ಬೆಂಗಳೂರು:  ಒಂದೆಡೆ, ಜಿಯೋ ಮತ್ತು ಏರ್‌ಟೆಲ್ ತಮ್ಮ 5G ಸೇವೆಯನ್ನು ಹೊರತಂದಿವೆ. ಆದರೆ, ವೊಡಾಫೋನ್ ಐಡಿಯಾ 5ಜಿ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಏರ್‌ಟೆಲ್-ಜಿಯೋಗೆ ಟಕ್ಕರ್ ನೀಡಿ ಆಕರ್ಷಕ ಪ್ಲಾನ್ ಅನ್ನು  ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ವೊಡಾಫೋನ್ ಐಡಿಯಾದ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ಬಿಡುಗಡೆ:
ವೊಡಾಫೋನ್ ಐಡಿಯಾ 296 ರೂ.ಗಳ 30 ದಿನಗಳ ಜಬರ್ದಸ್ತ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.  ಈ ಪ್ಲಾನ್‌ನಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯಿರಿ.


ಇದನ್ನೂ ಓದಿ- ಹೋಳಿಯಲ್ಲಿ ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸಲು ಸುವರ್ಣಾವಕಾಶ


ವೋಡಾಫೋನ್-ಐಡಿಯಾ 296ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ಪ್ರಯೋಜನಗಳು:
>> ವೊಡಾಫೋನ್ ಐಡಿಯಾದಿಂದ ಬಿಡುಗಡೆ ಆಗಿರುವ 296 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ನೊಂದಿಗೆ ಲಭ್ಯವಾಗಲಿದೆ.
>> ಈ ಯೋಜನೆಯಲ್ಲಿ 30 ದಿನಗಳ ವ್ಯಾಲಿಡಿಟಿ ಲಭ್ಯವಿದೆ. 
>> ಈ ಯೋಜನೆಯಲ್ಲಿ, ದೈನಂದಿನ ಡಾಟಾ ಬದಲಿಗೆ ಇಡೀ ತಿಂಗಳ ಡೇಟಾ ಏಕಕಾಲದಲ್ಲಿ ಲಭ್ಯವಿರುತ್ತದೆ. 
>>  25GB ಡೇಟಾ ಏಕಕಾಲದಲ್ಲಿ ಲಭ್ಯವಿದೆ. ಆದರೆ, ಬಳಕೆದಾರರು ಡೇಟಾವನ್ನು ಎಚ್ಚರಿಕೆಯಿಂದ ಬಳಸುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ  ಡೇಟಾ ತ್ವರಿತವಾಗಿ ಕೊನೆಗೊಳ್ಳಬಹುದು.
>> ಡೇಟಾ ಖಾಲಿಯಾದ ನಂತರ, ನಿಮಗೆ 1MB ಗೆ 50 ಪೈಸೆ ವಿಧಿಸಲಾಗುತ್ತದೆ.
 
ಇದನ್ನೂ ಓದಿ- Jio ಕಂಪನಿಯ ಅತ್ಯಂತ ಅಗ್ಗದ ಪ್ಲಾನ್ ಇದು, ನೆಟ್ಫ್ಲಿಕ್ಸ್-ಪ್ರೈಮ್ ವಿಡಿಯೋ ಸೇರಿದಂತೆ ಅನಿಯಮಿತ ಕರೆ ಮತ್ತು 200ಜಿಬಿ ಡೇಟಾ!


ಏರ್‌ಟೆಲ್ ಮತ್ತು ಜಿಯೋ ಯೋಜನೆಗಳ ಪ್ರಯೋಜನಗಳು:
ಏರ್‌ಟೆಲ್ ಮತ್ತು ಜಿಯೋ ಸಹ 296 ರೂ.ಗಳ ಯೋಜನೆಯನ್ನು ಹೊಂದಿವೆ. ವೊಡಾಫೋನ್-ಐಡಿಯಾದಂತೆ ಈ ಎರಡೂ ಕಂಪನಿಗಳ ಯೋಜನೆಯಲ್ಲೂ ಅನ್ಲಿಮಿಟೆಡ್ ಕಾಲ್, ದೈನಂದಿನ 100 ಎಸ್ಎಂಎಸ್ ಸೌಲಭ್ಯ ಲಭ್ಯವಿರಲಿದೆ. ಬಳಕೆದಾರರು ತಮ್ಮ ಯೋಜನೆಗಳಲ್ಲಿ 25GB ಡೇಟಾವನ್ನು ಸಹ ಪಡೆಯುತ್ತಾರೆ. ಆದರೆ 5ಜಿಯಿಂದಾಗಿ ಡೇಟಾ ಹೆಚ್ಚು ಕಾಲ ಉಳಿಯುವುದಿಲ್ಲ. ಹೆಚ್ಚಿನ ಡೇಟಾ ಪಡೆಯಲು ಗ್ರಾಹಕರು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.