Cheapest Vi Monthly Recharge Plan - ಏರ್‌ಟೆಲ್ ಇತ್ತೀಚೆಗೆ ತನ್ನ ಪ್ರಿಪೇಯ್ಡ್ ರೀಚಾರ್ಜ್ ಪೋರ್ಟ್‌ಫೋಲಿಯೊಗೆ ಕೆಲವು ಹೊಸ ಮಾಸಿಕ ಯೋಜನೆಗಳನ್ನು ಸೇರಿಸಿದೆ. ಅವುಗಳಲ್ಲಿ ರೂ.109 ರ ಪ್ಲಾನ್ ಅತ್ಯಂತ ಅಗ್ಗದ ಪ್ಲಾನ್ ಆಗಿದೆ. ಇದಲ್ಲದೆ, 111 ಮತ್ತು 131 ರೂಗಳ ಮಾಸಿಕ ಪ್ಯಾಕ್‌ಗಳು ಸಹ ಪಟ್ಟಿಯಲ್ಲಿವೆ. ಆದರೆ, ಕಡಿಮೆ ಬೆಲೆಯಿಂದಾಗಿ 109 ರೂ.ಗಳ ಯೋಜನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 


COMMERCIAL BREAK
SCROLL TO CONTINUE READING

ನೀವು ಈ ಯೋಜನೆಯನ್ನು ಇತರ ಖಾಸಗಿ ಟೆಲಿಕಾಂ ಕಂಪನಿಗಳ ಯೋಜನೆಗಳೊಂದಿಗೆ ಹೋಲಿಕೆ ಮಾಡಿದರೆ,  ವೊಡಾಫೋನ್ ಐಡಿಯಾ ಯೋಜನೆಯಿಂದ ಈ ಯೋಜನೆಗೆ ಭಾರಿ ಹೊಡೆತ ಬೀಳುತ್ತದೆ.  ಹೇಗೆ ತಿಳಿದುಕೊಳ್ಳೋಣ ಬನ್ನಿ, 


ವೊಡಾಫೋನ್ ಐಡಿಯಾ ಕಂಪನಿಯ ಯಾವ ಯೋಜನೆ ಏರ್‌ಟೆಲ್‌ಗೆ ಪೈಪೋಟಿ ನೀಡಲಿದೆ?
ಏರ್‌ಟೆಲ್‌ನ ರೂ 109 ರ ಪ್ಲಾನ್, ಬೆಲೆ ಮತ್ತು ಪ್ರಯೋಜನಗಳ ಪ್ರಕಾರ, ವೊಡಾಫೋನ್-ಐಡಿಯಾನ ರೂ 107 ರ ಯೋಜನೆ ಅದಕ್ಕೆ ಭಾರಿ ಪೈಪೋಟಿ ನೀಡುತ್ತದೆ. ವೊಡಾಫೋನ್ ಐಡಿಯಾ ಕಂಪನಿ ನಿಮಗೆ ಏರ್‌ಟೆಲ್‌ನ ಅದೇ ಪ್ರಯೋಜನಗಳನ್ನು 2 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿಯಲ್ಲಿ ಒದಗಿಸುತ್ತದೆ. ನಿಮ್ಮ ಅನುಕೂಲಕ್ಕಾಗಿ, ನಾವು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಯೋಜನೆಗಳನ್ನು ಒಟ್ಟಿಗೆ ಹೋಲಿಕೆಯನ್ನು ಮಾಡಿದ್ದೇವೆ.


ಇದನ್ನೂ ಓದಿ-ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ 32 ಇಂಚಿನ ಈ Smart TV..!


ಏರ್‌ಟೆಲ್ ರೂ 109 VS ವೊಡಾಫೋನ್ ಐಡಿಯಾದ ರೂ 107 ರೀಚಾರ್ಜ್ ಯೋಜನೆ
ಏರ್‌ಟೆಲ್ ಇತ್ತೀಚೆಗೆ 109 ರೂಗಳ ಅಗ್ಗದ ಮಾಸಿಕ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರಿಗೆ 30 ದಿನಗಳ ಮಾನ್ಯತೆಯೊಂದಿಗೆ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ. ಪ್ರಯೋಜನಗಳ ಕುರಿತು ಹೇಳುವುದಾದರೆ, ಈ ಯೋಜನೆಯಲ್ಲಿ ರೂ 99 ಟಾಕ್ ಟೈಮ್ ಮತ್ತು 200MB ಡೇಟಾದ ಲಭ್ಯವಿದೆ. ಇದಲ್ಲದೆ, ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಬಳಕೆದಾರರಿಗೆ ಸೆಕೆಂಡಿಗೆ 2.5 ಪೈಸೆ ವಿಧಿಸಲಾಗುತ್ತದೆ.


ಇದನ್ನೂ ಓದಿ-ಉಚಿತವಾಗಿ ಸಿಗುತ್ತಿದೆ iPhone 12! ಮಾಡಬೇಕಾಗಿರುವುದು ಇಷ್ಟೇ


ಇನ್ನೊಂದೆಡೆ ವೊಡಾಫೋನ್-ಐಡಿಯಾ ಕಂಪನಿಯು ಬಳಕೆದಾರರಿಗೆ ರೂ 107 ರ ಯೋಜನೆಯನ್ನು 2 ಕಡಿಮೆ ಬೆಲೆಗೆ ನೀಡುತ್ತಿದೆ, ಇದು ಏರ್‌ಟೆಲ್‌ನ ಯೋಜನೆಯಂತೆಯೇ ಅದೇ ಪ್ರಯೋಜನಗಳೊಂದಿಗೆ ಬರುತ್ತದೆ. ಆದರೆ, ಏರ್‌ಟೆಲ್‌ನ ಯೋಜನೆಯು ಬಳಕೆದಾರರಿಗೆ ಕೇವಲ 99 ರೂಗಳ ಟಾಕ್‌ಟೈಮ್ ಅನ್ನು ನೀಡುತ್ತದೆ, ಆದರೆ ವೊಡಾಫೋನ್ ಐಡಿಯಾ ಕಂಪನಿಯು ಬಳಕೆದಾರರಿಗೆ ರೂ 107 ರ ಸಂಪೂರ್ಣ ಟಾಕ್‌ಟೈಮ್ ಅನ್ನು ಒದಗಿಸುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ