Vi ಅಗ್ಗದ ರಿಚಾರ್ಜ್ಗೆ ಅಂಬಾನಿ ಶಾಕ್! 175 ರೂ.ಗೆ ಸಿಗುತ್ತೆ ಭರ್ಜರಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್ ಉಚಿತ
Vi Recharge Plan: ಬಿಎಸ್‌ಎನ್‌ಎಲ್ ಬಳಿಕ ಇದೀಗ ವೋಡಾಫೋನ್ ಐಡಿಯಾ ಕಂಪನಿ ರಿಲಯನ್ಸ್ ಜಿಯೋಗೆ ಶಾಕ್ ನೀಡಿದ್ದು, ಅಗ್ಗದ ರೀಚಾರ್ಜ್ ಯೋಜನೆಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದೆ.
Vi Cheapest Recharge Plan: ಭಾರತೀಯ ಟೆಲಿಕಾಂ ಜಗತ್ತಿನಲ್ಲಿ ಬಿಎಸ್‌ಎನ್‌ಎಲ್ 4ಜಿ ಆರಂಭದ ಬಳಿಕ ಹೆಚ್ಚಿನ ಗ್ರಾಹಕರು ಬಿಎಸ್‌ಎನ್‌ಎಲ್ ನತ್ತ ಮುಖ ಮಾಡುತ್ತಿದ್ದಾರೆ. ಗ್ರಾಹಕರು ಪೋರ್ಟ್ ಆಗುವುದನ್ನು ತಪ್ಪಿಸಲು ರಿಲಯನ್ಸ್ ಜಿಯೋ ಈಗಾಗಲೇ ಕೆಲವು ಕೈಗೆಟುಕುವ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಮಧ್ಯೆ, ಅಂಬಾನಿಗೆ ಶಾಕ್ ನೀಡಿರುವ ವೋಡಾಫೋನ್ ಐಡಿಯಾ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯಲ್ಲಿ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ.
ವೋಡಾಫೋನ್ ಐಡಿಯಾದ ಅಗ್ಗದ ರಿಚಾರ್ಜ್ ಯೋಜನೆ:
ವೋಡಾಫೋನ್ ಐಡಿಯಾ ಬಿಡುಗಡೆ ಮಾಡಿರುವ ಈ ರಿಚಾರ್ಜ್ ಯೋಜನೆಯ ಬೆಲೆ ಕೇವಲ 175 ರೂಪಾಯಿ. ಆದರೆ, ಈ ಯೋಜನೆಯಲ್ಲಿ ಗ್ರ್ಹಾಕರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಇಷ್ಟು ಪ್ರಯೋಜನಗಳನ್ನು ನೀಡುತ್ತಿಲ್ಲ. ಇದರಲ್ಲಿರುವ ಪ್ರಯೋಜನಗಳೆಂದರೆ...
ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಈ 3 ಬದಲಾವಣೆ ಕಂಡ್ರೆ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಅಂತಾನೆ ಅರ್ಥ..!
ವೋಡಾಫೋನ್ ಐಡಿಯಾ 175 ರೂಪಾಯಿ ರೀಚಾರ್ಜ್ ಪ್ಲಾನ್ ಪ್ರಯೋಜನಗಳು:
ವೋಡಾಫೋನ್ ಐಡಿಯಾ ಈ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 10 ಜಿಬಿ ಉಚಿತ ಡೇಟಾ ಜೊತೆಗೆ 15 ಓಟಿಟಿ ಪ್ಲಾಟ್‌ಫಾರ್ಮ್ ಗಳಿಗೂ ಉಚಿತ ಪ್ರವೇಶವನ್ನು ನೀಡುತ್ತಿದೆ.
ಇದನ್ನೂ ಓದಿ- ಇವೇ ನೋಡಿ ಭಾರತದಲ್ಲಿ ಅತ್ಯಂತ ಜನಪ್ರಿಯ ಮೊಬೈಲ್ ಗೇಮ್‌ಗಳು.. ಎಂದಾದರೂ ಆಡಿದ್ದೀರಾ?
ವಿಐ ಪರಿಚಯಿಸಿರುವ ಈ ರಿಚಾರ್ಜ್ ಪ್ಲಾನ್ ಒಟಿಟಿ ಮೂಲಕ ವೆಬ್ ಸೀರೀಸ್, ಮೂವಿ ವೀಕ್ಷಿಸುವ ಗ್ರಾಹಕರಿಗೆ ಹೆಚ್ಚು ಲಾಭದಾಯಕ ಎಂದು ಸಾಬೀತುಪಡಿಸಲಿದೆ. ಕಳೆದ ವರ್ಷ ವೋಡಾಫೋನ್-ಐಡಿಯಾ ಮೂವೀಸ್ ಹಾಗೂ ಟಿವಿ ಆ್ಯಪ್ ಲಾಂಚ್ ಮಾಡಿದ್ದು, ಇದರಲ್ಲಿ ಒಟ್ಟು 17 ಒಟಿಟಿ ಆ್ಯಪ್, 350 ಲೈವ್ ಟಿವಿ ಚಾನೆಲ್ ಒಳಗೊಂಡಂತೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಗ್ರಾಹಕರ ಪ್ರಕಾರ, ಜಿಯೋ ಪ್ಲಾನ್‌ಗೆ ಹೊಲಿಸಿದರೆ ವಿಐ ನ ಈ ಪ್ಲಾನ್ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ರಿಚಾರ್ಜ್ ಯೋಜನೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.