ಬೆಂಗಳೂರು : ವಿವಿಧ ಉದ್ದೇಶಗಳಿಗಾಗಿ ವಿವಿಧ ಇಲಾಖೆಗಳು, ಬ್ಯಾಂಕ್‌ಗಳು ಅಥವಾ ಕಂಪನಿಗಳೊಂದಿಗೆ ಆಧಾರ್ ಕಾರ್ಡ್ ಅನ್ನು ಶೇರ್ ಮಾಡಿಕೊಳ್ಳಬೇಕಾಗುತ್ತದೆ.  ಆದರೆ ಆಧಾರ್ ಶೇರ್ ಮಾಡುವುದು ಸುರಕ್ಷಿತವಲ್ಲ.  ಆಧಾರ್ ಶೇರ್ ಮಾಡುವುದು ಸುರಕ್ಷಿತವಲ್ಲ ಎಂದು ಯುಐಡಿಎಐ ಹೇಳುತ್ತದೆ. ಆಧಾರ್‌ನ ನಕಲು ಪ್ರತಿಗಳನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳದಂತೆ ಯುಐಡಿಎಐ ಎಚ್ಚರಿಕೆ ನೀಡಿದೆ. ಆಧಾರ್ ಶೇರ್ ಮಾಡಿದ ನಂತರ ಎದುರಾಗಬಹುದಾದ ಅಪಾಯದ ಬಗ್ಗೆಯೂ ಅದು ಉಲ್ಲೇಖಿಸಿದೆ. ಇದರ ಬದಲಿಗೆ Masked Aadhaar Card ಅನ್ನು ಬಳಸಲು UIDAI ಸೂಚಿಸಿದೆ.
 
UIDAI ನೀಡಿರುವ ಮಾರ್ಗಸೂಚಿಗಳು : 
ನಿಮ್ಮ ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಲು ಇಂಟರ್ನೆಟ್ ಕೆಫೆಗಳು/ಕಿಯೋಸ್ಕ್‌ಗಳಲ್ಲಿ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸಬಾರದು.  ಒಂದು ವೇಳೆ ಇಂಥ ಜಾಗಗಳಲ್ಲಿ ಆಧಾರ್  ಡೌನ್‌ಲೋಡ್  ಮಾಡಿದರೆ ತಕ್ಷಣ ಆ ಕಂಪ್ಯೂಟರ್‌ನಿಂದ ಇ-ಆಧಾರ್‌ನ ಎಲ್ಲಾ ಡೌನ್‌ಲೋಡ್ ಮಾಡಿದ ಪ್ರತಿಗಳನ್ನು ಶಾಶ್ವತವಾಗಿ ಅಳಿಸಿಬಿಡಬೇಕು. ಇನ್ನು ಹೋಟೆಲ್‌ಗಳು ಅಥವಾ ಸಿನಿಮಾ ಹಾಲ್‌ಗಳಂತಹ ಪರವಾನಗಿ ಪಡೆಯದ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್‌ಗಳ ಪ್ರತಿಗಳನ್ನು ಸಂಗ್ರಹಿಸಲು ಅನುಮತಿ ಇಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದು ಅಪರಾಧವಾಗುತ್ತದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Cheapest Recharge Plan: ಹುಡುಕಿದ್ರು ಸಿಗಲ್ಲ ಇಷ್ಟೊಂದು ಅಗ್ಗದ ರೀಚಾರ್ಜ್ ಯೋಜನೆ! ಕೇವಲ ರೂ. 141 ರಲ್ಲಿ 365 ದಿನಗಳ ವ್ಯಾಲಿಡಿಟಿ


ಮಾಸ್ಕ್ಡ್ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ?
UIDAI ವೆಬ್‌ಸೈಟ್‌ನಿಂದ ಮಾಸ್ಕ್ಡ್ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು ಎಂದು UIDAI ಹೇಳಿದೆ. ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಅದನ್ನು ಡೌನ್‌ಲೋಡ್ ಮಾಡಬಹುದು.


1. ಮೊದಲು UIDAI ನ ಅಧಿಕೃತ ವೆಬ್‌ಸೈಟ್ https://myaadhaar.uidai.gov.in/ ಗೆ ಹೋಗಿ.
2.ಇಲ್ಲಿ ನೀವು ಡೌನ್‌ಲೋಡ್ ಆಧಾರ್ ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇದರ ನಂತರ ನಿಮ್ಮ ಮುಂದೆ ಹೊಸ ವಿಂಡೋ ತೆರೆಯುತ್ತದೆ.
3.ಈಗ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. ನಂತರ ಕ್ಯಾಪ್ಚಾ ಭರ್ತಿ ಮಾಡಿ. Send OTP ಆಯ್ಕೆಯನ್ನು ಕ್ಲಿಕ್ ಮಾಡಬೇಕು.
4. ನಿಮಗೆ ಇಲ್ಲಿ   Do you want a masked Aadhaar? ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ, OTP ಅನ್ನು ನಮೂದಿಸಿ ಮತ್ತು ನಂತರ ವೆರಿಫೈ ಮತ್ತು ಡೌನ್‌ಲೋಡ್ ಕ್ಲಿಕ್ ಮಾಡಿ.
5.ಈಗ ನೀವು ಮಾಸ್ಕ್ಡ್ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
6.ಮಾಸ್ಕ್ ಮಾಡಿದ ಆಧಾರ್ ಕಾರ್ಡ್ ಮತ್ತು ಮೂಲ ಆಧಾರ್ ಕಾರ್ಡ್ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಮಾಸ್ಕ್ ಮಾಡಿದ ಆಧಾರ್ ಕಾರ್ಡ್‌ನಲ್ಲಿ, ನಿಮ್ಮ ಆಧಾರ್ ಸಂಖ್ಯೆಯ ಮೊದಲ 8 ಅಂಕೆಗಳನ್ನು ಮರೆಮಾಡಲಾಗಿರುತ್ತದೆ. ಇದರಲ್ಲಿ ಕೊನೆಯ 4 ಅಂಕೆಗಳನ್ನು ಮಾತ್ರ ತೋರಿಸಲಾಗುತ್ತದೆ. 


ಇದನ್ನೂ ಓದಿ : Knowledge News: ಡಿಟಿಎಚ್‌ ಆಂಟೆನಾಗಳ ಶೇಪ್‌ ಈ ರೀತಿ ಇರಲು ಕಾರಣ ಏನು ಗೊತ್ತಾ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.