ನವದೆಹಲಿ: Vivo ತನ್ನ ಮಧ್ಯ ಶ್ರೇಣಿಯ Vivo T2 ಸರಣಿಯನ್ನು ಇಂದು (ಏ.11) ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀವು ಈ ಸ್ಮಾರ್ಟ್‍ಫೋನ್ ಖರೀದಿಸಬಹುದು. ಭಾರತೀಯ ಮಾರುಕಟ್ಟೆಗೆ ಕಂಪನಿಯು T2 5G ಮತ್ತು T2X 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಸ್ಮಾರ್ಟ್‌ಫೋನ್‌ನಲ್ಲಿ ಹೊಳೆಯುವ ಹಿಂಭಾಗದ ಫಲಕದೊಂದಿಗೆ ಲಭ್ಯವಿದೆ. ಹೆಚ್ಚುವರಿಯಾಗಿ T2x ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಚೀನಾದಲ್ಲಿ ಪಾದಾರ್ಪಣೆ ಮಾಡಿದೆ.


COMMERCIAL BREAK
SCROLL TO CONTINUE READING

Vivo T2 5G, Vivo T2x 5G ವಿಶೇಷಣಗಳು


Vivo T2 5G 6.38-ಇಂಚಿನ AMOLED FHD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಪ್ಯಾನೆಲ್, 1300nits ಪೀಕ್ ಬ್ರೈಟ್‌ನೆಸ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್‍ ಹೊಂದಿದೆ. ಸ್ಮಾರ್ಟ್‌ಫೋನ್ 6nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್ ಹೊಂದಿದೆ. ಇದು 8GB RAM ಮತ್ತು 128GB ಸ್ಟೋರೇಜ್‍ನೊಂದಿಗೆ ಬರಲಿದೆ. ಸ್ಮಾರ್ಟ್ಫೋನ್ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಹೊಂದಿದೆ. ಆಂಡ್ರಾಯ್ಡ್ 13 ಆಧಾರಿತ Funtouch ಆಪರೇಟಿಂಗ್ ಸಿಸ್ಟಂನಲ್ಲಿ ಈ ಸ್ಮಾರ್ಟ್‍ಫೋನ್‍ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ: ನಿಮ್ಮ ಫೋನಿಗೂ ಈ ಮೆಸೇಜ್ ಬಂದಿದ್ದರೆ ತಕ್ಷಣ ಡಿಲೀಟ್ ಮಾಡಿ! ಇಲ್ಲವಾದರೆ ಖಾತೆ ಆಗುವುದು ಖಾಲಿ


ಆದರೆ Vivo T2x 5G 6.58-ಇಂಚಿನ FHD+ IPS LCD ಡಿಸ್ಪ್ಲೇ ಜೊತೆಗೆ 2408×1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಚಿಪ್‌ಸೆಟ್ ಹೊಂದಿದೆ. ಇದು 8GBಯ RAM ಮತ್ತು 256GBವರೆಗೆ ಸ್ಟೋರೇಜ್‍ನೊಂದಿಗೆ ಬರುತ್ತದೆ. ಇದು ಇತ್ತೀಚಿನ Android 13ನ್ನು ಆಧರಿಸಿ Funtouch OSನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿದೆ.


Vivo T2 5G, Vivo T2x 5G ಕ್ಯಾಮೆರಾ


Vivo T2 2MP ಬೊಕೆ ಕ್ಯಾಮೆರಾ ಜೊತೆಗೆ OIS ಬೆಂಬಲದೊಂದಿಗೆ 64MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. Vivo T2x 5G 2 MP ಸೆಕೆಂಡರಿ ಕ್ಯಾಮೆರಾದೊಂದಿಗೆ 50 MP ಪ್ರಾಥಮಿಕ ಶೂಟರ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಸ್ಮಾರ್ಟ್ಫೋನ್ 8MP ಮುಂಭಾಗದ ಕ್ಯಾಮೆರಾ ಹೊಂದಿದೆ.


ಇದನ್ನೂ ಓದಿ: ಈ ಆರು ಕಾರುಗಳ ದರ ಏರಿಸಿದ ಮಾರುತಿ! ಇಲ್ಲಿದೆ ಹೊಸ ರೇಟ್ ಲಿಸ್ಟ್


ಭಾರತದಲ್ಲಿ Vivo T2 5G, Vivo T2x 5G ಬೆಲೆ


Vivo T2 5Gಯ ​​6 GB RAM/128 GB ಸ್ಟೋರೇಜ್ ರೂಪಾಂತರವು ಈಗ ಭಾರತದಲ್ಲಿ 18,999 ರೂ.ಗೆ ಲಭ್ಯವಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವು ಭಾರತದಲ್ಲಿ 20,999 ರೂ. ಇದೆ. ಏಪ್ರಿಲ್ 18ರಂದು ಸ್ಮಾರ್ಟ್ಫೋನ್ ಖರೀದಿಗೆ ಲಭ್ಯವಿರುತ್ತದೆ. Vivo T2x 4GB + 128GB ರೂಪಾಂತರಕ್ಕೆ 12,999 ರೂ. 6GB + 128GB ಮಾದರಿಗೆ 13,999 ರೂ. ಮತ್ತು 8GB + 128GB ಮಾದರಿಗೆ 15,999 ರೂ. ನಿಗದಿಪಡಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.