LPG Cylinder Discounts : ಗೃಹಬಳಕೆಯ ಅಡುಗೆ ಅನಿಲದ ಬೆಲೆ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನತೆಗೆ ಭರ್ಜರಿ ಗಿಫ್ಟ್ ನೀಡಿದೆ. ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿ ಕಡಿತ ಮಾಡಲಾಗಿದೆ. ಹೊಸ ಬೆಲೆಗಳು ಆಗಸ್ಟ್ 30 ರಿಂದಲೇ ಜಾರಿಗೆ ಬಂದಿವೆ. ಬೆಲೆ ಇಳಿಕೆಯ ನಂತರ ಎಲ್‌ಪಿಜಿ ಬೆಲೆ 803 ರೂ. ಆಗಿದೆ. ಸಿಲಿಂಡರ್ ಅನ್ನು ಇನ್ನೂ ಅಗ್ಗದ ಬೆಲೆಗೆ ಪಡೆಯಬೇಕಾದರೆ ಈ ಟ್ರಿಕ್ ಅನ್ನು ಬಳಸಬಹುದು.   ಈ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಸಿಲಿಂಡರ್ ನ ಪಡೆಯುವುದು ಸಾಧ್ಯವಾಗುತ್ತದೆ. Google Pay, Freecharge, Tata Neu ಮೂಲಕ ಸಿಲಿಂಡರ್ ಬುಕ್ ಮಾಡಿದರೆ 5 ಶೇಕಡಾ ಕ್ಯಾಶ್‌ಬ್ಯಾಕ್ ಪಡೆಯಬಹುದು. ಆದರೆ ಇದಕ್ಕಾಗಿ ನೀವು Axis ಬ್ಯಾಂಕ್ ACE ಕ್ರೆಡಿಟ್ ಕಾರ್ಡ್, Axis ಬ್ಯಾಂಕ್ ಫ್ರೀಚಾರ್ಜ್ ಕ್ರೆಡಿಟ್ ಕಾರ್ಡ್ ಅಥವಾ Tata Neu Infinity HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರಬೇಕು.


COMMERCIAL BREAK
SCROLL TO CONTINUE READING

ಆಕ್ಸಿಸ್ ಬ್ಯಾಂಕ್ ACE ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು : 
Axis ಬ್ಯಾಂಕ್ ACE ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು Google Pay ಅಪ್ಲಿಕೇಶನ್‌ನಲ್ಲಿ ಮೊಬೈಲ್ ರೀಚಾರ್ಜ್, DTH ರೀಚಾರ್ಜ್, ಬಿಲ್ ಪಾವತಿಗಳು (ಬ್ರಾಡ್‌ಬ್ಯಾಂಡ್, LPG, ವಿದ್ಯುತ್, ಗ್ಯಾಸ್ ಮತ್ತು ನೀರು) ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಲ್ಲದೆ, Swiggy, Zomato ಮತ್ತು Ola ಪೇಮೆಂಟ್ ಮೇಲೆ ಶೇಕಡಾ 4 ರಷ್ಟು ರಿಯಾಯಿತಿ ಸಿಗುತ್ತದೆ. ಕೆಲವು ವಿಭಾಗಗಳನ್ನು ಹೊರತುಪಡಿಸಿ ಅನಿಯಮಿತ 2% ಕ್ಯಾಶ್‌ಬ್ಯಾಕ್ ಅನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಪಡೆಯಬಹುದು.


ಇದನ್ನೂ ಓದಿ : ಇನ್ಮುಂದೆ ಟ್ವಿಟರ್‌ನಲ್ಲಿಯೂ ಆಡಿಯೋ & ವಿಡಿಯೋ ಕರೆ ಸೌಲಭ್ಯ: ಮಸ್ಕ್ ಘೋಷಣೆ


ಆಕ್ಸಿಸ್ ಬ್ಯಾಂಕ್ ಫ್ರೀಚಾರ್ಜ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು :
ಫ್ರೀಚಾರ್ಜ್ ಆ್ಯಪ್‌ನಲ್ಲಿ ಯಾವುದೇ ವರ್ಗದಲ್ಲಿ ಅಂದರೆ ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್, ಬಿಲ್  ಪೇಮೆಂಟ್ ಮಾಡಿದರೆ 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕಾರ್ಡ್‌ನೊಂದಿಗೆ Ola, Uber ಮತ್ತು Shuttle ನಂತಹ ಸೇವೆಗಳನ್ನು ಬಳಸಿಕೊಂಡರೆ, 2 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್  ಲಭಿಸುತ್ತದೆ. ಎಲ್ಲಾ ಇತರ ವಹಿವಾಟುಗಳ ಮೇಲೆ 1% ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯಬಹುದು.


Tata Neu Infinity HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು : 
Tata Neu ಅಪ್ಲಿಕೇಶನ್‌ನಿಂದ ಈ ಕ್ರೆಡಿಟ್ ಕಾರ್ಡ್ ಬಳಸಿ NON EMI spendನಲ್ಲಿ 10% ವರೆಗೆ  NeuCoins ಗಳಿಸಬಹುದು. Tata Neu ಅಪ್ಲಿಕೇಶನ್‌ನಲ್ಲಿ 1 NeuCoin ಬೆಲೆ 1 ರೂಪಾಯಿ .  Tata Neu ಅಪ್ಲಿಕೇಶನ್ ಮೂಲಕ ಈ ಕ್ರೆಡಿಟ್ ಕಾರ್ಡ್ ಬಳಸಿ ಬಿಲ್ ಪಾವತಿ ಮತ್ತು ರೀಚಾರ್ಜ್‌ಗಳಲ್ಲಿ 5% NewCoins ಗಳಿಸಬಹುದು. ಈ ಕಾರ್ಡ್ ಅನ್ನು ಬಳಸಿಕೊಂಡು, ನಾನ್ ಟಾಟಾ ಬ್ರ್ಯಾಂಡ್‌ಗಳ ಮೇಲೆ ಅಥವಾ ಯಾವುದೇ ಮರ್ಚೆಂಟ್ EMI  ಮೇಲೆ  1.5% NewCoins ಅನ್ನು ಪಡೆಯಬಹುದು. ಈ ಕಾರ್ಡ್ ಬಳಸಿ UPI ಪಾವತಿಯನ್ನು ಮಾಡಿದರೂ 1.5%NeuCoin ಪಡೆಯಬಹುದು. 


ಇದನ್ನೂ ಓದಿ : ಮಾರಕ ರೋಬೋಟ್ಗಳ ಸೈನ್ಯ ಸಿದ್ಧಪಡಿಸಲಿದೆ ಅಮೆರಿಕಾ! ಕ್ಷಣಾರ್ದಲ್ಲಿ ಶತ್ರುಗಳ ಹುಟ್ಟಡಗಿಸುತ್ತವೆಯಂತೆ ಈ ಐರನ್ ಮ್ಯಾನ್ಗಳು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.