Maruti WagonR Vs Celerio : ಕಾರು ಖರೀದಿಸಲು ಯೋಚಿಸುತ್ತಿದ್ದವರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ. ಎರಡು ಪ್ರಸಿದ್ಧ ಕಾರುಗಳ ಹೋಲಿಕೆಯನ್ನು ಇಲ್ಲಿ ನೀಡಲಾಗಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಸೆಲೆರಿಯೊ ಎರಡೂ ಜನಪ್ರಿಯ ಕಾರುಗಳಾಗಿವೆ.  ವ್ಯಾಗನ್ಆರ್ ಕಂಪನಿಯ ಅತ್ಯುತ್ತಮ ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಆದರೆ ಮಾರಾಟದ ಅಂಕಿ ಅಂಶವನ್ನು ಗಮನಿಸಿದರೆ  ಸೆಲೆರಿಯೋ  ಕೆಳಮಟ್ಟದಲ್ಲಿದೆ.  


COMMERCIAL BREAK
SCROLL TO CONTINUE READING

ಈ ಎರಡು ಕಾರುಗಳ ಬೆಲೆ, ಎಂಜಿನ್ ಮತ್ತು ಮೈಲೇಜ್ ವಿವರಗಳನ್ನು   ನೋಡೋಣ: 
ಬೆಲೆ ವಿವರಗಳು :
ವ್ಯಾಗನ್ಆರ್ ಬೆಲೆ 5.52 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದರ ಟಾಪ್ ವೆರಿಯೇಂಟ್ ಗೆ 7.31 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ, ಸೆಲೆರಿಯೊ ಬೆಲೆ 5.37 ಲಕ್ಷದಿಂದ ಪ್ರಾರಂಭವಾದರೆ ಟಾಪ್ ವೆರಿಯೇಂಟ್ ಗೆ 7.15 ಲಕ್ಷ ನೀಡಬೇಕಾಗುತ್ತದೆ. ಎರಡೂ ಕಾರುಗಳು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡೂ ರೂಪಾಂತರಗಳಲ್ಲಿ  ಬರುತ್ತದೆ. ವ್ಯಾಗನ್ಆರ್ ನಲ್ಲಿ ಡ್ಯುಯಲ್ ಟೋನ್ ಕಲರ್ ಆಯ್ಕೆ ಲಭ್ಯವಿದ್ದರೆ,  ಸೆಲೆರಿಯೊದಲ್ಲಿ ಈ ಆಪ್ಷನ್ ಇರುವುದಿಲ್ಲ. 


ಇದನ್ನೂ ಓದಿ : 7 ಸೀಟರ್ ಬಿಟ್ಟುಬಿಡಿ.. ಬಂದೇಬಿಡ್ತು 10 ಸೀಟರ್’ನ ಬೆಸ್ಟ್ ಕಾರು: ಹಿಂದೆಂದೂ ಕಂಡಿರದ ವೈಶಿಷ್ಟ್ಯ; ಭಾರಿ ಅಗ್ಗದ ಬೆಲೆಯಲ್ಲಿ!


ಎಂಜಿನ್ : 
ಸೆಲೆರಿಯೊ 998cc, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದರಲ್ಲಿ ಸಿಎನ್‌ಜಿ ಆಯ್ಕೆಯೂ ಇದೆ. ಪೆಟ್ರೋಲ್‌ನಲ್ಲಿ ಇದರ ಪವರ್ ಔಟ್‌ಪುಟ್ 67PS/89Nm ಆಗಿದೆ. ಇನ್ನು CNGಯಲ್ಲಿ ಇದು 56.7PS/82Nm ಆಗಿದೆ. ಇದು 5-ಸ್ಪೀಡ್ ಮ್ಯಾನುವಲ್ (ಸ್ಟ್ಯಾಂಡರ್ಡ್) ಮತ್ತು 5-ಸ್ಪೀಡ್ AMT ಆಯ್ಕೆಯೊಂದಿಗೆ ಬರುತ್ತದೆ.  ಆದರೆ CNG ರೂಪಾಂತರವು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರುತ್ತದೆ.


ಆದರೆ, ವ್ಯಾಗನ್ಆರ್ ಎರಡು ಎಂಜಿನ್ ರೂಪಾಂತರಗಳಲ್ಲಿ ಲಭ್ಯವಿದೆ. ಅವುಗಳೆಂದರೆ 1-ಲೀಟರ್ ಪೆಟ್ರೋಲ್ (67PS ಮತ್ತು 89Nm) ಮತ್ತು 1.2-ಲೀಟರ್ ಪೆಟ್ರೋಲ್ (90PS ಮತ್ತು 113Nm). 1-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ CNG ಆಯ್ಕೆ ಸಿಗುತ್ತದೆ. CNGಯಲ್ಲಿ ಇದರ ಪವರ್ ಔಟ್‌ಪುಟ್ 57PS ಮತ್ತು 82.1Nm ಆಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ. 


ಇದನ್ನೂ ಓದಿ : Vastu Tips: ಮೊಬೈಲ್ ವಾಲ್ ಪೇಪರ್ ನಲ್ಲಡಗಿದೆ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ!


ಮೈಲೇಜ್ :
ಸೆಲೆರಿಯೊ (ಪೆಟ್ರೋಲ್) 26 kmpl ಮೈಲೇಜ್ ನೀಡಿದರೆ ಸೆಲೆರಿಯೊ (CNG) 35 kmpl ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ವ್ಯಾಗನ್ಆರ್ ಪೆಟ್ರೋಲ್ ಮೇಲೆ 25 kmpl ಮತ್ತು CNG ಮೇಲೆ 34 kmpl ಮೈಲೇಜ್ ನೀಡುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.