Vivo V30 will be launched on March 7 :  ಪ್ರತಿ ದಿನ ಮಾರುಕಟ್ಟೆಗೆ ಹೊಸ ಹೊಸ ವಿನ್ಯಾಸದ ಫೋನ್‌ಗಳು ಲಗ್ಗೆ ಇಡುತ್ತಿವೆ.ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ವಿವೋ ಕಂಪನಿಯು ತನ್ನ ಹೊಸ ಮೊಬೈಲ್‌ ಒಂದನ್ನು ಕಡಿಮೆ ಮತ್ತು ಆಕರ್ಷಕ ದರದಲ್ಲಿ ಬಿಡುಗಡೆ ಮಾಡುತ್ತಿದೆ. 


COMMERCIAL BREAK
SCROLL TO CONTINUE READING

ವಿವೋ ಕಂಪನಿಯು ಮಾರ್ಚ್ 7 ರಂದು ಮತ್ತೊಂದು ಮೊಬೈಲ್‌ ಭಾರತದ ಮಾರುಕಟ್ಟೆಗೆ ಬಿಡಲಿದೆ. ಚೀನಾದ ಟೆಕ್ ಕಂಪನಿ Vivo ಮಾರ್ಚ್ 7 ರಂದು ಭಾರತದಲ್ಲಿ Vivo V30 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ


ಇದನ್ನು ಓದಿ : ಬ್ರಿಟನ್‌ ರಾಣಿಯ ರೇಂಜ್ ರೋವರ್ ಎಸ್‌ಯುವಿ ಕಾರು ಖರೀದಿಸಿದ ಯೋಹಾನ್ ಪುನಾವಾಲ್ಲಾ 


ಈ ಸರಣಿಯಲ್ಲಿ Vivo V30 ಮತ್ತು Vivo V30 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ವಿವೋ ತನ್ನ ವೆಬ್‌ಸೈಟ್ ಮತ್ತು ಸಾಮಾಜಿಕತಾಣಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ.


ವಿವೋ ವಿ30 ಸ್ಮಾರ್ಟ್‌ ಫೋನ್ ವಿಶೇಷತೆ - 
ವಿವೋ ವಿ30 ಸ್ಮಾರ್ಟ್‌ ಫೋನ್ 120Hz ರಿಫ್ರೆಶ್ ದೊಂದಿಗೆ 3D ಕರ್ವಡ್ AMOLED ಡಿಸ್ಪ್ಲೇಯನ್ನು ಹೊಂದಿದೆ.
 ಡಿಸ್ಪ್ಲೇ ಗಾತ್ರವು 6.78 ಇಂಚುಗಳಷ್ಟು ಇರಬಹುದು
ಸ್ಮಾರ್ಟ್‌ಫೋನ್‌ಗಳ ಹಿಂದೆ 50MP+50MP+2MPಯ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒದಗಿಸಲಾಗಿದೆ. 
ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್ 50MP ಹೊಂದಿರುತ್ತದೆ.


ಇದನ್ನು ಓದಿ : Indian Railways :ರೈಲ್ವೆ ಇಲಾಖೆಯ 4660 ಹುದ್ದೆಗಳಿಗೆ ಅರ್ಜಿ ಆಹ್ವಾನ : ಮಾಹಿತಿ ಇಲ್ಲಿದೆ 


ವಿವೋ ವಿ30 ಸರಣಿಯ ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಹೊಂದಿದ್ದು, 5000mAh ಬ್ಯಾಟರಿಯನ್ನು ಹೊಂದಿರುತ್ತದೆ. 
ಈ ಸ್ಮಾರ್ಟ್‌ಫೋನ್‌ನ ಪ್ರೊಸೆಸರ್ ಬಗ್ಗೆ ಕಂಪನಿಯು ಇನ್ನೂ ಮಾಹಿತಿಯನ್ನು ನೀಡಿಲ್ಲ.
 ಮಾಧ್ಯಮ ವರದಿಗಳ ಪ್ರಕಾರ, Qualcomm Snapdragon 7 Gen3 ಪ್ರೊಸೆಸರ್ ಅನ್ನು ಇದರಲ್ಲಿ ಕಾಣಬಹುದು. 
ಸ್ಮಾರ್ಟ್‌ ಫೋನ್ 8GB ರ್ಯಾಮ್ ಜೊತೆಗೆ 128 ಜಿಬಿ ಇನ್‌ಬಿಲ್ಟಿ ಹೊಂದಿದೆ. 
ವಿವೋ ವಿ30 ಮತ್ತು ವಿವೋ ವಿ30 Proನ ರ್ಯಾಮ್ ಮತ್ತು ಸಂಗ್ರಹಣೆಯಲ್ಲಿ ವ್ಯತ್ಯಾಸವಿರಬಹುದು.


ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 80W ವೇಗದ ಚಾರ್ಜಿಂಗ್ ಹೊಂದಿರಲಿದೆ. 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. Vivo V30 ಮತ್ತು Vivo V30 Pro ಮೂರು ಬಣ್ಣಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅಂಡಮಾನ್ ಬ್ಲೂ, ಕ್ಲಾಸಿಕ್ ಬ್ಲಾಕ್ ಮತ್ತು ಪೀಕಾಕ್ ಗ್ರೀನ್. ಇಲ್ಲಿ ಭಾರತದಲ್ಲಿ ಇದರ ಆರಂಭಿಕ ಬೆಲೆ ರೂ 33,990 ಆಗಿರಬಹುದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.