Portable Internet Router: ಒಂದು ವೇಳೆ ನೀವೂ ಕೂಡ ನಿಮ್ಮ ಕಚೇರಿ ಕೆಲಸವನ್ನು ಮನೆಯಲ್ಲಿದ್ದುಕೊಂಡು ಅಥವಾ ಪ್ರಯಾಣದ ವೇಳೆ ನಿಮ್ಮ ಲ್ಯಾಪ್ಟಾಪ್ ಬಳಸಿ ಮಾಡುತ್ತಿದ್ದರೆ, ಖಂಡಿತವಾಗಿ ನಿಮಗೆ ಇಂಟರ್ನೆಟ್ ಸಂಪರ್ಕದ ಅಗತ್ಯ ಬೀಳುತ್ತದೆ. ಏಕೆಂದರೆ ಇಂಟರ್ನೆಟ್ ಇಲ್ಲದೆ ನೀವು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೊಬೈಲ್ ಗೆ ಕನೆಕ್ಟ್ ಮಾಡಿಕೊಂಡು ಇಂಟರ್ ನೆಟ್ ಬಳಸುವುದು ಸ್ವಲ್ಪ ಕಷ್ಟದ ಕೆಲಸವೇ ಹೌದು. ಅದರಲ್ಲಿಯೂ ಸಿಗ್ನಲ್ ಸರಿಯಾಗಿಲ್ಲ ಎಂದರೆ ವೇಗದ ಸಮಸ್ಯೆಯೂ ಎದುರಾಗುತ್ತದೆ. ಹೀಗಾಗಿ ಪ್ರಯಾಣದ ವೇಳೆಯೂ ಕೂಡ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಬೇಕಾದರೆ, ಇಂದು ನಾವು ನಿಮಗಾಗಿ ಪೋರ್ಟಬಲ್ ವೈಫೈವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದು ಏಕಕಾಲದಲ್ಲಿ 10 ಸಾಧನಗಳನ್ನು ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದರ ವೇಗವು ತುಂಬಾ ಅದ್ಭುತವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Google Search: ಗೂಗಲ್‌ನಲ್ಲಿ ಈ 5 ವಿಷಯಗಳ ಹುಡುಕಾಟ ಶಿಕ್ಷಾರ್ಹ ಅಪರಾಧ


ಆ ವೈಫೈ ಸಾಧನ ಯಾವುದು?
ನಾವು ಹೇಳಲು ಹೊರಟಿರುವ WiFi ಸಾಧನವನ್ನು Vi ಬಿಡುಗಡೆ ಮಾಡಿದೆ. ಈ ಸಾಧನದ ಗಾತ್ರ ತುಂಬಾ ಚಿಕ್ಕದಾಗಿದ್ದು, ನೀವು ಎಲ್ಲಿಗೆ ಹೋದರೂ ಅದನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ಈ ಕಾರಣದಿಂದಾಗಿ, ನೀವು ದಾರಿಯಲ್ಲಿ, ಮನೆಯಲ್ಲಿ ಅಥವಾ ರೆಸ್ಟೋರೆಂಟ್‌ನಲ್ಲಿಯೂ ಸಹ ಹೆಚ್ಚಿನ ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು.


ಇದನ್ನೂ ಓದಿ-ಸೂರ್ಯನ ಶಾಖಕ್ಕೆ ಚಾರ್ಜ್ ಆಗುತ್ತದೆ ಈ ಸ್ಪೀಕರ್ .! ಬೆಲೆ ಕೂಡಾ ಭಾರೀ ಕಡಿಮೆ


ವಿಶೇಷತೆ ಏನು ಮತ್ತು ಅದರ ಬೆಲೆ ಎಷ್ಟು?
ಈ ಸಾಧನದ ವಿಶೇಷತೆಯ ಕುರಿತು ಹೇಳುವುದಾದರೆ, ಕಂಪನಿಯು ಈ ಸಾಧನವನ್ನು Vi MiFi ಎಂದು ಹೆಸರಿಸಿದೆ. ಅಂದರೆ, ಇದೊಂದು ಪೋರ್ಟೆಬಲ್ ವೈಫೈ ರೌಟರ್ ಆಗಿದೆ. ಇದು ಚಿಕ್ಕ ಗಾತ್ರದ ಸಾಧನವಾಗಿದ್ದು, ಇದನ್ನು ನೀವು ನಿಮ್ಮ ಜೇಬಿನಲ್ಲಿ ಸುಲಭವಾಗಿ ಇರಿಸಿಕೊಳ್ಳಬಹುದು. ಇದನ್ನು ಬಳಸಲು ವಿದ್ಯುತ್ ಸಂಪರ್ಕದ ಅಗತ್ಯವಿಲ್ಲ. ಏಕೆಂದರೆ ಇದು ಇಂಟರ್ನಲ್ ಬ್ಯಾಟರಿಯನ್ನು ಹೊಂದಿದೆ, ತನ್ಮೂಲಕ ಇದು 10 ಸಾಧನಗಳನ್ನು ಏಕಕಾಲದಲ್ಲಿ ಸಂಪರ್ಕಿಸುವ ಮೂಲಕ 6 ಗಂಟೆಗಳ ಕಾಲ ಇಂಟರ್ನೆಟ್ ಅನ್ನು ಒದಗಿಸುತ್ತದೆ. ಈ ಸಾಧನದೊಂದಿಗೆ ಕಂಪನಿ ಗ್ರಾಹಕರಿಗೆ 1 ವರ್ಷದ ವಾರಂಟಿಯನ್ನು ಸಹ ನೀಡುತ್ತಿದೆ. ನೀವು ಕೂಡ ಇದನ್ನೂ ಖರೀದಿಸಲು ಬಯಸಿದರೆ, ಅದರ ಬೆಲೆ 2000 ರೂಪಾಯಿಗಲಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ. ಇದು ಒನ್ ಟೈಮ್ ಸಾಧನದ ವೆಚ್ಚವಾಗಿದ್ದು, ನಂತರ ನೀವು ಇಂಟರ್ನೆಟ್ ಯೋಜನೆಗೆ ಮಾತ್ರ ಹಣವನ್ನು ಖರ್ಚು ಮಾಡಬೇಕಾಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.