ನವದೆಹಲಿ : Vodafone-Idea ಕೆಲವು ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ. ಅದು ಪ್ರತಿಸ್ಪರ್ಧಿ ಕಂಪನಿ ಗಳು ನೀಡುವ ಪ್ಲಾನ್ ಗಿಂತ ಉತ್ತಮವಾಗಿದೆ. ಪ್ರಿಪೇಯ್ಡ್ (prepaid plan) ಸುಂಕದ ಹೆಚ್ಚಳದ ನಂತರ, ಅನೇಕ ಯೋಜನೆಗಳು ಅವುಗಳ ಪ್ರಯೋಜನಗಳು ಮತ್ತು ಬೆಲೆಗಳಲ್ಲಿ ಭಾರೀ ಬದಲಾವಣೆಗಳಾಗಿವೆ. ನೀವು ಕೂಡಾ 300 ರೂ. ಒಳಗಿನ ಅಲ್ಪಾವಧಿಯ ಯೋಜನೆಯನ್ನು ಹುಡುಕುತ್ತಿದ್ದರೆ, ಜಿಯೋದ  296 ರೂ ಪ್ಲಾನ್ (Vodafone-Idea plan) ಉತ್ತಮ ಆಯ್ಕೆಯಾಗಿದೆ. ಆದರೆ ವೊಡಾಫೋನ್ ಐಡಿಯಾವು ಮೇಲೆ ತಿಳಿಸಿದ ಜಿಯೋ ಯೋಜನೆಗಿಂತ ಉತ್ತಮವಾದ ಯೋಜನೆಯನ್ನು ಹೊಂದಿದೆ. 


COMMERCIAL BREAK
SCROLL TO CONTINUE READING

ರಿಲಯನ್ಸ್ ಜಿಯೋದ 296 ರೂ ಪ್ಲಾನ್ : 
ರಿಲಯನ್ಸ್ ಜಿಯೋ (Reliance Jio)  ತನ್ನ  296 ರೂ ಯೋಜನೆಯೊಂದಿಗೆ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು 25GB ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಬಳಕೆದಾರರು ಯಾವುದೇ ದೈನಂದಿನ ಡೇಟಾ ಬಳಕೆಯ ಮಿತಿಯ ಬಗ್ಗೆ ಚಿಂತಿಸಬೇಕಾಗಿಲ್ಲ. ಜಿಯೋದ 296 ರೂ. ಯೋಜನೆಯು 30 ದಿನಗಳ ಮಾನ್ಯತೆಯನ್ನು ಹೊಂದಿದೆ. 25GB ಡೇಟಾ ಬಳಕೆಯ ನಂತರ, ಬಳಕೆದಾರರ ಇಂಟರ್ನೆಟ್ ವೇಗವು 64 Kbps ಗೆ ಇಳಿಯುತ್ತದೆ. JioTV, JioCinema, JioSecurity ಮತ್ತು JioCloud ಸೇರಿದಂತೆ ನಾಲ್ಕು Jio ಅಪ್ಲಿಕೇಶನ್‌ಗಳಿಗೆ ಬಳಕೆದಾರರು ಉಚಿತ ಆಕ್ಸೆಸ್ ಪಡೆಯುತ್ತಾರೆ.


ಇದನ್ನೂ ಓದಿ : 5G Service: ಇಂಟರ್ನೆಟ್ ಬಳಕೆದಾರರಿಗೆ ಸಿಹಿ ಸುದ್ದಿ! ಹೊಸ ವರ್ಷದಲ್ಲಿ ಈ ನಗರಗಳಲ್ಲಿ ಆರಂಭವಾಗಲಿದೆ 5ಜಿ ಸೇವೆ


ವೊಡಾಫೋನ್ ಐಡಿಯಾ 299 ರೂ ಯೋಜನೆ :
ವೊಡಾಫೋನ್ ಐಡಿಯಾದ ಪ್ರಿಪೇಯ್ಡ್ (Vodafone-Idea prepaid plan) ಯೋಜನೆಯು ಜಿಯೋದ 296ರೂ. ಪ್ರಿಪೇಯ್ಡ್ ಯೋಜನೆಗಿಂತ ಉತ್ತಮವಾಗಿದೆ.  ವೊಡಾಫೋನ್ ಐಡಿಯಾದ  299 ರೂ. ಪ್ಲಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ 1.5GB ದೈನಂದಿನ ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು ಪಡೆಯಬಹುದಾದ ಒಟ್ಟು ಡೇಟಾವು 42GB ಆಗಿದೆ. ಇದು ಅಂದರೆ Jio ನ 296 ರೂ ಯೋಜನೆಗಿಂತ ಹೆಚ್ಚಾಗಿರುತ್ತದೆ. 


ಇದರ ಹೊರತಾಗಿ, ಬಳಕೆದಾರರು ಡೇಟಾ ಡಿಲೈಟ್‌ಗಳು, ವೀಕೆಂಡ್ ಡೇಟಾ ರೋಲ್‌ಓವರ್ ಮತ್ತು ಬಿಂಜ್ ಆಲ್ ನೈಟ್ ಕೊಡುಗೆಗಳನ್ನು ಸಹ ಇದರೊಂದಿಗೆ ಪಡೆಯುತ್ತಾರೆ. ಈ ಯೋಜನೆಯು Vi Movies ಮತ್ತು TV ​​ಕ್ಲಾಸಿಕ್‌ಗೆ ಕಾಂಪ್ಲಿಮೆಂಟರಿ ಓವರ್-ದಿ-ಟಾಪ್ (OTT) ಅಕ್ಸೆಸ್ ನೊಂದಿಗೆ ಬರುತ್ತದೆ. ಇಲ್ಲಿ Vi ಯ ಯೋಜನೆಯು Jio ಯೋಜನೆಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.


ಇದನ್ನೂ ಓದಿ : ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತದೆಯೇ?; ಹಾಗಾದರೆ ಹೀಗೆ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.