ನವದೆಹಲಿ: ವಿವೋ ವೈ 53 ಎಸ್ 5 ಜಿ  (Vivo Y53s 5G) ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಫೋನ್ ಮಾರಾಟ ಜೂನ್ 11 ರಿಂದ ಪ್ರಾರಂಭವಾಗಲಿದೆ. ಆದಾಗ್ಯೂ, ಪೂರ್ವ-ಮಾರಾಟಕ್ಕಾಗಿ ಫೋನ್‌ನ ವೆಬ್‌ಸೈಟ್‌ನಿಂದ ಬುಕಿಂಗ್ ಅನ್ನು ಮಾಡಬಹುದು. ಈ ಫೋನ್ ದೊಡ್ಡ ಡಿಸ್ಪ್ಲೇ, ಸ್ಟ್ರಾಂಗ್ ಬ್ಯಾಟರಿ, 5 ಜಿ ಬೆಂಬಲ, 64 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 90Hz ರಿಫ್ರೆಶ್ ದರ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


COMMERCIAL BREAK
SCROLL TO CONTINUE READING

ಕನೆಕ್ಟಿವಿಟಿ:
ಸಂಪರ್ಕಕ್ಕಾಗಿ ಅಂದರೆ ಕನೆಕ್ಟಿವಿಟಿಗಾಗಿ ವಿವೋ ವೈ 53 ಎಸ್ 5 ಜಿ (Vivo Y53s 5G) ಫೋನ್ 5 ಜಿ, ವೈ-ಫೈ, ಬ್ಲೂಟೂತ್,  GPS, USB ಟೈಪ್-ಸಿ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಅದೇ ಸಮಯದಲ್ಲಿ, ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಇದಲ್ಲದೆ, ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿದೆ.


ಅದ್ಭುತ ಕ್ಯಾಮೆರಾ:
ಪ್ರಾಥಮಿಕ ಲೆನ್ಸ್ 64 ಮೆಗಾಪಿಕ್ಸೆಲ್‌ಗಳಿರುವ ಫೋನ್‌ನಲ್ಲಿ (Smartphone) ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ ಒಂದೇ ಕ್ಯಾಮೆರಾ ಇದೆ. ಸೆಲ್ಫಿ ಲೆನ್ಸ್ 8 ಮೆಗಾಪಿಕ್ಸೆಲ್‌ಗಳದ್ದಾಗಿದೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ, ವಿವೋ ಫೋನ್‌ನ (Vivo Phone) ಅಂತರರಾಷ್ಟ್ರೀಯ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.


ಇದನ್ನೂ ಓದಿ - Smartphone ಬಳಕೆದಾರರೇ ಮರೆತೂ ಕೂಡ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ


ಸಂಗ್ರಹಣೆ:
ಫೋನ್ 8 ಜಿಬಿ RAM ಮತ್ತು 256 ಜಿಬಿ ವರೆಗೆ ಸಂಗ್ರಹವನ್ನು ಹೊಂದಿದೆ. ವಿವೋ ವೈ 53 ಎಸ್ 5 ಜಿ ಫೋನ್ ಆಂಡ್ರಾಯ್ಡ್ 11 ಆಧಾರಿತ ಒರಿಜಿನ್ ಓಎಸ್ 1.0 (Origin OS 1.0) ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6.58 ಇಂಚಿನ ಡಿಸ್ಪ್ಲೇ ಹೊಂದಿದೆ.


ಸ್ಟ್ರಾಂಗ್ ಬ್ಯಾಟರಿ:
5000 mAh ಬ್ಯಾಟರಿಯನ್ನು ಒದಗಿಸಲಾಗಿದ್ದು ಅದು 18 W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್‌ನ ತೂಕ 189 ಗ್ರಾಂ.


ಇದನ್ನೂ ಓದಿ - ಫೋನ್‌ನ Password/Pattern ಅನ್ನು ಮರೆತಿದ್ದೀರ, ಈ ಟಿಪ್ಸ್ ಅನುಸರಿಸಿ ಸುಲಭವಾಗಿ ಅನ್ಲಾಕ್ ಮಾಡಿ


ಫೋನ್‌ನ ಬೆಲೆ:
ಫೋನ್‌ನ 8 ಜಿಬಿ ರ್ಯಾಮ್ + 256 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ಸುಮಾರು 22,800 ರೂ. ಆಗಿದ್ದು ಇದು ಸೀ ಸಾಲ್ಟ್, ಇರಿಡೆಸೆಂಟ್ ಮತ್ತು ಸ್ಟಾರಿ ನೈಟ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.