ನವದೆಹಲಿ: Twitter Controversy Latest Update - ಕಾಂಗ್ರೆಸ್ ಮುಖಂಡ ಶಶಿ ತರೂರ್ (Shashi Tharoor) ನೇತೃತ್ವದ ಐಟಿ ವ್ಯವಹಾರಗಳ ಸಂಸದೀಯ ಸಮಿತಿ ಫೇಸ್‌ಬುಕ್ ಇಂಡಿಯಾ ಮತ್ತು ಗೂಗಲ್ ಇಂಡಿಯಾಗಳಿಗೆ ಬುಲಾವ್ ಕಳುಹಿಸಿದೆ. ಸಾಮಾಜಿಕ ಮಾಧ್ಯಮಗಳ ದುರುಪಯೋಗ ಮತ್ತು ನಾಗರಿಕರ  ಹಕ್ಕುಗಳನ್ನು ರಕ್ಷಿಸುವ ವಿಷಯದ ಕುರಿತು ಚರ್ಚಿಸಲು ಎರಡೂ ಕಂಪನಿಗಳನ್ನು ಕರೆಯಲಾಗಿದೆ. ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆಸಂಬಂಧಿಸಿದ  ಸಂಸದೀಯ ಸ್ಥಾಯಿ ಸಮಿತಿಯು ಈ ಎರಡು ದೈತ್ಯ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಮಿತಿಯ ಮುಂದೆ ಹಾಜರಾಗಲು ಸೂಚಿಸಿದೆ. ಈ ಚರ್ಚೆಯ ವೇಳೆ ಫೇಸ್‌ಬುಕ್ ಮತ್ತು ಗೂಗಲ್‌ನ (Google) ಅಭಿಪ್ರಾಯಗಳನ್ನು ಕೇಳಲಾಗುವುದು ಎನ್ನಲಾಗಿದೆ. ಈ ಸಭೆ ನಾಳೆ ಅಂದರೆ ಮಂಗಳವಾರ ಸಂಜೆ 4 ಗಂಟೆಗೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಸಾಮಾಜಿಕ ಮಾಧ್ಯಮ ವೇದಿಕೆಯ ದುರುಪಯೋಗ ಮತ್ತು ಟ್ವಿಟರ್‌ನೊಂದಿಗೆ ಸರ್ಕಾರದ ನಿರಂತರ ಹಗ್ಗಜಗ್ಗಾಟದ (Twitter Controversy) ಹಿನ್ನೆಲೆ ಈ ಸಭೆ ನಡೆಯುತ್ತಿದೆ. ಇದಕ್ಕೂ ಮುನ್ನ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಖಾತೆಯನ್ನು ಟ್ವಿಟರ್ ಒಂದು ಗಂಟೆ ನಿರ್ಬಂಧಿಸಿದ ನಂತರ, ಕಾಂಗ್ರೆಸ್ ನ ಹಿರಿಯ ಮುಖಂಡ ಶಶಿ ತರೂರ್ ಕೂಡ ಶುಕ್ರವಾರ ತಮ್ಮ ಖಾತೆ ಸ್ಥಗಿತಗೊಂಡ ಕುರಿತು ಶುಕ್ರವಾರ ಹೇಳಿದ್ದರು. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮೈಕ್ರೋಬ್ಲಾಗಿಂಗ್ ವೆಬ್ ಸೈಟ್ ಗೆ ಸಮೀತಿ ಈ ಕರಿತು ಸ್ಪಷ್ಟೀಕರಣ ಕೇಳಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ-WhatsApp Android ಬಳಕೆದಾರರಿಗಾಗಿ ಬಂದಿದೆ ಮತ್ತೆರಡು ವೈಶಿಷ್ಟ್ಯಗಳು


ಟ್ವೀಟ್ ಮಾಡಿದ್ದ ರವಿಶಂಕರ್ ಪ್ರಸಾದ್ (Twitter congroversy)
ರವಿಶಂಕರ್ ಪ್ರಸಾದ್ (Ravishankar Prasad)ಅವರು ತಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದ ಅವರು ಸ್ನೇಹಿತರೆ! ಇಂದು ಬಹಳ ವಿಶಿಷ್ಟವಾದದ್ದು ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್ (ಡಿಎಂಸಿಎ)ನ  ಉಲ್ಲಂಘನೆಯ ಆಧಾರದ ಮೇಲೆ ಟ್ವಿಟರ್ ನನ್ನ ಖಾತೆಗೆ ಸುಮಾರು ಒಂದು ಗಂಟೆ ಪ್ರವೇಶವನ್ನು ನಿರ್ಬಂಧಿಸಿತ್ತು ಮತ್ತು ನಂತರ ಸಂಸ್ಥೆ ನನಗೆ ಖಾತೆಯನ್ನು ಪುನಃ ಬಳಕೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದರು.


ಇದನ್ನೂ ಓದಿ-Poor Sleeping Habit Causes Risk Of Death - ನಿದ್ರಾಹೀನತೆಯಿಂದ ಸಾವು ಸಂಭವಿಸುತ್ತದೆಯೇ? ಅಧ್ಯಯನದಿಂದ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ


ಈ ವಿವಾದದ ಕುರಿತು ಚರ್ಚೆ ನಡೆಯಲಿದೆ
ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಟ್ವಿಟರ್ ಅಧಿಕಾರಿಗಳೊಂದಿಗೆ  ಮಾತುಕತೆ ನಡೆಸಿದ 10 ದಿನಗಳ ನಂತರ ಸಮಿತಿ ಇದೀಗ ಫೇಸ್‌ಬುಕ್ (Facebook) ಹಾಗೂ ಗೂಗಲ್‌ಗೆ ಸಮನ್ಸ್ ನೀಡಿದೆ. ಈ ಸಭೆಯಲ್ಲಿ, ಬಳಕೆದಾರರು ವೇದಿಕೆಯಲ್ಲಿ ಅಪ್‌ಲೋಡ್ ಮಾಡಿದ ವಿಷಯ ಮತ್ತು ಭಾರತದಲ್ಲಿ ಅನ್ವಯವಾಗುವ ಕಾನೂನುಗಳ ಅನುಷ್ಠಾನ ಕುರಿತು ಚರ್ಚಿಸಲಾಗುವುದು. ಈ ಹಿಂದೆ ಟ್ವಿಟ್ಟರ್ (Twitter) ತಂಡವು ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದು, ಅದು ತನ್ನ ನೀತಿಗಳನ್ನು ಮಾತ್ರ ಅನುಸರಿಸುತ್ತದೆ ಎಂದು ಹೇಳಿತ್ತು.


ಇದನ್ನೂ ಓದಿ-Microsoft Windows 11 launched: ಹೊಸ ವಿಂಡೋಸ್ ನಲ್ಲಿ ಏನುಂಟು ಏನಿಲ್ಲ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.