Vodafone Idea ಗ್ರಾಹಕರಿಗೆ ಆಘಾತ, ಈಗ ಈ ಪ್ಲಾನ್ ಗಳಲ್ಲಿ ಸಿಗುತ್ತಿಲ್ಲ ಅಧಿಕ ಇಂಟರ್ ನೆಟ್
ವೊಡಾಫೋನ್ ಐಡಿಯಾ 299 ರೂ., 449 ರೂ. ಮತ್ತು ರೂ .699 ರ ಪ್ಲಾನ್ ನಲ್ಲಿ ದಿನಕ್ಕೆ 4 ಜಿಬಿ ಡೇಟಾವನ್ನು ನೀಡುತ್ತಿತ್ತು. ಆದರೆ ಈಗ ಅದನ್ನು ಅರ್ಧಕ್ಕೆ ಇಳಿಸಲಾಗಿದೆ.
ನವದೆಹಲಿ : ವೊಡಾಫೋನ್ ಐಡಿಯಾ (Vodafone Idea) ಸ್ವಲ್ಪ ಸಮಯದ ಹಿಂದೆ ಸಣ್ಣ ರಿಚಾರ್ಜ್ ಪ್ಲಾನ್ ನಿಲ್ಲಿಸಿತ್ತು. ಇದೀಗ Vi ಎರಡು ವಲಯಗಳ ಬಳಕೆದಾರರಿಗೆ ದೊಡ್ಡ ಆಘಾತ ನೀಡಿದೆ. ಈ ವಲಯಗಳ ಬಳಕೆದಾರರಿಗೆ ಕಂಪನಿಯು ಇನ್ನು ಮುಂದೆ ಡಬಲ್ ಡೇಟಾ ಪ್ಯಾಕ್‌ಗಳನ್ನು (Double data pack) ನೀಡುವುದಿಲ್ಲ. ಟೆಲಿಕಾಂ ಟಾಕ್ ವರದಿಯ ಪ್ರಕಾರ, ಕಂಪನಿಯು ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ವೆಬ್‌ಸೈಟ್‌ನಲ್ಲಿ ಈ ಬದಲಾವಣೆ ಕಾಣಿಸುತ್ತಿದೆ. ಕಂಪನಿಯು ಎರಡು ಪ್ಲಾನ್ ಗಳೊಂದಿಗೆ ಡಬಲ್ ಡೇಟಾವನ್ನು ನೀಡುತ್ತಿತ್ತು. ಆದರೆ ಈಗ ಅದನ್ನು ಮುಚ್ಚಲಾಗಿದೆ.
ಈ ಆಫರ್ ನಿಲ್ಲಿಸಿದ ವೊಡಾಫೋನ್ ಐಡಿಯಾ :
ವೊಡಾಫೋನ್ ಐಡಿಯಾ (Vodafone Idea) 299 ರೂ., 449 ರೂ. ಮತ್ತು ರೂ .699 ರ ಪ್ಲಾನ್ ನಲ್ಲಿ ದಿನಕ್ಕೆ 4 ಜಿಬಿ ಡೇಟಾವನ್ನು ನೀಡುತ್ತಿತ್ತು. ಆದರೆ ಈಗ ಅದನ್ನು ಅರ್ಧಕ್ಕೆ ಇಳಿಸಲಾಗಿದೆ. ಡಬಲ್ ಡೇಟಾವನ್ನು ನಿಲ್ಲಿಸುವ ಮೂಲಕ, ಕಂಪನಿಯು ಈಗ ಈ ಪ್ಲಾನ್‌ನೊಂದಿಗೆ ದಿನಕ್ಕೆ ಕೇವಲ 2 GB ಡೇಟಾವನ್ನು ನೀಡುತ್ತಿದೆ.
ಇದನ್ನೂ ಓದಿ : Infinix: ಅಗ್ಗದ ದರದಲ್ಲಿ 6000mAH ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್, ಫುಲ್ ಚಾರ್ಜ್ ಆದ ಬಳಿಕ ಸ್ವಯಂಚಾಲಿತವಾಗಿ ಆಫ್ ಆಗುತ್ತೆ
ಮೂರು ಪ್ಲಾನ್ ಗಳೊಂದಿಗೆ ಸಿಗುತ್ತಿತ್ತು ಈ ಲಾಭ :
ಇದನ್ನು ಹೊರತುಪಡಿಸಿ, Vi ಯಾವುದೇ ಇತರ ಬದಲಾವಣೆಗಳನ್ನು ಮಾಡಿಲ್ಲ. ಈ ಪ್ಲಾನ್ ನಲ್ಲಿ ಸಿಗುತ್ತಿದ್ದ ಎಲ್ಲ ಪ್ರಯೋಜನಗಳು ಹಾಗೆ ಮುಂದುವರೆಯಲಿವೆ. ದಿನಕ್ಕೆ 100 SMS, ಅನಿಯಮಿತ ಕರೆ ಸೌಲಭ್ಯದಲಿ ಯಾವುದೇ ಬದಲಾವಣೆ ಇಲ್ಲ. ಈ ಪ್ಲಾನ್ ನೊಂದಿಗೆ ಬಳಕೆದಾರರಿಗೆ ZEE5 ಪ್ರೀಮಿಯಂ ಮತ್ತು Vi ಮೂವೀಸ್ ಮತ್ತು ಟಿವಿಗೆ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತದೆ.
ಇದರ ಹೊರತಾಗಿ, ಬಳಕೆದಾರರು 'ವೀಕೆಂಡ್ ಡೇಟಾ ರೋಲ್‌ಓವರ್' ಮತ್ತು 'ಬಿಂಜ್ ಆಲ್ ನೈಟ್' ಪ್ರಯೋಜನಗಳನ್ನು ಮೊದಲಿನಂತೆಯೇ ಪಡೆಯಲಿದ್ದಾರೆ. ಕಂಪನಿಯು ಈಗಷ್ಟೇ ಡಬಲ್ ಡೇಟಾ ಕೊಡುಗೆಯನ್ನು ತೆಗೆದುಹಾಕಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಬಳಕೆದಾರರಿಗೆ ಈ ಬದಲಾವಣೆಯನ್ನು ಅಳವಡಿಸಲಾಗಿದೆ.
ಇದನ್ನೂ ಓದಿ : Whatsapp: ಮೇಕ್ ಓವರ್ ಪಡೆಯುತ್ತಿದೆ ವಾಟ್ಸಾಪ್! ಫೋಟೋ ಎಡಿಟಿಂಗ್ ಪರಿಕರಗಳು ಸೇರಿದಂತೆ ಇವೆಲ್ಲವೂ ಹೊಸದಾಗಿರುತ್ತವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.