಿಯಂತ್ರಣ ವ್ಯವಸ್ಥೆಯನ್ನು ಹೊಂದಿಲ್ಲದಿದ್ದರೆ, ವೆಂಟಿಲೇಟೆಡ್ ಸೀಟ್‌ಗಳು ಗಾಳಿಯ ಚಲನೆಯನ್ನು ಮಾತ್ರ ಒದಗಿಸುತ್ತದೆ. ವೆಂಟಿಲೇಟೆಡ್ ಸೀಟ್‌ಗಳು ಉನ್ನತ-ಮಟ್ಟದ ಐಷಾರಾಮಿ ಮಾದರಿಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಆದಾಗ್ಯೂ, ನೀವು ನಿಮ್ಮ ಸಾಮಾನ್ಯ ಕಾರಿನಲ್ಲಿಯೂ ಸಹ ವೆಂಟಿಲೇಟೆಡ್ ಸೀಟ್‌ಗಳನ್ನು ಅಳವಡಿಸಬಹುದಾಗಿದೆ.
ಇದನ್ನೂ ಓದಿ- ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಇಂದೇ ಮನೆಗೆ ತನ್ನಿ ಎಲ್ಪಿಜಿ ಗ್ಯಾಸ್ ಡಿಟೆಕ್ಟರ್
ನೀವು ವೆಂಟಿಲೇಟೆಡ್ ಸೀಟ್‌ಗಳಿಲ್ಲದ ಕಾರನ್ನು ಹೊಂದಿದ್ದು, ಹೊಸದಾಗಿ ವೆಂಟಿಲೇಟೆಡ್ ಸೀಟ್‌ಗಳನ್ನು ಅಳವಡಿಸಲು ಬಯಸಿದರೆ ಆಫ್ಟರ್‌ಮಾರ್ಕೆಟ್‌ನಲ್ಲಿ ಕೇವಲ 2,700 ರೂ.ಗಳಲ್ಲಿ ನಿಮಗೆ ಇದು ಲಭ್ಯವಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.