ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕ ಸ್ನೇಹಿಯಾಗುತ್ತಿದೆ. ಪ್ರಯಾಣಿಕರಿಗೆ ಅನಾನುಕೂಲವಾಗದ ರೀತಿಯಲ್ಲಿ ರೈಲ್ವೆ ಇಲಾಖೆಗಳ ಚಿತ್ರಣ ಬದಲಾಯಿಸುತ್ತಿದೆ ಭಾರತೀಯ ಇಲಾಖೆ. ಕುಡಿಯುವ ನೀರು, ಆಹಾರ, ಟಿಕೆಟ್ ಬುಕ್ಕಿಂಗ್ ಹೀಗೆ ಪ್ರತಿಯೊಂದರಲ್ಲೂ ಪ್ರಯಾಣಿಕರ ಕ್ಷೇಮ, ಕುಶಲತೆ, ಅನುಕೂಲತೆಯನ್ನು ಬಯಸುತ್ತಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಯುಟಿಎಸ್​ (Unreserved Ticketing System ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ) ಆಪ್ ಬಿಡುಗಡೆಗೊಳಿಸಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಗಾಗಿ ಪರದಾಡಬೇಕಿಲ್ಲ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಮಂಗನಿಗೆ ಶರೇ ಕುಡಿಸಿದ್ರೆ ಏನಾಗಬಹುದು? ಎಣ್ಣೆ ಹೊಡಿದ ಕೋತಿ ಮಾಡಿದ ಕಿತಾಪತಿ ನೋಡಿ


ನೈಋತ್ಯ ರೈಲ್ವೆ ಇಲಾಖೆ ಸ್ಮಾರ್ಟ್ ಫೋನ್ ಬಳಕೆದಾರರರಿಗೆ ಈ ಸೇವೆ ಲಭ್ಯವಾಗುವಂತೆ ಮಾಡಿದೆ. ಈ ಮೂಲಕ ಪ್ರಯಾಣಿಕರು ಫ್ಲ್ಯಾಟ್ ಫಾರ್ಮ್ ಟಿಕೆಟ್ ಅನ್ನು ಸಹ ಫೋನಿನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಯುಟಿಎಸ್ ಟಿಕೆಟ್ ಗಳು 375 ಸ್ಥಳಗಳಲ್ಲಿ ಹರಡಿರುವ ರೈಲ್ವೇ ಕೌಂಟರ್‌ಗಳಲ್ಲಿ ಮತ್ತು ಸೆಂಟ್ರಲ್ ರೈಲ್ವೇಯ 5 ವಿಭಾಗಗಳಾದ ಮುಂಬೈ, ಪುಣೆ, ಶೋಲಾಪುರ, ಭೂಸಾವಲ್ ಮತ್ತು ನಾಗ್ಪುರದಲ್ಲಿ 862 ಟರ್ಮಿನಲ್‌ಗಳಲ್ಲಿ ಲಭ್ಯವಿದೆ. 


 



ಜೂ. ಎನ್‌ಟಿಆರ್ - ಕೇಂದ್ರ ಸಚಿವ ಅಮಿತ್ ಶಾ ಭೇಟಿ! ಈ ಮೀಟ್ & ಗ್ರೀಟ್ ಹಿಂದಿನ ಉದ್ದೇಶವೇನು?


ಯುಟಿಎಸ್ ಯಾವ ಸೇವೆಯನ್ನು ನೀಡುತ್ತದೆ?


ಸಬ್ ಅರ್ಬನ್ ಟಿಕೆಟ್ ಬುಕಿಂಗ್


ಸಬ್ ಅರ್ಬನ್  ಟಿಕೆಟ್ ರದ್ದತಿ


ಪ್ಲಾಟ್‌ಫಾರ್ಮ್ ಟಿಕೆಟ್ ಬುಕ್ಕಿಂಗ್


ಆರ್-ವ್ಯಾಲೆಟ್ ಬ್ಯಾಲೆನ್ಸ್ ಪರಿಶೀಲನೆ


ಬಳಕೆದಾರರ ಪ್ರೊಫೈಲ್ ನಿರ್ವಹಣೆ


ಬುಕಿಂಗ್ ಇತಿಹಾಸ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.