ನವದೆಹಲಿ : Vodafone Idea (Vi) ಭಾರತದಾದ್ಯಂತ ವಾಸಿಸುವ ಪ್ರಿಪೇಯ್ಡ್ ಗ್ರಾಹಕರಿಗೆ  599 ರೂ. ಯ ಪ್ರಿಪೇಯ್ಡ್ ಯೋಜನೆಯನ್ನು (prepaid plan) ನೀಡುತ್ತದೆ. ಈ ಯೋಜನೆಯ ವಿಶೇಷತೆಯೆಂದರೆ ಇದು 70 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಡೇಟಾಗೆ ಸಂಬಂಧಿಸಿದಂತೆ, ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಮತ್ತು 1.5GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ವೊಡಫೋನ್ ನೀಡುವ ಈ ಪ್ಲಾನ್ ಮುಂದೆ ಜಿಯೋ (JIo) ಮತ್ತು ಏರ್‌ಟೆಲ್‌ನ ಯೋಜನೆಗಳು (Airtel plan) ವಿಫಲವಾಗಿವೆ. 


COMMERCIAL BREAK
SCROLL TO CONTINUE READING

ಯೋಜನೆಯೊಂದಿಗೆ  ಲಭ್ಯವಿವೆ ಅನೇಕ ಪ್ರಯೋಜನಗಳು :
ಡೇಟಾ ಡಿಲೈಟ್‌ಗಳು, ವೀಕೆಂಡ್ ರೋಲ್‌ಓವರ್ ಮತ್ತು ಬಿಂಜ್ ಆಲ್ ನೈಟ್ ಆಫರ್‌ಗಳನ್ನು ಒಳಗೊಂಡಿರುವ Vi Hero ಅನ್‌ಲಿಮಿಟೆಡ್ ಪ್ರಯೋಜನಗಳನ್ನು ಈ ಯೋಜನೆ ಕೂಡಾ ಒಳಗೊಂಡಿದೆ. ಬಳಕೆದಾರರ ಡೇಟಾ ಬಳಕೆಯ ಅನುಭವವನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ಹೆಚ್ಚುವರಿ ಕೊಡುಗೆಗಳನ್ನು ನೀಡಲಾಗಿದೆ. ಈ ಯೋಜನೆಯು ಜಿಯೋ (Jio) ಮತ್ತು ಏರ್‌ಟೆಲ್‌ನ 84 ದಿನಗಳ ಯೋಜನೆಗಿಂತ (airtel recharge plan) ಉತ್ತಮವಾಗಿದೆ.


ಇದನ್ನೂ ಓದಿ : Ptron Smart Watches: ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ವಾಚ್ ಬಿಡುಗಡೆ..!


Vi ಯ ಯೋಜನೆಯ ಮುಂದೆ ಸಪ್ಪೆಯಾದ Jio, Airtel ಪ್ಲಾನ್ :
14 ದಿನ ಹೆಚ್ಚಿನ ಸೇವೆ ಪಡೆಯಲು ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಜಿಯೋದ 666 ರೂ. ಮತ್ತು ಏರ್‌ಟೆಲ್  719 ರೂ. ಯೋಜನೆಯೊಂದಿಗೆ 84 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಆ ಯೋಜನೆಗಳಲ್ಲಿ 1.5 GB ಡೇಟಾ ಸಹ ಲಭ್ಯವಿದೆ. ಅದಕ್ಕಾಗಿಯೇ Vi ನ  599 ರೂ. ಪ್ಲಾನ್ ಉತ್ತಮವಾಗಿ ಕಾಣುತ್ತದೆ. Vi ತನ್ನ ಯೋಜನೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಕೊಡುಗೆಗಳನ್ನು ನೀಡುತ್ತಿದೆ. Vi ನ 84 ದಿನಗಳ ಯೋಜನೆಯು 1.5GB ದೈನಂದಿನ ಡೇಟಾಗೆ  719 ರೂ. ವೆಚ್ಚವಾಗಿದ್ದರೆ, 70 ದಿನಗಳ ಯೋಜನೆಯು ಗ್ರಾಹಕರಿಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತಿದೆ.


Vi ನ  599 ರೂ. ಪ್ಲಾನ್‌ನ ಪ್ರಯೋಜನಗಳು :
599 ರೂ. ಯೋಜನೆಯು Vi Movies ಮತ್ತು TV ​​ಕ್ಲಾಸಿಕ್‌ನ ಓವರ್-ದಿ-ಟಾಪ್ (OTT) ಪ್ರಯೋಜನಗಳನ್ನು ಸಹ ಒಳಗೊಂಡಿದೆ. ಕಡಿಮೆ ಖರ್ಚು ಮಾಡಿ, ಮಧ್ಯಮ ಅವಧಿಗೆ ಪ್ರಿಪೇಯ್ಡ್ ಯೋಜನೆ (prepaid plan) ಹಾಕಿಸುವುದಾದರೆ, ವೊಡಫೋನ್ ಐಡಿಯಾದ  599 ರೂ. ಯೋಜನೆಯು ಉತ್ತಮ ಆಯ್ಕೆಯಾಗಿದೆ. Viಯ 599 ರು. ಪ್ಲಾನ್ ಅನ್ನು ಆರಿಸಿಕೊಂಡರೆ, ಮೊಬೈಲ್ ಸೇವೆಗಳಿಗಾಗಿ ದಿನಕ್ಕೆ  8.56 ರೂ ಖರ್ಚು ಮಾಡಿದಂತಾಗುತ್ತದೆ.  


ಇದನ್ನೂ ಓದಿ : BSNL Recharge Plan: ಇತರೆ ಟೆಲಿಕಾಂ ಕಂಪನಿಗಳ ಪ್ಲಾನ್ ಬಿಗಡಾಯಿಸಿದ BSNL, ಈ ಪ್ಲಾನ್ ಮೇಲೆ ನೀಡುತ್ತಿದೆ 90 ದಿನಗಳ Extra Validity


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.